ನಾಗಮಂಗಲ :- ತಾಲೂಕಿನ ಬಿಂಡಿಗನವಿಲೆ ಹೋಬಳಿ, ಕದಬಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಚೋಳರ ಕಾಲದ ನಿರ್ಮಿತ ಕಾವೇರಿ ರಂಗನಾಥಸ್ವಾಮಿಗೆ ಪೂರ್ವಿಕರು ನಡೆಸಿಕೊಂಡು ಬಂದಂತಹ ನರಿ ಜಾತ್ರೆಗೆ ಸಡಗರದಿಂದ ಕದಬಹಳ್ಳಿ ಗ್ರಾಮಸ್ಥರು ಸಜ್ಜಾಗುತ್ತಿದ್ದಾರೆ
ಜ.13 ರಿಂದ ನಡೆಯುವ ಜಾತ್ರೆಯಲ್ಲಿ ಪ್ರಸಿದ್ಧ ಮದ್ದು ಗುಂಡಿನ ಸಿಡಿತ, ದೇವರ ರಥೋತ್ಸವ ಕಣ್ಮನ ಸೆಳೆಯಲಿದೆ, ನರಿ ಜಾತ್ರೆ ಎಂದರೆ ಕದಬಹಳ್ಳಿ ಗ್ರಾಮದ ಸುತ್ತಮುತ್ತ ಜನತೆಗೆ ಸಂಭ್ರಮದ ಸಡಗರ ಮನೆ ಮಾಡಲಿದೆ ಸ್ವಾಮಿ ಕಾವೇರಿ ರಂಗನಾಥ ಬೇಟೆ ಹಾಡಿದಂತಹ ಕುರುಹುಗಳು ಈ ಕ್ಷೇತ್ರದಲ್ಲಿ ಕಾಣ ಸಿಗುತ್ತವೆ.
ಈ ಹಿಂದೆ ಪೂರ್ವಿಕರು ನರಿ ಬೇಟೆಯಾಡಿ ಅದಕ್ಕೆ ಚಿನ್ನದ ಮುಗೂತಿ ಚುಚ್ಚಿ ಮೂರು ದಿನಗಳ ಕಾಲ ಪೂಜೆ ಮಾಡಿ ಮತ್ತೆ ಕಾಡಿಗೆ ಬಿಡುತ್ತಿದ್ದರು ಪ್ರಸ್ತುತ ಕಾನೂನು ಕಟ್ಟಲೆ ಕಡಿವಾಣ ಇರುವುದರಿಂದ ನರಿ ಪೂಜೆಯನ್ನು ಸಲ್ಲಿಸಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜಾತ್ರೆ ನಡೆಸಲಾಗುತ್ತಿದೆ
ಅರ್ಚಕರಾದ ಕೆ ಏನ್ ರಂಗಸ್ವಾಮಿ, ರಾಜೇಂದ್ರ ಜಾತ್ರೆಯ ವಿಶಿಷ್ಟತೆ ಬಗ್ಗೆ ತಿಳಿಸುವಂತೆ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಸ್ವಾಮಿರವರು ಭೇಟೆ ಆಡಿದಂತಹ ಕುರುಹುಗಳು. ಅಶ್ವತ್ ಕಟ್ಟೆ. ಆಂಜನೇಯ ಸ್ವಾಮಿ. ಲಕ್ಷ್ಮಿದೇವತೆ. ನರಸಿಂಹಸ್ವಾಮಿ. ರಾಮಾನುಜಾಚಾರ್ಯರು ಸಮೇತರಾಗಿ ಕಾವೇರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ ಸಂಕ್ರಾಂತಿ ಹಬ್ಬದಂದು ಸುತ್ತಮುತ್ತಲ ಗ್ರಾಮಸ್ಥರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರು ನರಿ ಜಾತ್ರೆ ಸಂಭ್ರಮದಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ ಎಂದರು
ನರಿ ಜಾತ್ರೆ ಸಂಭ್ರಮದ ಸಡಗರದಲ್ಲಿರುವ ಕಾವೇರಿ ರಂಗನಾಥಸ್ವಾಮಿ ಅಭಿವೃದ್ಧಿ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಭಕ್ತಾದಿಗಳಿಗೆ ನರಿ ಜಾತ್ರೆಗೆ ಆಗಮಿಸುವಂತೆ ಮನವಿ ಮಾಡಿದ್ದು ಕರ್ನಾಟಕದಲ್ಲಿ ಹೆಸರುವಾಸಿಯಾದ ಕದಬಹಳ್ಳಿ ನರಿ ಜಾತ್ರೆಗೆ ಭಕ್ತರ ಸಡಗರ ಕಂಡು ಬಂದಿದೆ.