ಮಂಡ್ಯ :- ಸಂವಿಧಾನ ಜಾರಿಯಾದ ದಿನದ ನಿಮಿತ್ತ ಬಹುಜನ ಸಮಾಜ ಪಕ್ಷ ಆಯೋಜಿಸಿರುವ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ನಗರದ ಪಕ್ಷದ ಕಚೇರಿ ಬಳಿ ಜಿಲ್ಲಾಧ್ಯಕ್ಷ ಎಸ್ ಶಿವಶಂಕರ್ ಚಾಲನೆ ನೀಡಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ಸಂಚರಿಸಿ ಜನಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಜಾಥಾಕ್ಕೆ ಶುಭ ಹಾರೈಸಿದರು.
ನಂತರ ಮಾತನಾಡಿದ ಅವರು ಬಹುಜನ ಚಳವಳಿಯ ನಾಯಕ ಕಾನ್ಸಿರಾಮ್ ರವರು ಸಂವಿಧಾನ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಅವರ ಚಿಂತನೆಗಳ ಬಗ್ಗೆ ಅರಿವು ಮೂಡಿಸಿದವರಲ್ಲಿ ಮೊದಲಿಗರಾಗಿದ್ದು,ದೇಶದಲ್ಲಿ 1950 ನೇ ಜನವರಿ 26 ರಲ್ಲಿ ಸಂವಿಧಾನ ಜಾರಿಯಾದ ದಿನವನ್ನ ಸಂವಿಧಾನ ಜಾರಿಯಾದ ದಿನ ಎಂದೇ ಜನತೆ ಕರೆಯಬೇಕು ಆ ಮೂಲಕ ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ದನಿ ಎತ್ತಿದವರು ಎಂಬುದನ್ನು ನಾವೆಲ್ಲರೂ ಅರಿಯಬೇಕೆಂದರು.
ಕಾನ್ಸಿರಾಮ್ ರವರ ಆಶಯದಂತೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದೆ,ಒಂದು ತಿಂಗಳ ಕಾಲ ಪ್ರತಿ ಹಳ್ಳಿಗೆ ಸೈಕಲ್ ಜಾಥಾದ ಮೂಲಕ ತೆರಳುವ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರಲ್ಲಿ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್ ಎಂ.ಆರ್, ಜಿಲ್ಲಾ ಕಾರ್ಯದರ್ಶಿ ಬಸವರಾಜು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸತೀಶ್ ಜೆ,ಹೋಬಳಿ ಘಟಕದ ಅಧ್ಯಕ್ಷ ಶ್ರೀಕಾಂತ್ ಎಚ್.ಜೆ, ಕಾರ್ಯದರ್ಶಿ ಆನಂದ್, ಪ್ರಜ್ವಲ್ ಇತರರಿದ್ದರು.