-1.1 C
New York
Saturday, December 21, 2024

Buy now

spot_img

ನಾಗಮಂಗಲ l ಮಳೆಗಾಗಿ ಕತ್ತೆ ಮದುವೆ

ನಾಗಮಂಗಲ :- ರಾಜ್ಯದ ವಿವಿದೆಡೆ ಮುಳೆರಾಯ ಕೃಪೆ ತೋರಿದ್ದರೂ ಬರದ ನಾಡು ನಾಗಮಂಗಲಕ್ಕೆ ಮಳೆಯ ನಿರೀಕ್ಷೆಯೇ ಹುಸಿಯಾದ ಹಿನ್ನೆಲೆಯಲ್ಲಿ ನಾಗಮಂಗಲ ಪಟ್ಟಣದ ಜನತೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಮೇಗಲಕೇರಿ ಬಡಗೂಡಮ್ಮ ದೇವಾಲಯ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶುಭ ಲಗ್ನದಲ್ಲಿ ಕತ್ತೆಗಳಿಗೆ ಮದುವೆ ಮಾಡಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಮೇಗಲಕೆರಿ ಬಡಗುಡುಮ್ಮ ದೇವಾಲಯದಲ್ಲಿ ಬ್ರಾಹ್ಮಣ ಸಮುದಾಯದವರು ವಿಶೇಷ ಪೂಜೆಯನ್ನು ಸಲ್ಲಿಸಿ ಶುಭ ಲಗ್ನದಲ್ಲಿ ಕತ್ತೆಗಳಿಗೆ ಮದುವೆ ಮಾಡಿಸಿದರು ಮಳೆರಾಯನನ್ನು ಪ್ರತಿಷ್ಠಾಪನೆ ಮಾಡಿ ಹಿರಿಯ ನಾಗರಿಕ ರಾಮಕೃಷ್ಣ ರವರ ಮೇಲೆ ಮಳೆರಾಯನನ್ನು ಪ್ರತಿಷ್ಠಾಪಿಸಿ ಪ್ರಮುಖ ಬೀದಿಯ ಪ್ರತಿ ಮನೆಗೆ ಹೋಗಿ ಮಳೆರಾಯನ ಪೂಜೆ ಮಾಡಿದರು.
ಸೌಮ್ಯಕೇಶವಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ತೀರು ನಾರಾಯಣ್ ಮಾತನಾಡಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿಮಳೆ ಕೈಕೊಟ್ಟಿದೆ ಆದ್ದರಿಂದ ದೇವರಲ್ಲಿ ಪ್ರಾರ್ಥಿಸಿಕೊಂಡು ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಗ್ರಾಮದ ಮುಖಂಡ ರಂಗಸ್ವಾಮಿ ಮಾತನಾಡಿ ನಾಡಿನ ಎಲ್ಲೆಡೆ ಮಳೆ ಸುರಿದಿದೆ ನಾಗಮಂಗಲದಲ್ಲಿ ಮಳೆಯ ಕೊರತೆ ಇದ್ದು ರೈತರು ಕಂಗಲಾಗಿದ್ದಾರೆ ಆದ್ದರಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ಮಳೆರಾಯನನ್ನು ಪ್ರಾರ್ಥಿಸಿಕೊಂಡಿದ್ದೇವೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles