-4.8 C
New York
Wednesday, January 15, 2025

Buy now

spot_img

ಬೆಂಕಿ ಅವಘಡ : ಎಲೆಕ್ಟ್ರಿಕಲ್ ಅಂಗಡಿ ಸಂಪೂರ್ಣ ಭಸ್ಮ

ಮಂಡ್ಯ :- ವಿದ್ಯುತ್ ಅವಘಡ ಸಂಭವಿಸಿ ಎಲೆಕ್ಟ್ರಿಕಲ್ ಅಂಗಡಿ ರಾತ್ರೋ ರಾತ್ರಿ ಹೊತ್ತು ಹುರಿದು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ನೂರಡಿ ರಸ್ತೆಯಲ್ಲಿರುವ ಶ್ರೀ ಸಪ್ತಗಿರಿ ಎಲೆಕ್ಟ್ರಿಕಲ್ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ.
ವೈರ್ ಬಂಡಲ್, ಸ್ವಿಚ್ ಬೋರ್ಡ್, ಪೈಪ್ ಗಳು, ಗೀಸರ್, ಬಲ್ಪ್ ಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಾದರಿಯ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಹೋಗಿದ್ದು, ಎಲ್ಲಾ ವಸ್ತುಗಳು ಪ್ಲಾಸ್ಟಿಕ್ ಆಗಿದ್ದರಿಂದ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ.
ಸೋಮವಾರ ಎಂದಿನಂತೆ ವ್ಯಾಪಾರ ಮಾಡಿ ರಾತ್ರಿ 8:45 ರ ಸಮಯದಲ್ಲಿ ಅಂಗಡಿ ಬಾಗಿಲು ಮುಚ್ಚಿಕೊಂಡು ಹೋಗಿದ್ದು, ಅನಂತರದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ, ರಾತ್ರಿ 11:15 ರ ಸಮಯದಲ್ಲಿ ದಾರಿ ಹೋಕರು ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದು ಮಾಲೀಕರಾದ ಪ್ರಕಾಶ್ ಮತ್ತು ಪೃಥ್ವಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದು, ಸುತ್ತಮುತ್ತಲ ಪ್ರದೇಶ ದಟ್ಟ ಹೊಗೆಯಿಂದ ಆವರಿಸಿಕೊಂಡಿದೆ, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು ಆದರೆ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿ ಇದ್ದದ್ದರಿಂದ ಬೆಂಕಿಯ ಹೆಚ್ಚಾಗಿದ್ದು, ಹೆಚ್ಚಿನ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾಯಿತು.
ಆದರೆ ಅಷ್ಟರೊಳಗೆ ಅಂಗಡಿಯಲ್ಲಿದ್ದ ಎಲೆಕ್ಟ್ರಿಕಲ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದ ವು, 15 ರಿಂದ 20 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles