6.5 C
New York
Saturday, December 28, 2024

Buy now

spot_img

ಚಿಕ್ಕಅಂಕನಹಳ್ಳಿ ಕೊಲೆ ಪ್ರಕರಣ : ಅಪರಾಧಿಗಳಿಗೆ ಜೈಲು ಶಿಕ್ಷೆ

ಶ್ರೀರಂಗಪಟ್ಟಣ :- ತಾಲ್ಲೂಕಿನ  ಚಿಕ್ಕಅಂಕನಹಳ್ಳಿಯಲ್ಲಿ ನಡೆದಿದ್ದ ಶ್ರೀಧರ್ ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶ್ರೀರಂಗಪಟ್ಟಣದ 3 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಚಿಕ್ಕಂಕನಹಳ್ಳಿ ಗ್ರಾಮದ ಸೋಮಶೇಖರ್ ಮತ್ತು ಶಿವರಾಜುಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಜವರಯ್ಯ,ಅವಿನಾಶ್, ಪ್ರಮೋದ್ ಗೆ ಮೂರು ವರ್ಷ  ಶಿಕ್ಷೆ ಘೋಷಿಸಿದೆ.
ಶ್ರೀರಂಗಪಟ್ಟಣ ತಾಲೂಕು ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ 2014ನೇ ಜನವರಿ 12 ರಂದು ರಾತ್ರಿ 8 ರ ಸಮಯದಲ್ಲಿ ಅಂಬೇಡ್ಕರ್ ಭವನದ ಬಳಿ ಚಾಮಯ್ಯ ಎಂಬಾತ ಮೂತ್ರ ವಿರ್ಸಜನೆ ಮಾಡಿದ್ದ ವಿಚಾರದಲ್ಲಿ ಪ್ರಕಾಶ್  ಅಕ್ಷೇಪ ಮಾಡಿದ್ದರು, ಇದೆ ವಿಚಾರದಲ್ಲಿ ಕೋಪಗೊಂಡ  ಜವರಯ್ಯ, ಸೋಮಶೇಖರ, ಶಿವರಾಜು, ಅವಿನಾಶ, ಪ್ರಮೋದ, ರಾಜು,ಮರಿನಂಜ, ನಟರಾಜು, ರಾಮ, ಲಕ್ಷ್ಮಣ, ಜವರಯ್ಯ, ಮಹೇಶ್, ನಾಗರಾಜ ಎಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದ ವೇಳೆ  ಅರಕೆರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸಿದ್ದೇಗೌಡ ಹಾಗೂ ಉಮೇಶ್  ಸ್ಥಳಕ್ಕೆ ಹೋಗಿ ಗಲಾಟೆ ಬಿಡಿಸಿದರೂ ಸಹ  ಪೊಲೀಸರಿಗೆ ಹಲ್ಲೆ ಮಾಡಿ ದ್ದಲ್ಲದೆ  ಶ್ರೀಧರ್ ಅಲಿಯಾಸ್ ಕೆಂಚಪ್ಪ ನನ್ನ ಕೊಲೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಅಂದಿನ  ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕ  ಸಿ.ಟಿ.ಜಯಕುಮಾರ್ ಆರೋಪಿಗಳ ವಿರುದ್ಧ ದೋಷಾರೋಪಣೆ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆಯು 3 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೋಮಶೇಖರ, ಶಿವರಾಜು ಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದು ಇದೇ ಪ್ರಕರಣದಲ್ಲಿ  ಜವರಯ್ಯ,ಅವಿನಾಶ, ಪ್ರಮೋದ್ ಗೆ 3 ವರ್ಷ ಕಾರಗೃಹ ಶಿಕ್ಷೆಯನ್ನು ಪ್ರಕಟಿಸಿದೆ.ಜೀವಾವಧಿ ಶಿಕ್ಷೆಗೆ ಗುರಿಯಾದ ಸೋಮಶೇಖರ್ ಮತ್ತು ಶಿವರಾಜುರನ್ನ ಬಂಧನಕ್ಕೆ ಒಳಪಡಿಸಿದ್ದರೆ,  ಮೂರು ವರ್ಷ ಶಿಕ್ಷೆಗೆ ಒಳಗಾದದವರಿಗೆ ಜಾಮೀನು ನೀಡಲಾಗಿದೆ.
ಸರ್ಕಾರಿ ಅಭಿಯೋಜಕಿ  ಪ್ರಫುಲ್ಲಾ ರವರು ವಾದ ಮಂಡಿಸಿರುತ್ತಾರೆ. ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸಿದ ಶ್ರೀರಗಪಟ್ಟಣ ವೃತ್ತ ಮತ್ತು ಅರಕೆರೆ ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸೇವೆಯನ್ನು  ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಶ್ಲಾಘಿಸಿ ಪ್ರಶಂಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles