12.3 C
New York
Wednesday, March 19, 2025

Buy now

spot_img

ತೆಂಗು ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮುದ್ದುರಾಜು,ಉಪಾಧ್ಯಕ್ಷರಾಗಿ ಶೇಖರ್ ಆಯ್ಕೆ

ನಾಗಮಂಗಲ :- ನಾಗಮಂಗಲ ತೆಂಗು ಮತ್ತು ತೆಂಗು ತೋಟದ ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಮಾಜಿ ಶಾಸಕ ಸುರೇಶಗೌಡ ಬೆಂಬಲಿತ ಕಸಲಗೆರೆ ಮುದ್ದುರಾಜು ಹಾಗೂ ಉಪಾಧ್ಯಕ್ಷರಾಗಿ ಗೋವಿಂದಘಟ್ಟದ ಯುವ ರೈತ ಮುಖಂಡ ಶೇಖರ್ ಅಯ್ಕೆಯಾದರು.ನೂತನ ಅಧ್ಯಕ್ಷರಾದ ಕಸಲಗೆರೆ ಮುದ್ದುರಾಜು ಮಾತನಾಡಿ ರೈತರ ಪರವಾಗಿರುವ  ತೆಂಗು ಬೆಳೆಗಾರರ ಸಂಘವು ಅಭಿವೃದ್ಧಿ ಹೊಂದಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ, ಸಂಘದ ನಿರ್ದೇಶಕರು ಮತ್ತು  ಷೇರುದಾರರಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.
ತಾಲೂಕಿನ ವ್ಯಾಪ್ತಿಯಲ್ಲಿ ಲಕ್ಷಾಂತರ ರೈತರು ಇದ್ದರು ಸಹ  ಕೇವಲ ಸಾವಿರ ಸಂಖ್ಯೆಯಲ್ಲಿ ಷೇರುದಾರರು ಇದ್ದಾರೆ, ಷೇರು ಸಂಗ್ರಹ ಉದ್ದೇಶದಿಂದ  ಪ್ರತಿ ಗ್ರಾಮದ ರೈತರ ಬಳಿ ತೆರಳಿ  ಷೇರುದಾರರನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸಂಘ ಪ್ರಬಲವಾಗಲು ಶ್ರಮಿಸುವೆ ಎಂದರು
ನೂತನ ಉಪಾಧ್ಯಕ್ಷ ಶೇಖರ್ ಮಾತನಾಡಿ  ಸಂಘವು ರೈತರ ಪರವಾಗಿ ನಿಲ್ಲಬೇಕಾಗಿದೆ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ನೇರವಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು
ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸಂಘದ ನಿರ್ದೇಶಕರು ಅಭಿನಂದನೆ ಸಲ್ಲಿಸಿದರು.ತೆಂಗು ಬೆಳೆಗಾರರ ಸಂಘದ ನಿರ್ದೇಶಕರಾದ ರಾಮಕೃಷ್ಣೇಗೌಡ. ಕವನ. ಜಯರಾಮೇಗೌಡ. ಎಸ್ ಕೆ ನಾಗೇಶ್. ಯೋಗೇಶ್. ಜಯರಾಮ. ವರಲಕ್ಷಮ್ಮ. ಧನರಾಜ್. ಬಿಳಿಕೋಸ್. ಕಚೇರಿ ಸಿಬ್ಬಂದಿಗಳಾದ ಸುರೇಶ್ ಮತ್ತು ದೇವೇಗೌಡ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles