Home ತಾಲೂಕುಹಳೇ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆಗೆ ಮತ್ತೆ ಗ್ರಹಣ

ಹಳೇ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆಗೆ ಮತ್ತೆ ಗ್ರಹಣ

by M S MURTHY

ಮಂಡ್ಯ :-  ಹಳೇ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವರಿಷ್ಠರ ಚುನಾವಣೆ ಮತ್ತೆ ಮುಂದೂಡಿಕೆಯಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಬಿ ಸಿ ಪ್ರತಿಮಾ ಶಂಕರ್ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿದೆ.
ಕೃಷಿ ಪತ್ತಿನ ಸಹಕಾರ ಸಂಘ 10 ನಿರ್ದೇಶಕರ ಬಲ ಹೊಂದಿದ್ದು, ಕಳೆದ ಶುಕ್ರವಾರ ಚುನಾವಣಾ ಪ್ರಕ್ರಿಯೆ ಆರಂಭಗೊಂಡಾಗ ಬಿ ಸಿ ಪ್ರತಿಮಾ ಶಂಕರ್  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದರು, ಆದರೆ ಸಭೆಗೆ ಇವರು ಗೈರು ಹಾಜರಾಗಿದ್ದರು ಕೇವಲ ಇಬ್ಬರೂ ನಿರ್ದೇಶಕರು ಭಾಗಿಯಾಗಿದ್ದು ಕೋರಂ ಅಭಾವದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಮುಂದುವರೆದ ಸಭೆಯು ಇಂದು (ಮಂಗಳವಾರ) ನಿಗದಿಯಾಗಿತ್ತು, ಚುನಾವಣಾಧಿಕಾರಿಯಾದ ಸಹಕಾರ ಅಭಿವೃದ್ಧಿ ಅಧಿಕಾರಿ ರವಿ ಹಾಗೂ ಸಂಘದ ಕಾರ್ಯದರ್ಶಿ ಡಿ.ಸುರೇಶ್ ಮತದಾನ ಪ್ರಕ್ರಿಯೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದರು, ಸಭೆಯಲ್ಲಿ ಎಂಟು ನಿರ್ದೇಶಕರು ಹಾಜರಿದ್ದರು ಈ ವೇಳೆ  ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ ಸಿ ಪ್ರತಿಮಾ ಶಂಕರ್ ಕಣದಿಂದ ಹಿಂದೆ ಸರಿದಿದ್ದು ಯಾವುದೇ ಅಭ್ಯರ್ಥಿ ಇಲ್ಲದೆ ಶೂನ್ಯ ಕಣ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿಗಳು   ಚುನಾವಣೆಯನ್ನು ಮುಂದೂಡಿದ್ದಾರೆ.

You may also like

Leave a Comment