ಮಂಡ್ಯ :- ರಾಷ್ಟ್ರನಾಯಕ,ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಸಂಸತ್ತಿನಲ್ಲಿ ಅವಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಅಗ್ರಹಿಸಿ ದಲಿತ,ರೈತ, ಅಲ್ಪಸಂಖ್ಯಾತ, ಕಾರ್ಮಿಕ, ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ಕರೆ ನೀಡಿದ್ದ ಮಂಡ್ಯ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿ ಸಂಪೂರ್ಣ ಶಾಂತಿಯುತವಾಗಿ ನಡೆಯಿತು
ನಗರದ ಹಲವೆಡೆ ವರ್ತಕರ ಜೊತೆ ಮಾತಿನ ಚಕಮಕಿ, ಮಾಲ್ ಗೆ ನುಗ್ಗಲು ಯತ್ನ, ವ್ಯಾಪಾರ ವಹಿವಾಟಿಗೆ ಅಡ್ಡಿ ಸೇರಿದಂತೆ ಸಣ್ಣಪುಟ್ಟ ಅಹಿತಕರ ಘಟನೆ ನಡೆದರೆ ಸಂಪೂರ್ಣ ಶಾಂತಿಯುತವಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಮೇಲೆ ಬಂದ್ ಪರಿಣಾಮ ಬೀರಿತು ಇನ್ನುಳಿದಂತೆ ಜನಜೀವನ ಸಾರಿಗೆ ವ್ಯವಸ್ಥೆ, ಸರ್ಕಾರಿ ಸೇವೆ, ಶಾಲಾ-ಕಾಲೇಜು, ಬ್ಯಾಂಕ್ ಸೇರಿದಂತೆ ಇತರ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು ಕಂಡುಬಂದಿತು.
ಸರ್ಕಾರಿ,ಖಾಸಗಿ ಬಸ್, ಲಾರಿ, ಆಟೋ, ಟೆಂಪೋ ಸಂಚಾರ ಎಂದಿನಂತಿದ್ದರೆ ಶಾಲಾ ಕಾಲೇಜುಗಳು, ಕೇಂದ್ರ ರಾಜ್ಯ ಸರ್ಕಾರಿ ಇಲಾಖೆ, ಬ್ಯಾಂಕ್ ಸೇರಿದಂತೆ ಇತರೆ ಸರ್ಕಾರಿ ಸೇವೆಗಳು ಸುಗಮವಾಗಿ ನಡೆದವು, ಪೆಟ್ರೋಲ್ ಬಂಕ್, ಚಲನಚಿತ್ರ ಪ್ರದರ್ಶನಕ್ಕೆ ಅಡ್ಡಿ ಉಂಟಾಗಲಿಲ್ಲ,ಜನ ಜೀವನ ಸಹಜ ಸ್ಥಿತಿಯಲ್ಲಿತ್ತು.
ಬಂದ್ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ಆತಂಕದಿಂದಲೇ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಆರಂಭಿಸಿದ ವರ್ತಕರಿಗೆ ಬಿಸಿಲು ಏರುತ್ತಿದ್ದಂತೆ ಪ್ರತಿಭಟನಾಕಾರರು ಬಿಸಿ ಮುಟ್ಟಿಸಿದರು, ಪ್ರತಿಭಟನಾಕಾರರ ಬಲವಂತಕ್ಕೆ ಅಂಗಡಿಗಳು ಬಾಗಿಲು ಮುಚ್ಚ ತೊಡಗಿದವು, ವಿವಿಧ ಸಂಘಟನೆಗಳು ನಡೆಸಿದ ಬೈಕ್ ರ್‍ಯಾಲಿ ಬಂದ್ ಚಿತ್ರಣವನ್ನು ಬದಲಿಸಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಗಳಲ್ಲಿ ತೆರಳಿದ ಸಂಘಟನೆಗಳ ನೂರಾರು ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳ ಬಾಗಿಲುಗಳನ್ನು ಮುಚ್ಚಿಸಿದರು, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಸ್ಮಾರ್ಟ್ ಬಜಾರ್ ಬಾಗಿಲು ಮುಚ್ಚಲು ವಿಳಂಬ ಮಾಡಿದ್ದರಿಂದ ಮಾಲ್ ಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದರು, ಅಷ್ಟರಲ್ಲಿ ಪೊಲೀಸರು ತಡೆ ಯೊಡ್ಡಿದಾದರೂ ಪ್ರತಿಭಟನಾ ಕಾರದ ಆಕ್ರೋಶಕ್ಕೆ ಬಾಗಿಲು ಮುಚ್ಚಲಾಯಿತು, ಫ್ಯಾಕ್ಟರಿ ವೃತ್ತದಲ್ಲಿ ಗಿರಿಯಾಸ್ ಮಾಲ್ ಅನ್ನು ಸಹ ಬಲವಂತವಾಗಿ ಮುಚ್ಚಿಸಲಾಯಿತು,ನೂರಡಿ ರಸ್ತೆಯಲ್ಲಿ ಟೀ ಅಂಗಡಿ ಬಾಗಿಲು ಮುಚ್ಚದಿದ್ದಾಗ ಮಾತಿನ ಚಕಮಕಿ ನಡೆಯಿತು, ಬನ್ನೂರು ರಸ್ತೆಯಲ್ಲಿ ಬೇಕ್ ಪಾಯಿಂಟ್ ಬಾಗಿಲು ಮುಚ್ಚಿರಲಿಲ್ಲ, ಪ್ರತಿಭಟನಾಕಾರರು ಬಾಗಿಲು ಮುಚ್ಚಿಸಲು ನುಗ್ಗಲು ಮುಂದಾದಾಗ ಪೊಲೀಸರು ತಡೆದಾಗ ತೆಳ್ಳಾಟ ನಡೆಯಿತು ಕೆ ಆರ್ ರಸ್ತೆಯ ಟೀ ಪಾಯಿಂಟ್ , ಬೆಂಗಳೂರು ಮೈಸೂರು ಹೆದ್ದಾರಿಯ ಮಹಾರಾಜ ಗ್ರಾಂಡ್ ಹೋಟೆಲ್ ಬಳಿಯೋ ಮಾತಿನ ಚಕಮಕಿ ನಡೆಯಿತು, ಸಣ್ಣಪುಟ್ಟ ಘಟನೆ ಹೊರತುಪಡಿಸಿ ಬಂದ್ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಿತು.
ಬಂದ್ ಹಿನ್ನೆಲೆಯಲ್ಲಿ ನಗರದ ಆಯಾ ಕಟ್ಟಿನ ಪ್ರದೇಶದಲ್ಲಿ ಪೋಲಿಸ್ ಬಿಗಿ ಭದ್ರತೆ ಮಾಡಲಾಗಿತ್ತು.