-2.7 C
New York
Thursday, December 26, 2024

Buy now

spot_img

ಮಂಡ್ಯದಲ್ಲಿ ದಲಿತ,ಪ್ರಗತಿಪರ ಸಂಘಟನೆಗಳಿಂದ ಮನುಸ್ಮೃತಿ ದಹನ

ಮಂಡ್ಯ :- ಅಸ್ಪೃಶ್ಯತೆ, ಜಾತೀಯತೆ, ಲಿಂಗ ತಾರತಮ್ಯ,ಅಸಮಾನತೆಯ  ಮನುಸ್ಮೃತಿಯನ್ನು ಡಾ.ಬಿ ಆರ್ ಅಂಬೇಡ್ಕರ್ ಸುಟ್ಟ ಐತಿಹಾಸಿಕ ದಿನ ದಿನದಂದು ವಿವಿಧ ಸಂಘಟನೆಯ ಕಾರ್ಯಕರ್ತರು ಮನುಸ್ಮೃತಿ ದಹಿಸಿ ಮನುವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ  ‘ಸಂವಿಧಾನವನ್ನು ಎದೆಗಪ್ಪಿಕೊಳ್ಳೋಣ ಮನುಸ್ಮೃತಿಗೆ ಕೊಳ್ಳಿ ಇಟ್ಟು  ಸಮತೆಯ ಜ್ಯೋತಿ ಬೆಳಗಿಸೋಣ’ ಘೋಷಣೆಯಡಿ ಮನುಸ್ಮೃತಿ ದಹಿಸಿ ಸಂವಿಧಾನದ ಆಶಯ ಸಂಪೂರ್ಣ ಅನುಷ್ಠಾನಕ್ಕೆ ಆಗ್ರಹಿಸಿದರು.
ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ ಮನುಸ್ಮೃತಿ ಯನ್ನು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸುಟ್ಟುಹಾಕಿ 97 ವರ್ಷ ವಾಗಿದೆ, ಜಾತಿ ಅಸಮಾನತೆ, ಲಿಂಗ ತಾರತಮ್ಯ ದಲಿತರು – ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ ಸತಿಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯ ವಿವಾಹ ದಂತಹ  ಅನಿಷ್ಟ ಪದ್ಧತಿ  ಶತಮಾನಗಳ ಕಾಲ ಮುಂದುವರಿಯಲು ಕಾರಣವಾದ ಮನುಸ್ಮೃತಿಯನ್ನು ಡಾ.ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ಸಾರ್ವಜನಿಕವಾಗಿ ಸುಟ್ಟು ಹಾಕಿ ಮನುವಾದದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಸ್ವತಂತ್ರ ಭಾರತಕ್ಕೆ ಸಂವಿಧಾನವನ್ನು ರೂಪಿಸುವ ಸಂದರ್ಭದಲ್ಲಿ ಸಮ ಸಮಾಜದ ನಿರ್ಮಾಣದ ಕನಸು ಹೊತ್ತು ಸಮಾನತೆ, ಸಹೋದರತೆ, ಭ್ರಾತೃತ್ವದ ಆಶಯದೊಂದಿಗೆ ಸಂವಿಧಾನ ರೂಪುಗೊಂಡಿದೆ  ಸಂವಿಧಾನ ರಚನೆಗೆ ಬಾಬಾ ಸಾಹೇಬರ ಕೊಡುಗೆ ಅಗಾಧ.ಆದರೆ ಸಂವಿಧಾನ ಸಮರ್ಪಣೆಯಾದ ಸಂದರ್ಭದಲ್ಲಿ ಆರ್ ಎಸ್‌ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆಯು  ಸಂವಿಧಾನದ ಮೇಲೆ ಅಸಹನೆಯನ್ನು ಹೊರಹಾಕಿ,ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಸಂವಿಧಾನ ರಚನಾಕಾರರು ಮನುಸ್ಮೃತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮೂದಲಿ ಸಿದ್ದರು,ಅಂದಿನಿಂದ ಇಂದಿನವರೆಗೂ ಆಂತರಿಕವಾಗಿ ಮತ್ತು ಬಹಿರಂಗವಾಗಿ ಡಾ.ಅಂಬೇಡ್ಕರ್ ಹಾಗೂ  ಸಂವಿಧಾನದ ಮೇಲೆ ಅಸಹಿಷ್ಣುತೆಯನ್ನು ಆರ್ ಎಸ್ ಎಸ್ – ಬಿಜೆಪಿ ಸಂಘಪರಿವಾರ ಹೊರಹಾಕುತ್ತಾ ಬಂದಿದೆ. ಮನು ಪ್ರಣೀತ ಭಾರತವನ್ನು ಬದಿಗೆ ಸರಿಸಿ,ಸಮಾನತೆ ಸಾರಿದ ಬೌದ್ಧತತ್ವ ಪ್ರಣೀತ, ಪ್ರಜಾತಾಂತ್ರಿಕ ಸಂವಿಧಾನವನ್ನು ಅಂಬೇಡ್ಕ‌ರ್ ರವರು  ದೇಶಕ್ಕೆ ರೂಪಿಸಿಕೊಟ್ಟಿದ್ದನ್ನು ಸಹಿಸಿಕೊಳ್ಳದ ಶಕ್ತಿಗಳು ಪ್ರಸ್ತುತ  ಬಲವಾಗಿ ಜನರ ದಿಕ್ಕು ತಪ್ಪಿಸಿ, ಸುಳ್ಳು ಹಬ್ಬಿಸುವ ಕಾರ್ಯದಲ್ಲಿ ಸಕ್ರಿಯವಾಗಿವೆ ಎಂಬುದನ್ನ ಅರಿಯಬೇಕೆಂದರು.
ಮನುಸ್ಮೃತಿಯನ್ನು ಒಪ್ಪಿಕೊಳ್ಳುವುದೆಂದರೆ ಭಾರತವನ್ನು ಶತಮಾನಗಳ ಕಾಲ ಹಿಂದಕ್ಕೆ ಕರೆದೊಯ್ದಂತೆ. ಇದನ್ನು  ಆರ್ ಎಸ್ ಎಸ್ ನ ಗೋಳ್ವಲ್ಕರ್ ಜಾತಿ ವ್ಯವಸ್ಥೆ ಸ್ಥಿರವಾಗಿ ಉಳಿಯಬೇಕು ಹೀಗಾಗಿ ನಮ್ಮ ಉದ್ದೇಶವೇ ಭಾರತವನ್ನು ನೂರು ಇನ್ನೂರು  ವರ್ಷ ಹಿಂದಕ್ಕೆ ಕೊರೆದೊಯ್ಯುವುದಲ್ಲ ಬದಲಾಗಿ ಸಾವಿರ ವರ್ಷ ಹಿಂದಕ್ಕೆ ಕರೆದೊಯ್ಯುವುದು ಎಂದಿದ್ದರು. ಇಂತಹ ಮಾತನ್ನು ಸದಾಕಾಲ  ನೆನಪಿನಲ್ಲಿ ಇಟ್ಟುಕೊಂಡು   ದೇಶದಲ್ಲಿ ಸಂವಿಧಾನ ಉಳಿಯಬೇಕಾದರೆ ಮನು ಸಿದ್ದಾಂತ ಸಂಪೂರ್ಣ ನಶಿಸಿ ಹೋಗಬೇಕು ಎಂಬುದನ್ನ ಅರಿಯಬೇಕೆಂದರು.
ಬಾಬಾ ಸಾಹೇಬರು ಮನುಸ್ಮೃತಿಯನ್ನು ಸುಟ್ಟಿದ್ದು  ಚಾರಿತ್ರಿಕ ವಿಧ್ಯಮಾನ ಈ ಪ್ರಕ್ರಿಯೆಯನ್ನು ಪ್ರತಿಯೊಬ್ಬರು  ಮುಂದುವರಿಸಬೇಕು,’ಮನುಸ್ಮೃತಿ ಸುಟ್ಟ ದಿನ’ವನ್ನು  ದೇಶದಾದ್ಯಂತ ಅಚರಣೆ ಮಾಡಿ ಮನುವಾದಕ್ಕೆ  ಪ್ರತಿರೋಧಯೊಡ್ಡ ಬೇಕು, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದ ಆಶಯಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳುವವರೆಗೂ ದೇಶದಲ್ಲಿ ಮನುಸ್ಮೃತಿ ದಹನದ ಪ್ರಕ್ರಿಯೆ ಮುಂದುವರಿಸಬೇಕು ಎಂದು ಕರೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಕರ್ನಾಟಕ ಜನ ಶಕ್ತಿಯ ಸಿದ್ದರಾಜು ಎಂ, ಮಹಿಳಾ ಮುನ್ನಡೆ ಶಿಲ್ಪ ಬಿ ಎಸ್,   ಜಾಗೃತ ಕರ್ನಾಟಕದ ಎನ್ ನಾಗೇಶ್, ಎನ್ ಸುಬ್ರಹ್ಮಣ್ಯ, ಸಿ ಕುಮಾರಿ, ಗುಡಿಗೇನಹಳ್ಳಿ ಚಂದ್ರಶೇಖರ್, ಹುರುಗಲವಾಡಿ  ರಾಮಯ್ಯ, ಲಕ್ಷ್ಮಣ್ ಚೀರನಹಳ್ಳಿ, ಶಿವಲಿಂಗಯ್ಯ ಗಂಜಾಂ ರವಿ, ವೈ ರಾಜಶೇಖರ, ರೈತ ಸಂಘದ ಪಾಂಡು, ಗಂಗಾಧರಯ್ಯ, ವಕೀಲ ಬಿ ಟಿ ವಿಶ್ವನಾಥ್, ಹೊನ್ನಪ್ಪ,ಶ್ರೀನಿವಾಸ್ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles