Home ತಾಲೂಕುಅತ್ತೆ,ಮಾವ,ಗಂಡನನ್ನು ಕೊಂದಿದ್ದ ಮಹಿಳೆಗೆ ಜೀವಾವಧಿ ಶಿಕ್ಷ

ಅತ್ತೆ,ಮಾವ,ಗಂಡನನ್ನು ಕೊಂದಿದ್ದ ಮಹಿಳೆಗೆ ಜೀವಾವಧಿ ಶಿಕ್ಷ

by M S MURTHY

ಕೆ.ಆರ್.ಪೇಟೆ :- ಆಸ್ತಿ ವಿಚಾರದಲ್ಲಿ ಗಂಡ, ಅತ್ತೆ ಹಾಗೂ ಮಾವನನ್ನು ಕೊಲೆ ಮಾಡಿದ್ದ ಮಹಿಳೆಗೆ ಶ್ರೀರಂಗಪಟ್ಟಣದ ಜಿಲ್ಲಾ ಮತ್ತು ಸೇಷನ್ಸ್  ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತಾಲ್ಲೂಕಿನ  ಹೆಮ್ಮಡಹಳ್ಳಿ ಗ್ರಾಮದ ನಾಗಮಣಿ ಜೀವಾವಧಿ ಶಿಕ್ಷೆಗೆ ಗುರಿಯಾದವರಾಗಿದ್ದು,ನಾಲ್ಕು ವರ್ಷಗಳ ಹಿಂದೆ ಆಸ್ತಿ ಹಂಚಿಕೆ ವಿಚಾರದಲ್ಲಿ ಅಸಮಧಾನಗೊಂಡಿದ್ದ ಈಕೆ ಅತ್ತೆ, ಮಾವ ಹಾಗೂ ತನ್ನ ಗಂಡನನ್ನು ಈಳಿಗೆ ಮಣೆಯಿಂದ  ಹತ್ಯೆ ಮಾಡಿದ್ದಳು.
ಹೆಮ್ಮಡಹಳ್ಳಿ ಗ್ರಾಮದ ನಾಗಮಣಿ ಕೋಂ ನಾಗರಾಜು ಆಸ್ತಿ ಹಂಚಿಕೆ ವಿಚಾರದಲ್ಲಿ ಅಸಮಧಾನಗೊಂಡು, ತನಗೆ ಅತ್ತೆ, ಮಾವ ಬದುಕಿರುವವರೆವಿಗೂ ಆಸ್ತಿ ಸಿಗುವುದಿಲ್ಲ. ಈಗಲೇ ಆಸ್ತಿ ನನ್ನ ಹೆಸರಿಗೆ ಮಾಡಿಕೊಳ್ಳಬೇಕೆಂಬ ದುರಾಸೆಯಿಂದ 2020 ಅಕ್ಟೋಬರ್ 16 ರಂದು  ಮನೆಯಲ್ಲಿದ್ದ ಕಾಯಿ ತುರಿಯುವ ಈಳಿಗೆ ಮಣೆಯಿಂದ  ಅತ್ತೆ ಕುಳ್ಳಮ್ಮ, ಮಾವ ವೆಂಕಟೇಗೌಡ,  ಗಂಡ ನಾಗರಾಜು ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಳು
ವೃತ್ತ ನಿರೀಕ್ಷಕ ಕೆ.ಎನ್.ಸುಧಾಕರ್  ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡುಕಲಂ:506-504-324-307-302 ಐಪಿಸಿ ರೀತ್ಯಾ  ತನಿಖೆ ಕೈಗೊಂಡು ಆರೋಪಿಯ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸದರಿ ಪ್ರಕರಣದಲ್ಲಿ  ಶ್ರೀರಂಗಪಟ್ಟಣದ  3ನೇ ಅಪರ ಜಿಲ್ಲಾ ಮತ್ತು ಸೇಸನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಗೋಪಾಲಕೃಷ್ಣ ರೈ  ಅಪರಾಧಿ ನಾಗಮಣಿ ಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ  ದಂಡ ವಿಧಿಸಿ ತೀರ್ಪು ನೀಡಿದ್ದಾರೆ.  ಪ್ರಕರಣದಲ್ಲಿ ಸರ್ಕಾರದ ಪರವಾಗಿ  ಸರ್ಕಾರಿ ಅಭಿಯೋಜಕರಾದ ಪ್ರಫುಲ್ಲಾ ಎಂ.ಕೆ  ವಾದ ಮಂಡಿಸಿದ್ದರು.

You may also like

Leave a Comment