ಮಂಡ್ಯ : ಮಂಡ್ಯ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ, ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನ ಏಪ್ರಿಲ್ 27 ರಂದು ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಬೌದ್ಧ ಸಮ್ಮೇಳನದ ನಿಮಿತ್ತ ನಡೆಯುವ ಬುದ್ಧ ಅಂಬೇಡ್ಕರ್ ಮತ್ತು ಸರ್ವಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಬೆಳಗ್ಗೆ 10 ಗಂಟೆಗೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಲಿದ್ದು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂದಿನಿ ಕೆ ಆರ್ ಉಪಸ್ಥಿತರಿರಲಿದ್ದಾರೆ.
ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಚನ್ನಲಿಂಗನಹಳ್ಳಿ ಬೌದ್ಧ ಬಿಕ್ಕು ಜೀತವನದ ಮನೋರಕ್ಕಿತ ಬಂತೇಜಿ ದಿವ್ಯ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಬುದ್ಧಿಸ್ಟ್ ಒಕ್ಕೂಟದ ಎಂ ಸಿ ಬಸವರಾಜು ಪ್ರಾಸ್ತಾವಿಕ ನುಡಿ ನುಡಿಯಲಿದ್ದು, ಶಾಸಕರಾದ ರವಿಕುಮಾರ್ ಗಣಿಗ, ಕೆ ಎಂ ಉದಯ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ ಎಂ ನರೇಂದ್ರಸ್ವಾಮಿ, ದರ್ಶನ್ ಪುಟ್ಟಣ್ಣಯ್ಯ, ಎಚ್ ಟಿ ಮಂಜು, ರೈತ ಮುಖಂಡರಾದ ಸುನಂದ ಜಯರಾಮ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಜಿಲ್ಲಾ ಬುದ್ಧಿಸ್ಟ್ ಒಕ್ಕೂಟದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಅಭಿ ಗೌಡ, ಉಪಾಧ್ಯಕ್ಷ ನಾಗರಾಜ್ ಅಂಬೇಡ್ಕರ್, ಟಿ ಎಸ್ ಕಾಳಯ್ಯ, ಟಿ ಎನ್ ಸತ್ಯ, ಎಂ ವಿನಯಕುಮಾರ್, ಬಿ ಟಿ ವಿಶ್ವನಾಥ್, ಲಂಕೇಶ್ ಭಾಗವಹಿಸಲಿದ್ದಾರೆ.
‘ಬುದ್ಧನ ಚಿಂತನೆ ಮತ್ತು ಪರಿಣಾಮಗಳು’ ವಿಷಯ ಕುರಿತ ಗೋಷ್ಠಿಯು ಮಧ್ಯಾಹ್ನ 12-15 ಕ್ಕೆ ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಮೂಡ್ನಾ ಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ, ಪ್ರಾಧ್ಯಾಪಕರು ಹಾಗೂ ಲೇಖಕರಾದ ಶೈಲಜಾ ವೇಣುಗೋಪಾಲ್ ವಿಷಯ ಮಂಡನೆ ಮಾಡಲಿದ್ದು, ಬುದ್ಧಿಸ್ಟ್ ಒಕ್ಕೂಟದ ಹುರುಗಲವಾಡಿ ರಾಮಯ್ಯ, ಎನ್ ಸುರೇಶ್ ಕುಮಾರ್, ಬಿ ಸ್ವಾಮಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1:30ಕ್ಕೆ ‘ ಬುದ್ಧರ ಚಿಂತನೆಗಳಲ್ಲಿ ಸ್ವಾಮಿ ವಿವೇಕಾನಂದರು ಮತ್ತು ಇತರ ದಾರ್ಶನಿಕರು’ ವಿಷಯ ಕುರಿತು ನಡೆಯುವ ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್ಎನ್ ಮುಕುಂದ ರಾಜ್ ವಹಿಸಲಿದ್ದು, ಸಾಹಿತಿ ಪ್ರೊ. ಕೆ ಎಸ್ ಭಗವಾನ್ ವಿಚಾರ ಮಂಡನೆ ಮಾಡಲಿದ್ದಾರೆ, ಜಿಲ್ಲಾ ಬುದ್ಧಿಸ್ಟ್ ಒಕ್ಕೂಟದ ಜಯರಾಮು, ನಿರಂಜನ್ ಭೋದ, ಜಯ ಸುಧಾ ಭಾಗವಹಿಸಲಿದ್ದಾರೆ.
ಸಮ್ಮೇಳನದ ಸಮಾರೋಪ ಸಮಾರಂಭ ಮಧ್ಯಾಹ್ನ 3:30ಕ್ಕೆ ನಡೆಯಲಿದ್ದು, ಜಿಲ್ಲಾ ಬುದ್ಧಿಸ್ಟ್ ಒಕ್ಕೂಟದ ಗೌರವಾಧ್ಯಕ್ಷ ಯಮದೂರು ಸಿದ್ದರಾಜು ಅಧ್ಯಕ್ಷತೆ ವಹಿಸಲಿದ್ದಾರೆ, ಅಣ್ಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದೊಡ್ಡ ಬೋರಯ್ಯ ಸಮಾರೋಪ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಬುದ್ಧಿಸ್ಟ್ ಒಕ್ಕೂಟದ ಸುಜಯಕುಮಾರ್, ಡಿ ಪ್ರೇಮ್ ಕುಮಾರ್, ಕೆ ಎಚ್ ಮಹದೇವ, ಕೆ ಶಿವಲಿಂಗಯ್ಯ, ಸಿದ್ದಯ್ಯ ನೆಟ್ಕಲ್, ಮಂಜುನಾಥ್, ಮುನಿರಾಜು, ಚಂದ್ರಶೇಖರಯ್ಯ ಎಚ್ ಆರ್, ಟಿ ಎಲ್ ನಾಗರಾಜು, ಪ್ರಮೋದ್ ಭಾಗವಹಿಸಲಿದ್ದಾರೆ.