ನಾಗಮಂಗಲ :- ಅಕ್ರಮ ಕಲ್ಲು ಗಣಿಗಾರಿಕೆಯಿಂದ ವಿರುದ್ಧ ನಿರ್ಲಕ್ಷ್ಯ ವಹಿಸಿರುವ ತಹಸಿಲ್ದಾರ್ ಕೃಷಿ ಜಮೀನಿನ ಅಳತೆ ಮಾಡಿಸಿ ನ್ಯಾಯ ದೊರಕಿಸಿ ಕೊಡುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಾಗಮಂಗಲದಲ್ಲಿ ತಮಟೆ ಚಳವಳಿ ನಡೆಸಲಾಯಿತು.
ಪಟ್ಟಣದ ವೈಭವ್ ಹೋಟೆಲ್ ಬಳಿಯಿಂದ ಮೆರವಣಿಗೆ ಹೊರಟು ಆಡಳಿತ ಸೌಧದ ವರೆಗೆ ತೆರಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸುಬ್ರಮಣ್ಯ ಮತ್ತು ನಾಗೇಶ್ ರನ್ನು ತರಾಟೆ ತೆಗೆದುಕೊಂಡರು ತಾಲೂಕಿನ ಕಾಂತಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕನಹಳ್ಳಿ ಗ್ರಾಮದ ಸರ್ವೇ ನಂಬರ್ 54/ಪಿ ಹಾಗೂ ಪಿ/1 ರ ಕೃಷಿ ಜಮೀನಿನ ಪಕ್ಕ ಅಕ್ರಮ ಕಲ್ಲು ಗಣಿಗಾರಿಕೆ ಅನುಮತಿ ನೀಡಿಲಾಗಿದೆ ಇದರಿಂದ ಜಮೀನು ಮಾಲೀಕರಾದ ಮಹದೇವಮ್ಮ ಕುಟುಂಬಸ್ಥರಿಗೆ ಅಕ್ರಮ ಕಲ್ಲಿಗಣಿಗಾರಿಕೆ ದಂಧೆ ಕೋರರು ಕಿರುಕುಳ ನೀಡುತ್ತಿದ್ದು ಈ ಸಂಬಂಧ ಹಲವು ಬಾರಿ ದೊಡ್ಡ ಮಟ್ಟದ ಗಲಾಟೆಗಳಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕು ದಂಡಾಧಿಕಾರಿ ಗಳಿಗೆ ಹತ್ತಾರು ಬಾರಿ ದೂರು ಸಲ್ಲಿಸಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಿ ಕೃಷಿ ಜಮೀನಿಗೆ ಅಳತೆಯ ಮೂಲಕ ಭದ್ರತೆ ವಹಿಸಬೇಕೆಂದು ಮನವಿ ಮಾಡಿಕೊಂಡರು ಸಹ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ದಲಿತ ಸಂಘರ್ಷ ಸಮಿತಿಯ.ಕಂಚಿನ ಕೋಟೆ ಮೂರ್ತಿ,ಕ್ಯಾತನಹಳ್ಳಿ ಮಂಜುನಾಥ್ ನೇತೃತ್ವ ವಹಿಸಿದ್ದರು.