ಮಂಡ್ಯ :- ಬೆಳ್ಳಂ ಬೆಳಿಗ್ಗೆ ಪ್ರಮುಖ ರಸ್ತೆಯಲ್ಲಿ ಹೈ
ಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಬಾರಿ ಅನಾಹುತ ತಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ನೂರಡಿ ರಸ್ತೆಯ ಅಂಬೇಡ್ಕರ್ ವೃತ್ತ ( ವಾಟರ್ ಟ್ಯಾಂಕ್ ) ದಲ್ಲಿ ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ಬಿದ್ದ ವೇಳೆ ಯಾವುದೇ ವಾಹನ ಹಾಗೂ ಸಾರ್ವಜನಿಕರ ಸಂಚಾರ ಇಲ್ಲದ ಪರಿಣಾಮ ಅನಾಹುತ ತಪ್ಪಿದೆ.
ಮಂಡ್ಯ – ಬನ್ನೂರು ಮಾರ್ಗದ ನೂರಡಿ ರಸ್ತೆ ಯಲ್ಲಿ ವಾಹನ ದಟ್ಟಣೆ ಹಾಗೂ ಜನ ಸಂದಣಿ ಹೆಚ್ಚಾಗಿದ್ದು,, ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ 7.40 ಸಮಯದಲ್ಲಿ ಹನ್ನೊಂದು ಸಾವಿರ ಕೆ ವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಹೈ ಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ,
ತಕ್ಷಣ ಸಾರ್ವಜನಿಕರು ಎಚ್ಚೆತ್ತು ವಾಹನಗಳನ್ನು ಅಡ್ಡಗಟ್ಟಿದ್ದು ಜನತೆ ಅತ್ತ ಸುಳಿಯದಂತೆ ನೋಡಿಕೊಂಡಿದ್ದಾರೆ , ಮಾಹಿತಿ ತಿಳಿಯುತ್ತಿದ್ದಂತೆ ಚೆಸ್ಕಾಂ ಸಿಬ್ಬಂದಿ ಸುತ್ತಮುತ್ತಲ ಪ್ರದೇಶದ ವಿದ್ಯುತ್ ಕಡಿತ ಮಾಡಿ ಮುನ್ನೆಚ್ಚರಿಕೆ ವಹಿಸಿದ್ದಾರೆ.
ವಿದ್ಯುತ್ ತುಂಡಾಗಿ ಬಿದ್ದಿದ್ದನ್ನು ಕಂಡ ವಾಹನ ಸವಾರರು ಬೆಚ್ಚಿಬಿದ್ದಿದ್ದು,ತುರ್ತಾಗಿ ಸ್ಥಳಕ್ಕೆ ಧಾವಿಸಿದ ಚೆಸ್ಕಾಂ ಸಿಬ್ಬಂದಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ರಸ್ತೆಯ ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದು,ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಮುಂದಾಗುವ ಅನಾಹುತ ತಪ್ಪಿದಂತಾಗಿದೆ.
ಅವಘಡದ ವೇಳೆ ವಾಹನ ಹಾಗೂ ಜನ ಸಂಚಾರ ಇದ್ದರೆ ಬಾರಿ ಅನಾಹುತ ಆಗುತ್ತಿತ್ತು, ಹೈ ಟೆನ್ಷನ್ ವಿದ್ಯುತ್ ತಂತಿ 11000 ಕೆ ವಿ ವಿದ್ಯುತ್ ಪೂರೈಸುವ ಸಾಮರ್ಥ್ಯ ಹೊಂದಿದೆ, ಯಾವುದೇ ಅನಾಹುತ ಸಂಭವಿಸದಿರುವುದಕ್ಕೆ ಚೆಸ್ಕಾಂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.