ಮಂಡ್ಯ :- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಹಾರ ನಿಷೇಧಿಸಿ ರುವುದನ್ನು ವಿರೋಧಿಸಿ ಮನೆಗೊಂದು ಕೋಳಿ ಊರಿಗೊಂದು ಕುರಿ ಸಂಗ್ರಹ ಅಭಯಾನಕ್ಕೆ ತಾಲೂಕಿನ ಹಳೆ ಬೂದನೂರು ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಂಸಹಾರಕ್ಕೆ ನಿರ್ಬಂಧ ಹಾಕಿದ ದಿನದಿಂದ ಬಾಡೂಟಕ್ಕೆ ಆಗ್ರಹಿಸುತ್ತಿದ್ದ ಬಾಡೂಟ ಬಳಗದ ಬೇಡಿಕೆಗೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಅಂದು ವಿಚಾರ ಕ್ರಾಂತಿ, ಇಂದು ಆಹಾರ ಕ್ರಾಂತಿ’ ಘೋಷಣೆಯಡಿ ಭಾಗವಹಿಸುವವರೆಗೆ ಮಾಂಸಹಾರ ನೀಡಲು ಮುಂದಾಗಿದ್ದು ಇದಕ್ಕಾಗಿ ಕೋಳಿ ಕುರಿ ಸಂಗ್ರಹಕ್ಕೆ ಮುಂದಾಗಿದೆ.
ಸಮ್ಮೇಳನ ನಡೆಯುವ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಸ್ಥಳದಿಂದ ಸುಮಾರು ಒಂದು ಕಿ ಮೀ ದೂರದಲ್ಲಿರುವ ಹಳೆ ಬೂದನೂರು ಗ್ರಾಮದಲ್ಲಿ ಬಾಡೂಟ ಬಳಗದ ಕೋಳಿ, ಕುರಿ ಸಂಗ್ರಹ ಅಭಿಯಾನಕ್ಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವಿ ಚಾಲನೆ ನೀಡಿದರು.
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಬಡಿಸಲು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಕುರಿ, ಕೋಳಿ ಸಂಗ್ರಹ ಪ್ರಾರಂಭಿಸಿದ್ದೇವೆ,ರಾಜ್ಯದಾದ್ಯಂತ ಸಮಾನ ಮನಸ್ಕರು ಕುರಿ, ಕೋಳಿ ಕೊಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಸುಮಾರು 5-6 ಟನ್ ಕೋಳಿ ಸಂಗ್ರಹವಾಗುವ ನಿರೀಕ್ಷೆಯಿದೆ. ಇದರಿಂದ 50 ಸಾವಿರದಿಂದ 1 ಲಕ್ಷ ಜನರಿಗೆ ಮಾಂಸಾಹಾರ ನೀಡಬಹುದು,ಸರ್ಕಾರ ಸಾಹಿತ್ಯ ಸಮ್ಮೇಳನದ ಆಹಾರ ಸಮಿತಿ ಮೂಲಕ ಮಾಂಸಾಹಾರ ನೀಡಲು ಮುಂದೆ ಬಂದರೆ ನಾವು ಸಂಗ್ರಹಿಸಿರುವ ಸಾಮಾಗ್ರಿಗಳನ್ನು ಅವರಿಗೆ ನೀಡುತ್ತೇವೆ. ಇಲ್ಲದಿದ್ದರೆ ನಾವೇ ಮಾಂಸಾಹಾರ ತಯಾರಿಸಿ ಸಾಹಿತ್ಯ ಸಮ್ಮೇಳನದ ಮೈದಾನದಲ್ಲೇ ವಿತರಿಸುತ್ತೇವೆ ಎಂದು ಎಚ್ಚರಸಿದ್ದಾರೆ.
ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ನಿಷೇಧವಿಲ್ಲ. ಆದರೂ ಅದನ್ನು ಕೀಳಾಗಿ ಕಾಣುತ್ತಿರುವುದನ್ನು ಹೋಗಲಾಡಿಸುವ ಹಾಗೂ ಆಹಾರದಲ್ಲಿ ಸಮಾನತೆ ತರುವ ಪ್ರಯತ್ನ ನಮ್ಮದು. ಸಾರ್ವಜನಿಕರ ಹಣವನ್ನು ಸಮ್ಮೇಳನದಲ್ಲಿ ಬಳಸುತ್ತಿದ್ದು, ಒಂದು ಮೊಟ್ಟೆ ಹಾಗೂ ಒಂದು ತುಂಡು ಮಾಂಸ ನೀಡಲು ಸಮಸ್ಯೆ ಏನಿದೆ’ ಎಂದು ಪ್ರಶ್ನಿಸಿದರು.
ಸಾಹಿತಿ ರಾಜೇಂದ್ರ ಪ್ರಸಾದ್, ಸಿಐಟಿಯುನ ಸಿ ಕುಮಾರಿ, ಕರುನಾಡ ಸೇವಕರ ಸಂಘಟನೆಯ ಎಂ ಬಿ ನಾಗಣ್ಣಗೌಡ, ವಕೀಲ ಲಕ್ಷ್ಮಣ್ ಚೀರನ ಹಳ್ಳಿ ನೇತೃತ್ವ ವಹಿಸಿದ್ದರು