-4.9 C
New York
Tuesday, January 7, 2025

Buy now

spot_img

ಜ. 7 ರಂದು ಮಂಡ್ಯ ಬಂದ್ ಗೆ ಕರೆ

ಮಂಡ್ಯ :- ರಾಷ್ಟ್ರ ನಾಯಕ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಸಂಸತ್ತಿನಲ್ಲಿ ಅವಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಅಗ್ರಹಿಸಿ ಜ.7ರಂದು ಮಂಡ್ಯ ಬಂದ್ ಗೆ ಕರೆ ನೀಡಲಾಗಿದೆ.
ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ, ಮಹಿಳಾ, ಕಾರ್ಮಿಕ, ರೈತ, ಕನ್ನಡಪರ ಸಂಘಟನೆಗಳು, ಸಮಾನತೆ ಮತ್ತು ಸಂವಿಧಾನದ ಸಂರಕ್ಷಣೆ ಬಯಸುವ ಚಿಂತಕರ ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ಮಂಡ್ಯ ಬಂದ್ ಗೆ ಕರೆ ನೀಡಲಾಗಿದ್ದು, ವರ್ತಕರು, ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ವಾಹನ ಚಾಲಕರು ಸೇರಿದಂತೆ ಸಮಸ್ತ ಜನತೆ ಬಂದ್ ಬೆಂಬಲಿಸುವಂತೆ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ಮಂಗಳವಾರ ನಡೆಯುವ ಸ್ವಯಂ ಪ್ರೇರಿತ ಮಂಡ್ಯ ಬಂದ್ ಗೆ ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರುನಾಡ ಸೇವಕರು, ಕರ್ನಾಟಕ ರಕ್ಷಣಾ ವೇದಿಕೆ, ಬಹುಜನ ಸಮಾಜ ಪಕ್ಷ, ಸಮಾನ ಮಸ್ಕರ ವೇದಿಕೆ, ಸಿಪಿಐ ಎಂ ಪಕ್ಷ, ಅಖಿಲ ಭಾರತ ವಕೀಲರ ಒಕ್ಕೂಟ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ, ಮುಸ್ಲಿಂ ಒಕ್ಕೂಟ, ಡಾ. ಅಂಬೇಡ್ಕರ್ ವಾರಿಯರ್ಸ್, ಲಿಂಗಾಯಿತ ಮಹಾಸಭಾ, ಜಿಲ್ಲಾ ಸವಿತಾ ಸಮಾಜ, ಅಹಿಂದ ಚಳವಳಿ,ಜಿಲ್ಲಾ ಕುರುಬರ ಸಂಘ, ಭೀಮ್ ಆರ್ಮಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ನಿವೃತ್ತ ನೌಕರರ ಸಂಘ, ರಾಜ್ಯ ರೈತ ಸಂಘ, ವಿಶ್ವಕರ್ಮ ಮಹಾಸಭಾ, ಕೃಷಿ ಕೂಲಿಕಾರರ ಸಂಘ, ರೈತ, ಕನ್ನಡಪರ ಹಾಗೂ ಪ್ರಗತಿಪರ ಹೋರಾಟಗಾರರು  ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ವಿಶ್ವರತ್ನ, ರಾಷ್ಟ್ರನಾಯಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಶೋಷಿತ ಸಮುದಯಗಳ, ಸಮಸ್ಥ ಭಾರತೀಯರ ವಿಮೋಚಕ, ಸಾಮಾಜಿಕ ಸಮಾನತೆಯ ಹರಿಕಾರರಾಗಿ, ಆರ್ಥಿಕ ತಜ್ಞರಾಗಿ, ರಾಗಿ, ಕಾರ್ಮಿಕನಾಯಕರಾಗಿ, ಮಾನವಹಕ್ಕುಗಳ ಹೋರಾಟಗಾರರಾಗಿ, ವಕೀಲರಾಗಿದ್ದುಕೊಂಡು ಪ್ರಜಾಪ್ರಭುತ್ವದ ಪ್ರತಿಪಾದಕರಾಗಿ, ದೇಶಕ್ಕೆ ಸಂವಿಧಾನದ ಮೂಲಕ ವಿವಿಧತೆಯಲ್ಲಿ ಏಕತೆ ಮೂಡಿಸಿ ಸರ್ವ ಭಾರತೀಯರನ್ನು ಒಂದುಗೂಡಿಸಿದವರು ಡಾ.ಅಂಬೇಡ್ಕರ್ ರವರು ಧ್ವನಿ ಕಳೆದುಕೊಂಡಿದ್ದ ಭಾರತದ ಎಶೋಷಿತರ, ಮಹಿಳೆಯರ ಕೊರಳ ದನಿಯಾದವರು ಯಾವುದೇ ಧರ್ಮ, ಜಾತಿಗಳನ್ನು ಪರಿಗಣಿಸದೆ ಸಮಸ್ತ ಭಾರತೀಯರ ಬದುಕಿನ ಘನತೆಯನ್ನು ಹೆಚ್ಚಿಸಲು ತಮ್ಮ ಬದುಕನ್ನೇ ಪಣಕಿಟ್ಟ ಮಹಾ ಮಾನವತಾವಾದಿ ಯಾಗಿದ್ದಾರೆ.
ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಷಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವ್ಯಂಗ್ಯ ಮತ್ತು ಹಾಸ್ಯದ ರೂಪದಲ್ಲಿ ಅಪಮಾನಿಸಿದ್ದಾರೆ. ಸಂವಿಧಾನದ ಮೂಲಕ ಉನ್ನತ ಹುದ್ದೆಯಲ್ಲಿರುವ ಅಮಿತ್ ಶಾ, ಅದೇ ಸಂವಿಧಾನ ನಿರ್ಮಾತೃ ಬಾಬಾ ಸಾಹೇಬರ ಅವಹೇಳನ ಮಾಡಿದ್ದಾರೆ. ತಮ್ಮ ಹುದ್ದೆಯ ಘನತೆಯನ್ನು ಮೀರಿದ ಅಮಿತ್ ಷಾ ಪ್ರಜ್ಞಾಪೂರ್ವಕವಾಗಿ ಆಡಿದ ಮಾತು, ಅವರನ್ನು ಮುನ್ನಡೆಸುತ್ತಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮನಸ್ಥಿತಿಯನ್ನು ಎತ್ತಿತೋರಿಸುತ್ತಿದೆ. ಇದು ಬಾಬಾ ಸಾಹೇಬರು ಮತ್ತು ಸಂವಿಧಾನದ ಮೇಲಿನ ಅಕ್ರಮಣವಿದು. ಇದರಿಂದಾಗಿ ಕೋಟ್ಯಾಂತರ ಭಾರತೀಯರ ಮನಸ್ಸಿಗೆ  ನೋವುಂಟಾಗಿದೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ,
ಗೃಹಮಂತ್ರಿ ಅಮಿತ್ ಷಾ ಹೇಳಿಕೆಯನ್ನು ಖಂಡಿಸಿ ಮತ್ತು ರಾಜಿನಾಮೆಗೆ ಆಗ್ರಹಿಸಿ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ, ಮಹಿಳಾ, ಕಾರ್ಮಿಕ, ರೈತ, ಕನ್ನಡಪರ ಸಂಘಟನೆಗಳು, ಸಮಾನತೆ ಮತ್ತು ಸಂವಿಧಾನದ ಸಂರಕ್ಷಣೆ ಬಯಸುವ ಚಿಂತಕರ ಸಹಭಾಗಿತ್ವದೊಂದಿಗೆ ಮಂಡ್ಯ ಬಂದ್ ಗೆ ಕರೆ ನೀಡಲಾಗಿದ್ದು  ಅಂದು ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಸಾರ್ವಜನಿಕರು ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮಹಿಳಾ ಹೋರಾಟ ಗಾರ್ತಿ ಸುನಂದ ಜಯರಾಮ್,  ಲಕ್ಷ್ಮಣ್ ಚೀರನಹಳ್ಳಿ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಕರುನಾಡು ಸೇವಕರ ಸಂಘಟನೆಯ ಎಂ ಬಿ ನಾಗಣ್ಣಗೌಡ, ಬಹುಜನ ಸಮಾಜ ಪಕ್ಷದ ಶಿವಶಂಕರ್,ದಸಂಸ ಮುಖಂಡರಾದ ಅಂಬಾನಿ ಸೋಮನಹಳ್ಳಿ, ಎಂ ವಿ ಕೃಷ್ಣ, ಕರವೇ ಮುಖಂಡ ಎಚ್‍ಡಿ ಜಯರಾಮ್, ಗಂಗರಾಜು ಸೇರಿದಂತೆ ಇತರರಿದ್ದರು,

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles