0.3 C
New York
Wednesday, December 25, 2024

Buy now

spot_img

ಕೇಂದ್ರ ಸಚಿವ ಅಮಿತ್ ಶಾ ದೇಶದ ಜನರ ಕ್ಷಮೆಯಾಚಿಸಲಿ : ಬಿಎಸ್‌ಪಿ ಪ್ರತಿಭಟನೆ

ಮಂಡ್ಯ :- ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಸಂಸತ್ ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಅಮಿತ್ ಶಾ ದೇಶದ ಜನರ ಕ್ಷಮೆಯಾಚಿಸಬೇಕು ಹಾಗೂ ಅವರನ್ನು   ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ  ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಮಿತ್ ಶಾ ಧಿಕ್ಕಾರದ ಘೋಷಣೆ ಕೂಗಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ರವರಿಗೆ ಮನವಿ ಪತ್ರ ರವಾನಿಸಿದರು.
ಸಂವಿಧಾನ ಜಾರಿಯಾಗಿ 75 ವರ್ಷ ಸಂದ ಹಿನ್ನಲೆಯಲ್ಲಿ ಸಂಸತ್ತಿನ ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆ ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವಹೇಳನಾಕಾರಿಯಾಗಿ  ಮಾತನಾಡಿರುವುದು ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ ಜೊತೆಗೆ ಗೃಹ  ಸಚಿವರ ಹುದ್ದೆಯ ಘನತೆಗೂ ಅಗೌರವ ತೋರಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ಬಿ ಆರ್ ಅಂಬೇಡ್ಕರ್  ದೇಶದ ಜನತೆಗೆ ಎಂದಿಗೂ ಸಹ ರಲ್ಲ, ಅವರು ಎಂದೆಂದಿಗೂ ಜನರಿಗೆ ಸರ್ವಸ್ವ, ದೇಶದ ಶೋಷಿತರು,ಶೂದ್ರರು, ಮಹಿಳೆಯರು ಅಲ್ಪಸಂಖ್ಯಾತರು ಸೇರಿದಂತೆ ಸರ್ವ ಜನಾಂಗಕ್ಕೂ ನ್ಯಾಯ ಬದ್ಧ ಹಕ್ಕು, ಅಧಿಕಾರ, ಉದ್ಯೋಗ ದೊರಕಿರುವುದು ಅಂಬೇಡ್ಕರ್ ಅವರ ಹೋರಾಟದ ಪ್ರತಿಫಲ ಹಾಗಾಗಿ ಅವರು ನಮಗೆಲ್ಲ ಸ್ಫೂರ್ತಿ ದಾತರು, ಮಾರ್ಗದಾತರು ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಸಂವಿಧಾನ ಮತ್ತು ಬಾಬಾ ಸಾಹೇಬರ ಬಗ್ಗೆ ಆರ್ ಎಸ್ ಎಸ್ ಹಾಗೂ ಬಿಜೆಪಿ ಅಸಹನೆ ಹೊಂದಿರುವುದು ಅನೇಕ ಬಾರಿ ಸಾಬೀತಾಗಿದೆ, ಇದೀಗ ಕೇಂದ್ರ ಸಚಿವ ಅಮಿತ್ ಶಾ  ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯಅಪರಾಧವಾಗಿದ್ದು, ಅವರಿಗೆ ಸಚಿವರಾಗಿ ಮುಂದುವರೆಯುವ ನೈತಿಕತೆ ಇಲ್ಲ, ಈ ಕೂಡಲೇ ಅವರು ದೇಶದ ಜನರ ಕ್ಷಮೆಯಾಚಿಸಬೇಕು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮಿತ್ ಶಾ ರನ್ನು  ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು
ಪಕ್ಷದ ರಾಜ್ಯ ಕಾರ್ಯದರ್ಶಿ ಎಂ ಎಸ್ ವೆಂಕಟೇಶ್, ಜಿಲ್ಲಾ ಉಸ್ತುವಾರಿ ಚೆಲುವ ರಾಜು. ಜಿಲ್ಲಾ ಸಂಯೋಜಕ ಕೆ ಹೆಚ್ ಮಹಾದೇವು, ಜಿಲ್ಲಾಧ್ಯಕ್ಷ ಎಸ್  ಶಿವಶಂಕರ,ನಂಜುಂಡಸ್ವಾಮಿ, ಶಂಕರ್, ದಿನೇಶ್, ವೀರಭದ್ರ, ಸತೀಶ್, ಮಹಮ್ಮದ್ ಹನೀಫ್, ದೇವರಾಜು, ಬಸವರಾಜು ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles