0.8 C
New York
Friday, December 27, 2024

Buy now

spot_img

ಅಮಿತ್ ಶಾ ವಿರುದ್ಧ ಹಿಂದುಳಿದ ವರ್ಗಗಳ ವೇದಿಕೆ ಆಕ್ರೋಶ

ಮಂಡ್ಯ :- ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ಅವ ಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಅಮಿತ್ ಶಾ ರನ್ನ ಸಂಪುಟದಿಂದ ವಜಾಗೊಳಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ರವರಿಗೆ ಮನವಿ ಪತ್ರ ರವಾನಿಸಿದರು.
ವಿಶ್ವದ ಶ್ರೇಷ್ಠ ಜ್ಞಾನಿ ಡಾ. ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಹಗುರ ಮತ್ತು ಕೀಳು ಅಭಿರುಚಿಯಿಂದ ಅವ ಹೇಳನ ಮಾಡಿರುವುದು ಖಂಡನೀಯ, ಸಂವಿಧಾನಬದ್ಧವಾಗಿ ದೇಶದ ಆಂತರಿಕ ಭದ್ರತೆ ರಕ್ಷಿಸುವ ಗೃಹ ಇಲಾಖೆ ಮುಖ್ಯಸ್ಥರಾಗಿ ಸಂವಿಧಾನ ಶಿಲ್ಪಿಯನ್ನು ಹೀಯಾಳಿಸಿರುವುದು ಘೋರ ಅಪಮಾನ ಆಗಿದೆ ಅಲ್ಲದೆ ಸಂವಿಧಾನದ ಬಗ್ಗೆ ಅಮಿತ್ ಶಾರಿಗೆ ಇರುವ ಅಸಡ್ಡೆತನದ ಪ್ರದರ್ಶನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಂವಿಧಾನವನ್ನು ಬದಲಾಯಿಸುವ ಹಾಗೂ ತಿದ್ದುಪಡಿಗಳ ಮೂಲಕ ಸಂವಿಧಾನದ ಮೂಲ ಆಶಯವನ್ನು ತಿರುಚುವ ಕೆಲಸ ನಡೆಯುತ್ತಾ ಬಂದಿದೆ, ವಿಶೇಷವಾಗಿ ಕೃಷಿಕರು, ಮಹಿಳೆಯರು, ದಲಿತರು, ಹಿಂದುಳಿದವರು ಸೇರಿದಂತೆ ಅಸಹಾಯಕ ಸಮುದಾಯಗಳನ್ನು ಉದಾಸೀನವಾಗಿ ಕಾಣುತ್ತಾ ಶೋಷಣೆ ಮಾಡುತ್ತಾ ಬರಲಾಗಿದೆ, ಬಹುಜನರ ರಕ್ಷಾ ಕವಚವಾಗಿರುವ ಸಂವಿಧಾನದ ಬಗ್ಗೆ ಅಸಹನೆ ಹೊಂದಿರುವ ಮನುಸ್ಮೃತಿ ಪ್ರಭಾವಿತ ಬಿಜೆಪಿಯವರು ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಾ ಬಂದಿದ್ದಾರೆ ಇದೀಗ ಅದೇ ಪರಂಪರೆಯನ್ನು ಅಮಿತ್ ಶಾ ಮುಂದುವರಿಸಿದ್ದಾರೆ, ಇಂತಹ ನಡವಳಿಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮರ್ಥಿಸಿರುವುದು ರಾಷ್ಟ್ರೀಯ ದುರಂತ ಎಂದು ಕಿಡಿಕಾರಿದರು.
ಸ್ವತಂತ್ರ ಭಾರತ ನಿರ್ಮಾಣದಲ್ಲಿ ಮಹಾತ್ಮ ಗಾಂಧಿಯವರ ಅಹಿಂಸಾ ಸಂಗ್ರಾಮ ಮುಖ್ಯ ಪಾತ್ರ ವಹಿಸಿರುವಂತೆ ಮಾನವತೆ ಮತ್ತು ಸಮಾನತೆಯ ರಾಷ್ಟ್ರ ಕಟ್ಟುವಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರಚಿತ ಸಂವಿಧಾನ ಸರ್ವೋಚ್ಛ ಆಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರಿ ಮನಸ್ಥಿತಿಯ ದುಷ್ಟ ಶಕ್ತಿಗಳು ಸಂವಿಧಾನದ ಮೇಲೆ ದಾಳಿ ನಡೆಸುತ್ತಿರುವುದು ದುರದೃಷ್ಟಕರ, ಸಂಸತ್ ನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಅಮಿತ್ ಶಾ ರನ್ನು ಸಂಪುಟದಿಂದ ವಜಾಗೊಳಿಸಿ ಕಾನೂನು ಬದ್ಧವಾಗಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಎಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ಎಲ್ ಸಂದೇಶ್, ಪ್ರಧಾನ ಕಾರ್ಯದರ್ಶಿ ಎಂ ಕೃಷ್ಣ, ಜಿ ಪಂ ಮಾಜಿ ಅಧ್ಯಕ್ಷ ಬಿ ಲಿಂಗಯ್ಯ ಎಚ್ ಡಿ ಜಯರಾಮ್, ಅಮ್ಜದ್ ಪಾಷಾ, ಕೆ ಎನ್ ಪ್ರಭು, ಸಿದ್ದಶೆಟ್ಟಿ, ಎಂ ಎಸ್ ರಾಜಣ್ಣ, ಚನ್ನಪ್ಪ, ಡಿ ರಮೇಶ್,ಮರಿಯಪ್ಪ, ಚಿಕ್ಕ ಬೋರಪ್ಪ, ಹೇಮಾ, ಬಸವರಾಜ್, ಶಶಿಕುಮಾರ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles