ಮಂಡ್ಯ :- ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಣ್ಣೇಗಾಲ ಗ್ರಾಮದ ಶೇಖರ್, ಕ್ಯಾತಘಟ್ಟದ ಕೃಷ್ಣ, ವೆಂಕಟೇಶ್ ರನ್ನ ಬಂದಿಸಲಾಗಿದ್ದು, ಇವರಿಂದ ಅಂದಾಜು 47 ಲಕ್ಷ ಮೌಲ್ಯದ 670 ಗ್ರಾಂ ಚಿನ್ನ, 170 ಗ್ರಾಂ ಬೆಳ್ಳಿ ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಹೊಸಕೆ ಪಡೆಯಲಾಗಿದೆ,ಬಂಧಿತ ಮೂವರು ಕಳ್ಳರು ಜಿಲ್ಲೆಯ ವಿವಿಧೆಡೆ 14 ಮನೆಗಳಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಮಳವಳ್ಳಿ ತಾಲೂಕು ಕಿರುಗಾವಲು ಸಂತೆಮಾಳದ ನಿವಾಸಿ ಮರಿ ಸಿದ್ದೇಗೌಡರ ಪತ್ನಿ ಕಮಲಮ್ಮ ಮಾರ್ಚ್ ತಿಂಗಳಲ್ಲಿ ಮನೆಗೆ ಬೇಗ ಹಾಕಿಕೊಂಡು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದರು ಈ ವೇಳೆ ಹೊಂಚು ಹಾಕಿದ್ದ ಶೇಖರ್, ಕೃಷ್ಣ ಹಾಗೂ ವೆಂಕಟೇಶ್ ಮನೆಯ ಬಾಗಿಲು ಮುರಿದು ಒಳ ನುಗ್ಗಿ ಗಾಡ್ರೆಜ್ ಬೀರು ಬಾಗಿಲು ಮುರಿದು 50 ಗ್ರಾಂ ಚಿನ್ನದ ಆಭರಣ ಹಾಗೂ 80,000 ನಗದು ದೋಚಿದ್ದರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕಮಲಮ್ಮ ದೂರು ದಾಖಲಿಸಿದ್ದರು.
ಕಳ್ಳತನ ಪ್ರಕರಣ ಭೇದಿಸಲು ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಸಿ. ಇ. ಗಂಗಾಧರ ಸ್ವಾಮಿ, ಉಪ ಪೊಲೀಸ್ ಅಧೀಕ್ಷಕ ವಿ.ಕೃಷ್ಣ ಮಾರ್ಗದರ್ಶನದಲ್ಲಿ ಹಲಗೂರು ವೃತ ನಿರೀಕ್ಷಕ ಶ್ರೀಧರ್ ಬಿ,ಎಸ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರವಿಕುಮಾರ್.ಡಿ,ಅಶೋಕ್ ವಿ. ಸಿ, ಮಹೇಂದ್ರ ಬಿ ಮತ್ತು ಅಪರಾಧ ಪತ್ತೆ ದಳ ಸಿಬ್ಬಂದಿಗಳ ವಿಶೇಷ ತಂಡ ರಚನೆ ಮಾಡಲಾಗಿತ್ತು,
ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂದಿಸಿದ್ದು ಇದರಿಂದ ತಿರ್ಗಾವ್ ಠಾಣೆ ವ್ಯಾಪ್ತಿಯಲ್ಲಿ ಮೂರು, ಹಲಗೂರು ಠಾಣೆ ವ್ಯಾಪ್ತಿಯಲ್ಲಿ ನಾಲ್ಕು, ಬೆಳಕವಾಡಿ ಠಾಣೆ ವ್ಯಾಪ್ತಿಯಲ್ಲಿ ಒಂದು, ಮಳವಳ್ಳಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಮೂರು, ಮಳವಳ್ಳಿ ಟೌನ್, ಕೆ ಎಂ ದೊಡ್ಡಿ ಮತ್ತು ಬೆಸಗರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವೃತ ನಿರೀಕ್ಷಕ ಶ್ರೀಧರ್ ಬಿ ಎಸ್, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರವಿಕುಮಾರ್ ಡಿ, ಅಶೋಕ್ ವಿ ಸಿ, ಮಹೇಂದ್ರ ಬಿ, ಸಿದ್ದರಾಜು, ಪೊಲೀಸ್ ಸಹಾಯಕ ಇನ್ ಸ್ಪೆಕ್ಟರ್ ಸಿದ್ದರಾಜು ಮತ್ತು ಸಿಬ್ಬಂದಿಗಳಾದ ರಿಯಾಜ್ ಪಾಷಾ, ಪ್ರಭುಸ್ವಾಮಿ, ನಾಗೇಂದ್ರ ಎಂ ಕೆ, ಮಹಾದೇವ, ಜಯಕುಮಾರ್, ಮಹೇಶ್, ಶ್ರೀನಿವಾಸ್, ಮೋಹನ್ ಕುಮಾರ್, ಉಮೇಶ, ಸಿದ್ದರಾಜು, ಕೌಶಿಕ್, ವಿಠಲ, ಅರುಣ್, ಸುಬ್ರಮಣಿ, ಮಹೇಂದ್ರ, ಶ್ರೀನಿವಾಸ್, ಮಧು ಕಿರಣ್, ಶಿವಕುಮಾರ್ ಎನ್ ಸಿ, ರವಿಕಿರಣ್, ಲೋಕೇಶ್, ಮಹದೇವಸ್ವಾಮಿ, ಪ್ರೀತಿ ಕುಮಾರ್, ನರಸಿಂಹಮೂರ್ತಿ, ಶಿವರಾಜುರ ಸೇವೆಯನ್ನು ಶ್ಲ್ಯಾಘಿಸುವುದಾಗಿ ತಿಳಿಸಿದರು.