19.9 C
New York
Sunday, October 6, 2024

Buy now

spot_img

ಸ್ಥಳೀಯ ಕಲಾವಿದರ ಕಡೆಗಣನೆ ವಿರುದ್ಧ ಪ್ರತಿಭಟನೆ

ಮಂಡ್ಯ :- ಗಗನಚುಕ್ಕಿ ಜಲಪಾತೋತ್ಸವ ಹಾಗೂ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಿರುವುದನ್ನು ಖಂಡಿಸಿ ಕಲಾವಿದರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ವಿ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ವಿವಿಧ ಕಲಾ ಪ್ರಕಾರಗಳ ಕಲಾವಿದರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಬ್ಬ, ಜಯಂತೋತ್ಸವ, ಸಮ್ಮೇಳನ ಹಾಗೂ ಉತ್ಸವಗಳಲ್ಲಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಿ ಇವೆಂಟ್ಸ್ ಮ್ಯಾನೇಜ್ಮೆಂಟ್ ಗಳಿಗೆ ಕಾರ್ಯಕ್ರಮಗಳನ್ನು ಒಪ್ಪಿಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ಸರ್ಕಾರಿ ಕಾರ್ಯಕ್ರಮ, ಜಯಂತಿ, ಸಮಾವೇಶ ಸಮ್ಮೇಳನ ಉತ್ಸವ ಗಳಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಬೇಕು, ಕಲಾವಿದರಿಂದ ಅರ್ಜಿ ಆಹ್ವಾನಿಸುವ ಬದಲು ಕಲಾವಿದರು,ಕಲಾತಂಡಗಳ ಪಟ್ಟಿ ಮಾಡಿ ಎಲ್ಲರಿಗೂ ಸಮಾನಾಂತರವಾಗಿ ಕಾರ್ಯಕ್ರಮ ನೀಡಬೇಕು, ಸಂಭಾವನೆ ವಿಚಾರದಲ್ಲಿ ಶೋಷಣೆ ತಪ್ಪಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಪ್ ಕಲಾ ಪ್ರಕಾರಗಳಿಗೆ ನೀಡುತ್ತಿರುವ ಸಂಭಾವನೆ ಕ್ರಮ ಅನುಸರಿಸಿ ಸಂಭಾವನೆ ನೀಡಬೇಕು, ಕಾರ್ಯಕ್ರಮ ನಡೆದ 15 ದಿನದ ಒಳಗಾಗಿ ಸಂಭಾವನೆ ನೀಡಬೇಕು, ಕಲಾ ಪ್ರದರ್ಶನದ ವೇಳೆ ಕಲಾವಿದರಿಗೆ ಕುಡಿಯುವ ನೀರು, ಊಟ, ವಸತಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಲಾವಿದರಿಗೆ ನೀಡುವ ಸ್ಥಾನಮಾನ ಗೌರವವನ್ನು ಸ್ಥಳೀಯ ಕಲಾವಿದರಿಗೂ ನೀಡಬೇಕು, ಕಲಾವಿದ, ಕಲಾತಂಡಗಳನ್ನು ನೇರ ಸಂಪರ್ಕಿಸಿ ಕಾರ್ಯಕ್ರಮ ನೀಡುವ ಮೂಲಕ ಮಧ್ಯವರ್ತಿ ಹಾವಳಿ ತಪ್ಪಿಸಬೇಕು, ಜಿಲ್ಲೆಯ ಜನಪ್ರತಿನಿಧಿಗಳು ವಿಶೇಷ ಪ್ರೋತ್ಸಾಹ ನೀಡುವ ಮೂಲಕ ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಉಸ್ತವಗಳಿಗೆ ಜಿಲ್ಲೆಯ ಕಲಾವಿದರನ್ನು ಶಿಫಾರಸು ಮಾಡಬೇಕು, ಶಾಮಿಯಾನ,ಧ್ವನಿ ವರ್ದಕ, ದೀಪಾಲಂಕಾರ,ವಸ್ರಲಂಕಾರ, ಪೌರಾಣಿಕ, ಸಾಮಾಜಿಕ ಡ್ರಾಮಾ ಸೀನರಿ ಮಾಲೀಕರು ಕಲಾವಿದರಿಗೆ ಜೀವನ ಭದ್ರತೆ ಇಲ್ಲದೆ ಇರುವುದರಿಂದ ಇವರಿಗೆ ಹೆಚ್ಚು ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ಕಲಾವಿದರಾದ ಸಂತೆ ಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ಎಚ್ ಪಿ ವೈರಮುಡಿ, ತಗಳ್ಳಿ ವೆಂಕಟೇಶ್, ಕುಮಾರಿ,ಲಂಕೇಶ್, ಕಾರಸವಾಡಿ ಮಹದೇವ, ಸುರೇಶ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles