ನಾಗಮಂಗಲ :- ಹುಲಿಕೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸುಮಾ ಚೇತನ ಕುಮಾರ್ ಆಯ್ಕೆಯಾದರು.
ಶಿವರಾಮು ರವರ ರಾಜೀನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸುಮಾ ವಿಜಯಕುಮಾರ್ ಅಧ್ಯಕ್ಷ ಚುಕ್ಕಾಣಿ ಹಿಡಿಯುವ ಮೂಲಕ ಜಾತ್ಯತೀತ ಜನತಾದಳ ತನ್ನ ಪ್ರಾಬಲ್ಯ ಮೆರೆಯಿತು.
ಚುನಾವಣಾ ಅಧಿಕಾರಿ ಸತೀಶ್ ಅಧ್ಯಕ್ಷರ ಚುನಾವಣೆಯ ಪ್ರಕ್ರಿಯೆ ಆರಂಭಿಸಿದಾಗ ಸ್ಪರ್ಧೆ ಬಯಸಿ ಕಾಂತರಾಜು ಮತ್ತು ಸುಮಾ ಚೇತನ ಕುಮಾರ್ ನಾಮಪತ್ರ ಸಲ್ಲಿಸಿದರು.
ಮತಕ್ಕೆ ಹಾಕಿದಾಗ ಕಾಂತರಾಜು ರಿಗೆ ಮೂರು ಮತಗಳು ಸುಮಾ ಚೇತನ ಕುಮಾರ್ ಗೆ 9 ಮತಗಳು ದೊರೆತವು, ಸುಮಾ ಚೇತನ ಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಣೆ ಮಾಡುತ್ತಿದ್ದಂತೆ ಜೆಡಿಎಸ್ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.
ನೂತನ ಅಧ್ಯಕ್ಷರಾದ ಸುಮ ಚೇತನಕುಮಾರ್ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ ಹುಲಿಕೆರೆ ಗ್ರಾಮ ಪಂಚಾಯಿತಿಯು ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿರುವಂತಹ ಪಂಚಾಯಿತಿಯಾಗಿದ್ದು,ನಾನು ಅಧ್ಯಕ್ಷರಾಗಿರುವುದು ಸಂತಸದ ವಿಚಾರ ನನ್ನ ಆಯ್ಕೆ ಮಾಡಿದ ಪಂಚಾಯತಿ ಆತ್ಮೀಯ ಸದಸ್ಯರು ನಂಬಿಕೆ ಇಟ್ಟು ಹುದ್ದೆಯನ್ನು ನೀಡಿರುವುದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಗ್ರಾಮೀಣ ಪ್ರದೇಶದ ಕುಡಿಯುವ ನೀರು, ರಸ್ತೆ ಮತ್ತು ವಿದ್ಯುತ್ ದೀಪಕ್ಕೆ ಆದ್ಯತೆ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಉತ್ತಮ ರೀತಿ ನಿರ್ವಹಣೆ ಮಾಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ತಿಳಿಸಿದರು
ಪಂಚಾಯತಿ ಸದಸ್ಯರಾದ ತಿಮ್ಮೇಗೌಡ, ಲಕ್ಷ್ಮೀದೇವಮ್ಮ, ಶಿವಲಿಂಗಯ್ಯ, ಮಂಜುಳ. ತಿಮ್ಮೇಗೌಡ, ದಿನೇಶ್ ಕಲ್ಲೇನಹಳ್ಳಿ, ನರಗನಹಳ್ಳಿ ದೇವೇಗೌಡ,ಪುರಸಭೆ ಸದಸ್ಯ ಶಂಕರ್ಲಿಂಗೇಗೌಡ, ಪಡುವಲ ಪಟ್ಟಣ ಪುಟ್ಟರಾಜು,ಎಂ ಎನ್ ಸುರೇಶ್ ಜವರೇಗೌಡ ನೂತನ ಅಧ್ಯಕ್ಷರಿಗೆ ಶುಭ ಕೋರಿದರು