0.6 C
New York
Tuesday, December 3, 2024

Buy now

spot_img

ರಾಗಿಮುದ್ದನಹಳ್ಳಿಯಲ್ಲಿ ಮನೆಗೆ ನುಗ್ಗಿ ಕಳವು

ಮಂಡ್ಯ :- ಮನೆಯವರು ದೇವಾಲಯಕ್ಕೆ ಹೋಗಿರುವುದನ್ನು ಗಮನಿಸಿ 75 ಗ್ರಾಂ ಒಡವೆಗಳನ್ನು ಕಳ್ಳತನ ಮಾಡಿರುವ ಪ್ರಕರಣ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ಸಿದ್ದೇಗೌಡ ಮತ್ತು ರಾಧಾ ದಂಪತಿ ಮನೆಯಲ್ಲಿ ಕಳ್ಳತನವಾಗಿದ್ದು, ಬೀರುವಿನಲ್ಲಿ 15 ಗ್ರಾಂ ತೂಕದ ಮೂರು ಜೊತೆ ಓಲೆಗಳು, 10 ಗ್ರಾಂ ಕುತ್ತಿಗೆ ಚೈನ್ ಹಾಗೂ 50 ಗ್ರಾಂ ಸರ ಕಳ್ಳತನ ಮಾಡಲಾಗಿದೆ.
ದೊಡ್ಡ ಬಾಣಸವಾಡಿ ಗ್ರಾಮಕ್ಕೆ ಕಾರ್ತಿಕ ಮಾಸದ ಮನೆ ದೇವರ ಪೂಜೆಗೆ ಸಿದ್ದೇಗೌಡ ಕುಟುಂಬದವರು ತೆರಳಿದ್ದರು. ಈ ಸಂದರ್ಭವನ್ನೇ ಬಳಸಿಕೊಂಡ ಕಳ್ಳರು ಮನೆಯ ಹಿತ್ತಲಿನಿಂದ ನುಗ್ಗೇಮರದ ಮೇಲೇರಿ ಹೆಂಚುಗಳನ್ನು ತೆಗೆದು, ಜಂತಿಯನ್ನು ಕಿತ್ತು ಅಡುಗೆ ಮನೆಗಿಳಿದಿದ್ದಾರೆ‌.
ನಂತರ ಬೀರು ಬಾಗಿಲ್ಲನ್ನು ಅಲ್ಲಿಯೇ ಪಕ್ಕದಲ್ಲಿದ್ದ ಕೊಡಲಿಯಿಂದ ಒಡೆದು ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾರೆ. ಸರಿ ಸುಮಾರು ರಾತ್ರಿ 10.30 ಗಂಟೆಯ ಸುಮಾರಿನಲ್ಲಿ ಕಳ್ಳತನ ಮಾಡಿದ್ದು, ಪೂಜೆ ಮುಗಿಸಿ 11.15 ಗಂಟೆಗೆ ಗ್ರಾಮಕ್ಕೆ ಕುಟುಂಬ ಆಗಮಿಸಿದೆ.
ಮನೆಯೊಳಗೆ ಬಂದು ನೋಡಿದ ಸಿದ್ದೇಗೌಡ ಅವರ ಹೆಂಡತಿ ರಾಧ ಅವರಿಗೆ ಬೀರು ಮುರಿದಿರುವುದು, ಒಡವೆ ಬಾಕ್ಸ್ ಗಳು ಚೆಲ್ಲಾಡಿರುವುದು ಕಂಡುಬಂದಿದೆ. ಆದರೆ ಅಡುಗೆ ಮನೆಯಲ್ಲಿ 10 ಗ್ರಾಂ ತೂಕದ ಚಿನ್ನದ ಗುಂಡಿನ ಸರವನ್ನು ಕಳ್ಳರು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles