0.6 C
New York
Tuesday, December 3, 2024

Buy now

spot_img

ಹುಂಜನಕೆರೆಯಲ್ಲಿ ದೇವಾಲಯದ ಗೇಟ್ ಬಿದ್ದು ಐದು ವರ್ಷದ ಬಾಲಕ ದುರ್ಮರಣ

ಶ್ರೀರಂಗಪಟ್ಟಣ :- ಕಾರ್ತಿಕ ಮಾಸದ ಪೂಜೆಗೆ ಪೋಷಕರ ಜೊತೆ ತೆರಳಿದ್ದ ಐದು ವರ್ಷದ ಬಾಲಕನ ಮೇಲೆ ದೇವಾಲಯದ ಗೇಟ್ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ಹುಂಜನ ಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೆಚ್.ಜೆ ಸಿದ್ದರಾಜು -ಸುಮಿತ್ರ ದಂಪತಿಗಳ ಪುತ್ರ ಜಿಷ್ಣು ಹೆಚ್.ಎಸ್ (5) ಸಾವನ್ನಪ್ಪಿದ ದುರ್ದೈವಿ ಬಾಲಕನಾಗಿದ್ದಾನೆ.
ಚಿನ್ಮಯ ವಿದ್ಯಾಲಯದಲ್ಲಿ ಎಲ್ ಕೆ ಜಿ ಓದುತ್ತಿದ್ದ ಜಿಷ್ಣು ಹೆಚ್.ಎಸ್  ಸ್ವಗ್ರಾಮ ಹುಂಜನ ಕೆರೆಯ ಚೆನ್ನಕೇಶವ ದೇವಾಲಯದಲ್ಲಿ ಎರಡನೇ ಕಾರ್ತಿಕ ಸೋಮವಾರದ ವಿಶೇಷ ಪೂಜೆ ಇದ್ದುದ್ದರಿಂದ ಪೋಷಕರ ಜೊತೆ ದೇವಾಲಯಕ್ಕೆ ತೆರಳಿದ್ದನು.
ದೇವಾಲಯದ ಆವರಣ ಗೋಡೆಯ ಕಬ್ಬಿಣದ ಗೇಟ್ ಶಿಥಿಲಾವಸ್ಥೆ ಗೊಂಡಿದ್ದು ಅದನ್ನು ದುರಸ್ಥಿ ಮಾಡಿರಲಿಲ್ಲ, ದೇವಾಲಯ ಆವರಣದಲ್ಲಿ ಮಗು ಆಟವಾಡುತ್ತಿದ್ದರೆ,ಪೋಷಕರು ವಿಶೇಷ ಪೂಜೆ ಕಡೆ ಹೆಚ್ಚು ಗಮನಹರಿಸಿದ್ದರು ಇದೇ ವೇಳೆ ಶಿಥಿಲಾವಸ್ಥೆ ಗೇಟ್ ಬಳಿ ತೆರಳಿ ಅದನ್ನು ಹಿಡಿದುಕೊಂಡಾಗ ಮಗುವಿನ ಮೇಲೆ ಬಿದ್ದಿದ್ದು,ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ,
ಗಾಯಗೊಂಡ ಬಾಲಕನ ಚೀರಾಟ ಯಾರಿಗೂ ಕೇಳಿಸಿಲ್ಲ, ಸ್ವಲ್ಪ ಹೊತ್ತಿನ ನಂತರ ಮಗು ಕಾಣದಿದ್ದಾಗ ಪೋಷಕರ ಹುಡುಕಿದಾಗ ಗೇಟಿನ ಕೆಳಗಡೆ ಮಗು ಸಿಲುಕಿರುವುದು ಕಂಡು ಬಂದಿದ್ದು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಅರಕೆರೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles