-1.4 C
New York
Saturday, December 21, 2024

Buy now

spot_img

ರಾಗಿಮುದ್ದನಹಳ್ಳಿ ಬಳಿ ಹೆದ್ದಾರಿಯಿಂದ ಹಳ್ಳಕ್ಕೆ ನುಗ್ಗಿದ ಬಸ್ : ಚಾಲಕ ಸೇರಿ ಹಲವರು ಗಾಯ

ಮಂಡ್ಯ :- ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಟೋಲ್‌ ಹೆದ್ದಾರಿಯಿಂದ ಸರ್ವೀಸ್‌ ರಸ್ತೆಗೆ ನುಗ್ಗಿ ಹಳ್ಳಕ್ಕೆ ಬಿದ್ದಿರುವ ಘಟನೆ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಂಡ್ಯದಿಂದ ಮೈಸೂರಿನ ಕಡೆಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಚಾಲಕ ಶೇಖರ್ ಕಾಲು ಮುರಿದಿದ್ದರೆ, ಕಂಡಕ್ಟರ್ ರವಿಚಂದ್ರ ಸೇರಿದಂತೆ ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಗಾಯಗೊಂಡಿದ್ದಾರೆ.
ಸರ್ಕಾರಿ ಬಸ್ ರಾಗಿಮುದ್ದನಹಳ್ಳಿ ಗ್ರಾಮದ ಟೋಲ್‌ ರಸ್ತೆಯಲ್ಲಿ ತೆರಳುತ್ತಿದ್ದಾಗ ಸ್ಟೇರಿಂಗ್‌ ರಾಡ್‌ ಕಟ್‌ ಆಗಿದ ತಕ್ಷಣವೇ ಚಾಲಕ ಹರಸಾಹಸಪಟ್ಟು ಬಸ್‌ ನಿಯಂತ್ರಣ ತೆಗೆದುಕೊಳ್ಳಲು ಹೋಗಿದ್ದು, ಬಸ್‌ ವೇಗದಲ್ಲಿದ್ದ ಕಾರಣ ಸರ್ವೀಸ್‌ ರಸ್ತೆಗೆ ಇಳಿದು ಹಳ್ಳಕ್ಕೆ ನುಗ್ಗಿದೆ.
ಬಸ್‌ ನುಗ್ಗಿದ ರಭಸಕ್ಕೆ ಕಾರು, ಮೂರು ಬೈಕ್‌ಗಳು ಜಖಂ ಆಗಿವೆ, ಅಲ್ಲೇ ಪಕ್ಕದಲ್ಲಿ ಅಂಗಡಿ ಹೋಟೆಲ್‌ ಬಳಿ ನಿಂತಿದ್ದ ರಾಗಿಮುದ್ದನಹಳ್ಳಿ ಗ್ರಾಮದ ಕೆಂಪೇಗೌಡ, ಕೋಡಿಶೆಟ್ಟಿಪುರದ ಕುಮಾರ ಅವರ ಬೈಕ್‌ಗಳಿಗೂ ಬಸ್‌ ಡಿಕ್ಕಿ ಹೊಡೆದುಕೊಂಡು ಹೋಗಿ ಹಳ್ಳಕ್ಕೆ ಹೋಗಿದೆ. ಈ ಎಲ್ಲ ಘಟನೆ ಪಕ್ಕದಲ್ಲಿದ್ದ ಕಾರದ ಪುಡಿ ಕಾರ್ಖಾನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಲು ಮುರಿತಕ್ಕೊಳಗಾದ ಬಸ್ ಚಾಲಕ ಸೇರಿದಂತೆ ಗಾಯಾಳು ಏಳು ಪ್ರಯಾಣಿಕರನ್ನು ಮಂಡ್ಯ ನಗರ ಮಿಮ್ಸ್‌ಗೆ ಗ್ರಾಮಸ್ಥರ ಸಹಕಾರದಿಂದ ಆಂಬ್ಯುಲೆನ್ಸ್‌ನಲ್ಲಿ ಕರೆತರಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles