ಮಂಡ್ಯ:- ಸ್ಥಳೀಯ ಸಂಸ್ಥೆಯಲ್ಲಿ ಸೇವಾ ನಿರತರಾಗಿರುವ ಗುತ್ತಿಗೆ ಪೌರ ಕಾರ್ಮಿಕರನ್ನು ಗ್ರಾಮ ಪಂಚಾಯಿತಿ ನೌಕರರಂತೆ ಪರಿಗಣಿಸಿ ಸರ್ಕಾರ ಸಂಬಳ ಪಾವತಿ ಮಾಡಬೇಕು ಎಂದು ಆಗ್ರಹಿಸಿ ನಗರಸಭೆ ಗುತ್ತಿಗೆ ನೌಕರರು ಮಂಡ್ಯದಲ್ಲಿ ಪ್ರತಿಪಟಿಸಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಆಶ್ರಯದಲ್ಲಿ ನಗರಸಭೆ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಗುತ್ತಿಗೆ ನೌಕರರು ಪೌರ ಸೇವಾ ಕಾರ್ಮಿಕರಿಗೆ ಸಂಜೀವಿನಿ ಯೋಜನೆ ಜಾರಿಗೆ ತರಬೇಕು. ನಗದು ರಹಿತ ಚಿಕಿತ್ಸೆ ನೀಡಬೇಕು. ಕೋವಿಡ್ ಸಂದರ್ಭದಲ್ಲಿಯೂ ಕೆಲಸ ಮಾಡಿದ್ದೇವೆ. ಅದೆಲ್ಲವನ್ನೂ ಪರಿಗಣಿಸಿ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು
ಜ್ಯೋತಿ ಸಂಜೀವಿನಿ ಯೋಜನೆಯು ಪೌರ ಸೇವಾ ಕಾರ್ಮಿಕರಿಗೆ ಅನುಕೂಲಾಗಲಿದ್ದು ಆದ್ದರಿಂದ ಯೋಜನೆ ಜಾರಿಗೆ ಕ್ರಮ ವಹಿಸಬೇಕು. ಪೌರಕಾರ್ಮಿಕರಿಗೆ ನಗರಸಭೆಯಿಂದ ಸಂಬಳ ಕೊಡಿ ಎಂದು ಹೇಳುವ ಚಾಳಿ ನಿಲ್ಲಿಸಬೇಕು ಹಲವು ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸಬಲ ಇಲ್ಲದ ಕಾರಣ ಸಂಬಳ ಕೊಡುವುದಾರೂ ಹೇಗೆ ಎಂಬುದನ್ನ ಮನಗಂಡು ಸರ್ಕಾರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿದಿನ ನೌಕರರ ಸಂಖ್ಯೆ ಕಡಿಮೆ ಆಗುತ್ತಿದೆ ಆದರೆ ಕೆಲಸದ ಪ್ರಮಾಣ ಹೆಚ್ಚಾಗುತ್ತಿದೆ ಸಂಕಷ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಹಾಗೊಮ್ಮೆ ಸರ್ಕಾರ ಬೇಡಿಕೆಗೆ ಸಂಧಿಸದಿದ್ದರೆ ಕರ್ತವ್ಯ ಸ್ಥಗಿತ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು
ಸಂಘದ ನಾಗರಾಜು,ಕಲ್ಪನಾ,ರವಿಕುಮಾರ್, ರಾಜೇಗೌಡ,ಮಂಜುನಾಥ್,ಮಹದೇವು, ಸೋಮಸುಂದರ್, ಚಂದ್ರ,ಲಿಂಗಮ್ಮಯ್ಯ, ಮಂಜು,ನಂಜುಂಡಪ್ಪ ನೇತೃತ್ವ ವಹಿಸಿದ್ದರು.