13.7 C
New York
Sunday, April 27, 2025

Buy now

spot_img

ಬಿಜೆಪಿ,ಆರ್ ಎಸ್ ಎಸ್ ಗೆ ಸಂವಿಧಾನದ ಮಹತ್ವ ಗೊತ್ತಿಲ್ಲ : ಸಚಿವ ಎನ್ ಚೆಲುವರಾಯಸ್ವಾಮಿ

ಮಂಡ್ಯ :- ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಇವರ ಬೆಂಬಲಕ್ಕೆ ನಿಂತಿರುವ ರಾಷ್ಟ್ರೀಯ ಸ್ವಯಂಸೇವಾ ಸಂಘದವರು ಕೆಲ ಸಮಯ ಸಂವಿಧಾನ ಒಪ್ಪುತ್ತಾರೆ, ಅದೇ ರೀತಿ ನಿರಂತರ  ವಿರೋಧವನ್ನು ಮಾಡುತ್ತಾ ಬರುತ್ತಾರೆ ಇದನ್ನು ನೋಡಿದರೆ ಇವರಿಗೆ ಸಂವಿಧಾನದ ಮಹತ್ವ ಗೊತ್ತಿದೆಯೋ ಗೊತ್ತಿಲ್ಲವೊ ಎಂದು ಕೃಷಿ ಸಚಿವರು ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಸಂದೇಹ ವ್ಯಕ್ತಪಡಿಸಿದರು.
ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮಂಡ್ಯ ಜಿಲ್ಲಾ ಬುದ್ಧಿಸ್ಟ್ ಒಕ್ಕೂಟ, ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಬೌದ್ಧ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಮಾನತೆಯ ಬದುಕಿಗಾಗಿ ಹೋರಾಟ ನಡೆದಿದೆ, ಮಹನೀಯರು ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ ಆದರೆ ಸಮಾನತೆಯ ಹೋರಾಟದಲ್ಲಿ ಎಂದು ಸಹ ಗುರುತಿಸಿಕೊಂಡಿರದವರು ಜಾತ್ಯತೀತ ವ್ಯವಸ್ಥೆ, ಸಮಾನತೆ ಪ್ರತಿಪಾದಿಸುವ ಬುದ್ಧಿಜೀವಿಗಳು ಹಾಗೂ ಶೋಷಿತರ  ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಸದಾಕಾಲ ಟೀಕಿಸುತ್ತಾ ಬಂದಿದ್ದಾರೆ, ಜನತೆ ಇತಿಹಾಸ ಅರಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಹಾಗಾಗಿ ಈಗಲೇ ಎಚ್ಚೆತ್ತು  ಇತಿಹಾಸವನ್ನು ಅರಿಯಬೇಕೆಂದರು.
ಸಾಮಾಜಿಕ ಪಿಡುಗಾಗಿದ್ದ ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆ ಯಾಗದಿದ್ದರೂ ಅದರ ಪರಿಣಾಮ ತಗ್ಗಿದೆ ಇದಕ್ಕೆ ಸಂವಿಧಾನ ಕಾರಣ, ಅಸ್ಪೃಶ್ಯತೆ ಪ್ರಶ್ನಿಸುವ ಹಕ್ಕು ಎಲ್ಲರಿಗೂ ದೊರೆತಿದೆ. ಶೋಷಿತರು ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ರಚಿಸಿರುವ ಸಂವಿಧಾನವೇ ಪ್ರಮುಖ ಎಂಬುದನ್ನ ಪ್ರತಿಯೊಬ್ಬರು ತಿಳಿಯಬೇಕು ಎಂದರು.
ದೇಶದ ಇತಿಹಾಸ, ಸಂವಿಧಾನ, ಜನರ ಹಿತ ಕಾಪಾಡುವ ಕಾಳಜಿ ಹೊಂದಿಲ್ಲದಿದ್ದರೆ ನನ್ನನ್ನು ಸಹ ಟೀಕಿಸಿ, ಯಾರೇ ತಪ್ಪು ಮಾಡಿದರೂ ತಪ್ಪೇ, ತಪ್ಪನ್ನು ಸಹಿಸಿಕೊಳ್ಳುವುದು ಸಹ ಅಪರಾಧ, ಇದರಲ್ಲಿ ಪಕ್ಷ,ವ್ಯಕ್ತಿ ಮುಖ್ಯವಲ್ಲ, ತಪ್ಪನ್ನು ಸರಿಪಡಿಸುವ ಕೆಲಸವಾಗಬೇಕು ಆ ನಿಟ್ಟಿನಲ್ಲಿ ಜನತೆ ಮುನ್ನಡೆಯಬೇಕು ಎಂದರು.
ಬೌದ್ಧಧಮ್ಮಕ್ಕೆ ತನ್ನದೇ ಆದ ವಿಶೇಷ ಮಹತ್ವ ಇದೆ, ಎಲ್ಲಾ ಧರ್ಮಗಳಿಗಿಂತ ವಿಭಿನ್ನವಾದ ಧಮ್ಮ ವಾಗಿದ್ದು, ಯಾವುದೇ ಜಾತಿಗೆ ಸೀಮಿತವಾದುದಲ್ಲ, ಎಲ್ಲರೂ ಪ್ರೀತಿಸುವ ಧಮ್ಮ ವಾಗಿದೆ, ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿನ ಅಸಮಾನತೆಯ ಬಗ್ಗೆ ಅಧ್ಯಯನ  ಮಾಡಿ ಯಾವುದು ಸರಿ ಹೋಗುವುದಿಲ್ಲ ಎಂದು ಅರಿತ ನಂತರ ಬೌದ್ಧ ಧಮ್ಮವನ್ನು ಸ್ವೀಕಾರ  ಮಾಡಿದರು, ಅಂತಹ ಜ್ಞಾನಿ ಮಾರ್ಗ ನಮ್ಮೆಲ್ಲರಿಗೂ ಅವಶ್ಯಕ, ಅಂಬೇಡ್ಕರ್ ರವರ ಮಾರ್ಗದರ್ಶನದಂತೆ ಬದಲಾವಣೆ ಮುಖ್ಯ ನಾವೆಲ್ಲರೂ ನಿಸ್ವಾರ್ಥದಿಂದ ಸೇವೆ ಮಾಡೋಣ, ನಾಡಿನ ಹಿತಾಸಕ್ತಿಗೆ ಶ್ರಮಿಸೋಣ, ಕೆಟ್ಟದು ಮಾಡಬಾರದು ಎಂಬ ಮನಸ್ಥಿತಿಯಲ್ಲಿ ಬದುಕೋಣ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಹೊಸ ಬೆಳವಣಿಗೆಯೊಂದಿಗೆ ಹೊಸ ಹೆಜ್ಜೆ ಕಾಣುತ್ತಿದ್ದೇನೆ, ಬದಲಾವಣೆ ಅವಶ್ಯಕ, ಆ ನಿಟ್ಟಿನಲ್ಲಿ ನೀವೆಲ್ಲರೂ ಮುನ್ನಡೆಯುತ್ತಿದ್ದೀರಿ ನಾನು ಇಷ್ಟರ ಮಟ್ಟಿಗಿನ ಬದಲಾವಣೆ ನಿರೀಕ್ಷಿಸಿರಲಿಲ್ಲ ಆದರೆ ಇಲ್ಲಿ ನೋಡಿದಿರಾ ಇಷ್ಟೊಂದು ಪ್ರಮಾಣದಲ್ಲಿ ಸಮ್ಮೇಳನದಲ್ಲಿ ಒಗ್ಗೂಡಿರುವುದು ಸಂತಸದ ವಿಚಾರ ಎಂದರು.
ಚನ್ನಲಿಂಗನಹಳ್ಳಿ ಬೌದ್ಧ ಬಿಕ್ಕು ಜೀತವನದ ಮನೋರಕ್ಕಿತ ಬಂತೇಜಿ ದಿವ್ಯ ಸಾನಿಧ್ಯ ವಹಿಸಿದ್ದರೆ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಹಿಸಿದ್ದರು,ಶಾಸಕ ರವಿಕುಮಾರ್ ಗಣಿಗ, ಸಾಹಿತಿ ಮೂಡ್ನ ಕೊಡು  ಚಿನ್ನಸ್ವಾಮಿ, ಪ್ರೊ. ಕೆ ಎಸ್ ಭಗವಾನ್, ನಾದಾನಂದ ನಾಥ ಸ್ವಾಮೀಜಿ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂದಿನಿ ಕೆ ಆರ್,  ಬುದ್ಧಿಸ್ಟ್ ಒಕ್ಕೂಟದ ಎಂ ಸಿ ಬಸವರಾಜು  ರೈತ ಮುಖಂಡರಾದ ಸುನಂದ ಜಯರಾಮ್,  ಚಿಕ್ಕರಸಿನಕೆರೆ ಸಿ ಶಿವಲಿಂಗಯ್ಯ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles