-1.5 C
New York
Monday, January 6, 2025

Buy now

spot_img

ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ

ಮಂಡ್ಯ :- ರೈತರು ಬೆಳೆದ ಭತ್ತದ ಬೆಳೆಯನ್ನು ಕಟಾವು ಮಾಡಲಾಗಿದ್ದರೂ ಭತ್ತ  ಖರೀದಿ ಕೇಂದ್ರ ತೆರೆಯದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಂಘದ ಕಾರ್ಯಕರ್ತರು ಧರಣಿ ನಡೆಸಿ ರೈತ ಸಮೂಹಕ್ಕೆ ಮೋಸ ಮಾಡುತ್ತಿರುವ  ಸಚಿವರು,ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯಲ್ಲಿ ರೈತರು ಸುಮಾರು 57,000 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು,ಜುಲೈ ನಲ್ಲಿ ನಾಟಿ ಮಾಡಿದ ಬೆಳೆಯನ್ನು ನವೆಂಬರ್, ಡಿಸೆಂಬರ್ ನಲ್ಲಿ ಕಟಾವು ಮಾಡುತ್ತಾರೆ. ಆದರೆ ಆಳುವ ಸರ್ಕಾರ   ನವೆಂಬರ್ ತಿಂಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆದು  ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡದೆ ವಂಚನೆ ಮಾಡಿದೆ, ಭತ್ತ ಬೆಳೆಯಲು ಮಾಡಿದ ಸಾಲಕ್ಕಾಗಿ ಕಟಾವು ಮತ್ತು ಇನ್ನಿತರ ವೆಚ್ಚಕ್ಕಾಗಿ ಹಾಗೂ ಭತ್ರ ಸಂಗ್ರಹ ಮಾಡಿ  ಇಟ್ಟುಕೊಳ್ಳಲು ಮನೆಯಲ್ಲಿ ಸ್ಥಳದ ಅಭಾವದಿಂದ ಮಾರಾಟ ಮಾಡಲು ತರಾತುರಿಯಲ್ಲಿದ್ದು ಇಂತಹ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ದಲ್ಲಾಳಿಗಳು ಕ್ವಿಂಟಾಲ್ ಭತ್ತವನ್ನು 1800 ರಿಂದ 2000 ರೂ ಗೆ ಖರೀದಿ ಮಾಡುತ್ತಿದ್ದಾರೆ. ಪ್ರತಿ  ಕ್ವಿಂಟಾಲ್ ಗೆ 2300 ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಸಹ ರೈತರ ಅಸಹಾಯಕತೆಯನ್ನ ದುರುಪಯೋಗ ಪಡಿಸಿಕೊಂಡು ದಲ್ಲಾಳಿಗಳು ಕಡಿಮೆ ದರಕ್ಕೆ ಭತ್ತ ಖರೀದಿ ಮಾಡಿ ವಂಚನೆ ಮಾಡುತ್ತಿದ್ದರೂ ಸಹ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.
ಕೇರಳ ರಾಜ್ಯದಲ್ಲಿ  ಎಡರಂಗ ಸರ್ಕಾರ ಭತ್ತ ಬೆಳೆಯಲು ರೈತರಿಗೆ ಎಕರೆಗೆ 10,000 ಪ್ರೋತ್ಸಾಹ ಧನ ಮತ್ತು ಕ್ವಿಂಟಾಲ್ ಭತ್ತಕ್ಕೆ ಬೆಂಬಲ ಬೆಲೆಯ ಜೊತೆಗೆ ಹೆಚ್ಚುವರಿಯಾಗಿ 800 ರೂಗಳನ್ನು ನೀಡುತ್ತಿದೆ, ಆದರೆ ಕರ್ನಾಟಕದಲ್ಲಿ ರೈತರಿಗೆ  ಮೋಸ ಮಾಡಲಾಗುತ್ತಿದೆ,ಕಳೆದ ವರ್ಷ ಭತ್ತವನ್ನು ಪ್ರತಿ ಕ್ವಿಂಟಾಲ್ 3500 ರೂ ವರೆಗೆ ದಲ್ಲಾಳಿಗಳು ಖರೀದಿ ಮಾಡಿದ್ದರು ಇದೀಗ ಕೇವಲ   1800 ರಿಂದ 2000 ರೂ ಗೆ ಖರೀದಿ ಮಾಡುತ್ತಿದ್ದು ಇದರಿಂದ ಜಿಲ್ಲೆಯ ರೈತರಿಗೆ ಸುಮಾರು 250 ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದರು .
ಜಿಲ್ಲೆಯವರೇ ಕೃಷಿ ಮಂತ್ರಿ ಯಾಗಿದ್ದರೂ ಸಹ  ಕೃಷಿಕರಿಗೆ ಪ್ರಯೋಜನ ಇಲ್ಲ ದಂತಾಗಿದೆ,ಚಂಡಮಾರುತದಿಂದ ಅಕಾಲಿಕ ಮಳೆ ಯಿಂದ ಭತ್ತ ಬೆಳೆಗಾರರು ನಷ್ಟಕೆ ಒಳಗಾಗಿರುವ ಸಂದರ್ಭದಲ್ಲಿ  ಜಿಲ್ಲಾಡಳಿತ ತಹಸಿಲ್ದಾರ್, ಕೃಷಿ ಇಲಾಖೆ ಮೂಲಕ ಸಮೀಕ್ಷೆ ನಡೆಸಿ ನಷ್ಟದ ವರದಿ ಪಡೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ನೀಡಿಲ್ಲ ಆಳುವ ಸರ್ಕಾರ ಈ ಕೂಡಲೇ ಭತ್ತದ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಬೇಕು, ತುರ್ತಾಗಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಕ್ವಿಂಟಾಲ್ ಭತ್ತಕ್ಕೆ 3000 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು,ಕೇರಳದ ಎಡರಂಗ ಸರ್ಕಾರದ ಮಾದರಿಯಲ್ಲಿ ಪ್ರತಿ  ಎಕರೆಗೆ 10,000 ಪ್ರೋತ್ಸಾಹ ಧನ, ಹೆಚ್ಚುವರಿಯಾಗಿ  ಬೆಂಬಲ ಬೆಲೆಯ ಜೊತೆಗೆ ಕ್ವಿಂಟಾಲ್ ಗೆ 700 ರೂ ನೀಡಬೇಕು.ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವ ಖಾಸಗಿ ದಲ್ಲಾಳಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು,ಚಂಡಮಾರುತದ ಮಳೆಹಾನಿಗೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್ ಭರತ್ ರಾಜ್, ಸಹ ಸಂಚಾಲಕ ಎನ್ ಲಿಂಗರಾಜಮೂರ್ತಿ, ಮಹಾದೇವ ಎಂ ಇ, ಸತೀಶ್,  ಕುಳ್ಳೇಗೌಡ,ಗುರುಸ್ವಾಮಿ, ಶ್ರೀನಿವಾಸ್, ರಾಮಣ್ಣ, ಅಬ್ದುಲ್ ಸೂಕರ್, ದೊರೆಸ್ವಾಮಿ, ಎ ಎಲ್ ಶಿವಕುಮಾರ್, ಚಿಕ್ಕ ರಾಜಮ್ಮ  ಕೆ ಎಸ್ ಮೂರ್ತಿ, ಎಚ್ ಲಿಂಗೇಗೌಡ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles