-8.1 C
New York
Sunday, December 22, 2024

Buy now

spot_img

ಮಂಡ್ಯ l ವಕ್ಫ್ ಕಾಯ್ದೆ ರದ್ದಿಗೆ ಆಗ್ರಹಿಸಿ ರ್‍ಯಾಲಿ

ಮಂಡ್ಯ :-  ರೈತರಿಗೆ ಮಾರಕವಾಗಿರುವ ವಕ್ಫ್  ಕಾಯ್ದೆ ರದ್ದಿಗೆ ಆಗ್ರಹಿಸಿ  ವಕ್ಫ್ ವಿರೋಧಿ ರೈತ ಒಕ್ಕೂಟದ ನೇತೃತ್ವದಲ್ಲಿ ಮಂಡ್ಯದಲ್ಲಿ  ರೈತ ಘರ್ಜನ  ರ್‍ಯಾಲಿ ನಡೆಯಿತು.
ನಗರದ ಸಿಲ್ವರ್ ಜೂಬಿಲಿ ಪಾರ್ಕಿನಿಂದ ರ್‍ಯಾಲಿ ಹೊರಟ ವಿವಿಧ ಸಂಘಟನೆಗಳ ಕಾರ್ಯಕರ್ತರು  ಜಿಲ್ಲಾಧಿಕಾರಿ ಕಚೇರಿ ವರೆಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು.
ರಾಜ್ಯದ  ಪ್ರತಿ ಜಿಲ್ಲೆಯಲ್ಲಿ ವಕ್ಸ್ ಬೋರ್ಡ್ ಮನಸೋ ಇಚ್ಛೆ ರೈತರು, ಸಾರ್ವಜನಿಕ ಜಮೀನುಗಳ ಪಹಣಿಗಳಲ್ಲಿ, ವಕ್ಸ್ ಆಸ್ತಿಯೆಂದು ದಾಖಲಿಸಿದ್ದಾರೆ ಅದೇ ರೀತಿ ದೇವಸ್ಥಾನ, ಸಂಘ ಸಂಸ್ಥೆ, ಸರ್ಕಾರಿ ಶಾಲೆ, ಕೆರೆಕುಂಟೆ, ಹಿಂದೂ ಸ್ಮಶಾನ ಭೂಮಿ, ಪುರಾತನ ಸ್ಮಾರಕ, ಮಠ ಮಂದಿರಗಳ ಜಮೀನು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು  ಯಾವುದೆ’ ದಾಖಲೆಗಳು ಇಲ್ಲದಿದ್ದರೂ ಸಹ ಇಂತಹ ಆಸ್ತಿಗಳು ವಕ್ಸ್ ಆಸ್ತಿಗಳೆಂದು ನಮೂದಿಸುತ್ತಿದ್ದಾರೆ  ಸರ್ಕಾರದ ಇಂತಹ ನಡೆ  ರೈತರನ್ನು ಆತಂಕಕ್ಕೆ ದೂಡಿದ್ದು, ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸರ್ಕಾರ ನೋಟೀಸ್ ವಾಪಸ್ ಪಡೆಯಲಾಗುವುದು ಎಂದು ಹೇಳಿದ್ದರೂ ಸಹ  ನೋಂದಣಿ ಇಲಾಖೆಯಲ್ಲಿ ಪರಭಾರೆ ನಿಷೇಧ ಎಂದು ದಾಖಲು ಮಾಡಲಾಗುತ್ತಿದೆ,ಇದರಿಂದ ಮುಂದಿನ ದಿನಗಳಲ್ಲಿ ಆಸ್ತಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಾರಾಟ, ಅಡಮಾನ ಮಾಡಲು ತೊಂದರೆಯಾಗಲಿದೆ, ಕರ್ನಾಟಕ ಭೂ ಕಂದಾಯ ಕಾಯ್ದೆ 1961 ರ ಕಲಂ 127 ರಿಂದ 136 ರವರೆಗೆ ತಿಳಿಸಿರುವಂತೆ  ಯಾವುದೇ ಆಸ್ತಿಗೆ ಮಾಲೀಕತ್ವ ಸಾಬೀತುಪಡಿಸಲು ಸೂಕ್ತದಾಖಲೆಗಳನ್ನು ಒದಗಿಸಬೇಕು ಹಾಗೂ ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಿ ಇಬ್ಬರ ದಾಖಲೆಗಳನ್ನು ಪರಿಶಿಲಿಸಿ ಮಾಲೀಕತ್ವ ದೃಢೀಕರಿಸಬೇಕು  ಆದರೆ ಈಗಾಗಲೇ ಮಾಲೀಕತ್ವ ಹೊಂದಿರುವ ವ್ಯಕ್ತಿಗೆ ಯವುದೇ  ನೋಟೀಸ್ ನೀಡದೆ   ಆಸ್ತಿಗಳನ್ನೆಲ್ಲಾ ವಕ್ಸ್ ಬೋರ್ಡ್ ಆಸ್ತಿಗಳೆಂದು ರೆವಿನ್ಯೂ ದಾಖಲೆಗಳಲ್ಲಿ ನಮೂದಿಸುತ್ತಿರುವುದು  ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶಿಸಿದರು .
ರೈತರು ಮತ್ತು ಸಾರ್ವಜನಿಕ ಆಸ್ತಿಯನ್ನು ಕಬಳಿ ಸುತ್ತಿರುವ  ವಕ್ಸ್ ಯ್ದೆ ರದ್ದುಗೊಳಿಸಬೇಕು, ಸಂವಿಧಾನಕ್ಕೆ ಅನುಗುಣವಾಗಿ  ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು, ರೈತರ ಜಮೀನಿನ  ಪಹಣಿಗಳಲ್ಲಿ ನಮೂದಾಗಿರುವ  ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಎಂಬುದನ್ನು ಕೂಡಲೇ ತೆಗೆದು ಹಾಕಬೇಕು, ,ದೇವಸ್ಥಾನದ ಜಾಗಗಳನ್ನು ವಕ್ಸ್ ಬೋರ್ಡ್‌ನಿಂದ ಮುಕ್ತ ಗೊಳಿಸಬೇಕು ಎಂದು ಒತ್ತಾಯಿಸಿದರು.
ಗೋಮಾಳ,ಸಾರ್ವಜನಿಕ ಆಸ್ತಿ , ಮುಜರಾಯಿ ಇಲಾಖೆಗಳ ಆಸ್ತಿ, ಪಾರಂಪರಿಕ ತಾಣ,ಸರ್ಕಾರಿ ಕಛೇರಿ,ಶಾಲೆಗಳ ಜಾಗಗಳನ್ನು  ಶಾಶ್ವತವಾಗಿ ವಕ್ಸ್ ಬೋರ್ಡ್ ನಿಂದ ಮುಕ್ತ ಮಾಡಬೇಕು ವಕ್ಸ್ ಬೊರ್ಡ್ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಅರ್ಚಕ ಭಾನುಪ್ರಕಾಶ್ ಶರ್ಮ ಭಾರತೀಯ ಕಿಸಾನ್ ಸಂಘದ  ಹಾಡ್ಯ ರಮೇಶ್‌ ರಾಜು, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಡಿ ಎಂ ಹುಚ್ಚಯ್ಯ, ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕರಿ ರಮೇಶ್, ಸ್ವಾಭಿಮಾನ ದಲಿತ ಸಂಘರ್ಷ ಸಮಿತಿಯ ಉಮೇಶ್, ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್, ಜೈ ಕರ್ನಾಟಕ ಸಂಘದ ಅಧ್ಯಕ್ಷ ನಾರಾಯಣ್, ಕರ್ನಾಟಕ ರಾಜ್ಯ ರೈತ ಸಂಘದ ಸೊ ಸಿ ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆಯ ಅಶೋಕ್, ಜಿಲ್ಲಾ ಬ್ರಾಹ್ಮಣ ಸಭಾದ ಎಚ್ಎನ್ ನರಸಿಂಹಮೂರ್ತಿ  ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles