ಮಂಡ್ಯ :- ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 2.53 ಕೋಟಿ ಹಣ ಉಳಿತಾಯವಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸರ್ಕಾರದಿಂದ ಬಿಡುಗಡೆಯಾದ ರೂ 30 ಕೋಟಿ ಹಣದಲ್ಲಿ 29,65,07,226/- ರೂ ವೆಚ್ಚವಾಗಿದ್ದು, ರೂ 34,92,774/- ಸರ್ಕಾರಕ್ಕೆ ಆದ್ಯಾರ್ಪಿಸಲಾಗುವುದು ಎಂದರು.
ವಾಣಿಜ್ಯ ಮಳಿಗೆಗಳ ಬಾಡಿಗೆ- ರೂ 17,52,000/-, ಪುಸ್ತಕ ಮಳಿಗೆಯ ಬಾಡಿಗೆ- 16,04,000/-, ನೊಂದಣಿ ಶುಲ್ಕ- 39,95,400/-, ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬಾರದ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- ರೂ 23,11,944/-, ಹೆಚ್.ಆರ್ ಎಂ.ಎಸ್ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರ ಒಂದು ದಿನದ ಸಂಬಳದ ದೇಣಿಗೆ- ರೂ 1,08,05,048/-, ಎಂ.ಡಿಸಿ.ಸಿ ಬ್ಯಾಂಕ್- ರೂ 10 ಲಕ್ಷ, ಎಂ.ಆರ್.ಎನ್ ನಿರಾಣಿ ಫೌಂಡೇಷನ್- ರೂ 5 ಲಕ್ಷ ಸೇರಿ ಒಟ್ಟು ರೂ 2,53,61,166/- ಉಳಿತಾಯವಾಗಿರುತ್ತದೆ ಎಂದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸಿದ ನೆನಪಿಗಾಗಿ ಕನ್ನಡ ಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ದೇಣಿಗೆ ರೂಪದಲ್ಲಿ ಸಮಗ್ರಹವಾಗಿ ಉಳಿತಾಯವಾಗಿರುವ ರೂ 2.5 ಕೋಟಿ ಹಣವನ್ನು ವೆಚ್ಚ ಮಾಡಲು ಯೋಜಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಬೇಕಿರುವ ಹೆಚ್ವುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ: ಕುಮಾರ ಮಾತನಾಡಿ,
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಆಯೋಜನೆ ಹಾಗೂ ಹಣದ ವೆಚ್ಚ ಪಾರದರ್ಶಕವಾಗಿ ನಡೆಸಲು 28 ವಿವಿಧ ಸಮಿತಿ, ಕ್ರಿಯಾಯೋಜನೆ ತಯಾರಿಕೆ, ದರಪಟ್ಟಿ ಅನುಮೋದನೆ ಸಮಿತಿ, ಚೆಕ್ ಮೆಜರ್ ಮೆಂಟ್ ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ ರಚಿಸಲಾಗಿತ್ತು ಎಂದರು.
ಸರ್ಕಾರದಿಂದ ಬಿಡುಗಡೆಯಾದ ರೂ 30 ಕೋಟಿ ಅನುದಾನ ದಲ್ಲಿ 3,17,68,199 ರೂ ಜಿ.ಎಸ್.ಟಿ, 1,08,39,022 ರೂ ಕೆ.ಎಸ್.ಎಂ.ಸಿ.ಎ ಸೇವಾ ಶುಲ್ಕ ಪಾವತಿಸಿದ ನಂತರ 25,39,00,005 ರೂ ಸಮ್ಮೇಳನಕ್ಕೆ ವೆಚ್ಚವಾಗಿರುತ್ತದೆ ಎಂದರು.ಇದಲ್ಲದೇ ಕೆಲವು ಸಂಸ್ಥೆಗಳು ನುಡಿ ಜಾತ್ರೆಯ ಸ್ವರ ಯಾತ್ರೆ ಕಾರ್ಯಕ್ರಮಗಳಿಗೆ, ಸ್ವಾಗತ ಕಾಮಾನುಗಳಿಗೆ ಪ್ರಯೋಜಕತ್ವ ವಹಿಸಿಕೊಂಡು ಸಮ್ಮೇಳನಕ್ಕೆ ಸಹಕಾರ ನೀಡಿರುತ್ತಾರೆ ಎಂದರು
ಸಮ್ಮೇಳನದಲ್ಲಿ ಸಮಿತಿವಾರು ವೆಚ್ಚವಾದ ಅನುದಾನ :
ವೇದಿಕೆ ನಿರ್ಮಾಣ ಸಮಿತಿ- ರೂ 8,92,49,835,
ವೇದಿಕೆ ನಿರ್ವಹಣೆ ಸಮಿತಿ- ರೂ 4,96,456
ವಸತಿ ಸಮಿತಿ- ರೂ 1,97,56,744/-
ಆಹಾರ ಸಮಿತಿ- ರೂ 6,74,62,182/-
ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿ- ರೂ 34,99,956/-.
ಕುಡಿಯುವ ನೀರು ಸಮಿತಿ- ರೂ 49,99,714/- ಧ್ವಜ ನಿರ್ವಹಣೆ ಸಮಿತಿ- ರೂ 99,999/-
ನಗರ ಅಲಂಕಾರ ಸಮಿತಿ- ರೂ 74,99,419/-
ಪ್ರಚಾರ ಸಮಿತಿ- ರೂ 1,29,00,906/- ಮಾಧ್ಯಮ ಸಮನ್ವಯ ಸಮಿತಿ- ರೂ 99,99,709/- .
ಸಾಂಸ್ಕೃತಿಕ ಸಮಿತಿ- ರೂ 82,43,930/-.
ಮೆರವಣಿಗೆ ಸಮಿತಿ- ರೂ74,31,504/- ಸ್ಮರಣಿಕೆ ಸಮಿತಿ- ರೂ 32,20,773
ಪುಸ್ತಕ ಆಯ್ಕೆ ಸಮಿತಿ ರೂ 29,98,761/- ಸ್ಮರಣ ಸಂಚಿಕೆ ಸಮಿತಿ – ರೂ 19,99,726/-
ಪಾಸ್ ಮತ್ತು ಬ್ಯಾಡ್ಜ್ ಸಮಿತಿ- ರೂ 9,99,972/- .
ಮಹಿಳಾ ಸಮಿತಿ ರೂ 2,98,035 .
ಸ್ವಯಂ ಸೇವಕರು ಮತ್ತು ಉಸ್ತುವಾರಿ ಸಮಿತಿ- ರೂ 13,75,290
ಸಾರಿಗೆ ಸಮಿತಿ ರೂ 81,54,708 .
ವಸ್ತುಪ್ರದರ್ಶನ ಸಮಿತಿ ರೂ 4,98,750
ನೋಂದಣಿ ಸಮಿತಿ ರೂ 63,93,316
ಸಮ್ಮೇಳನ ಜಾಗದ ಪೂರ್ವಭಾವಿ ಹಾಗೂ ಯತಾಸ್ಥಿತಿಗೊಳಿಸುವ ಕಾಮಗಾರಿ ವೆಚ್ಚ ರೂ 34.73.881/-.
ಸಾಹಿತ್ಯ ಸಮ್ಮೇಳನ ಕಛೇರಿ ನವೀಕರಣ ವೆಚ್ಚ ರೂ 1,85,850/-
ಕಛೇರಿ ವೆಚ್ಚ ರೂ 4,97,811 ಗಳಾಗಿದೆ.
ಕನ್ನಡ ಜ್ಯೋತಿ ರಥ ನಿರ್ವಹಣಾ ಸಮಿತಿ ರೂ 42,99,999 ಗಳಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಆಸನ ವ್ಯವಸ್ಥೆ 53,70,000
ಕನ್ನಡ ಸಾಹಿತ್ಯ ಪರಿಷತ್ತಿನ ಪಾರಂಪರಿಕ ಚಟುವಟಿಕೆಗಳಿಗೆ ನೀಡಿದ ವೆಚ್ಚ ರೂ 2,50,00,00/-
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಉಪಸ್ಥಿತರಿದ್ದರು.