Home ಜಿಲ್ಲೆಪಾಕಿಸ್ತಾನ ವಿರುದ್ಧ ‘ಆಪರೇಷನ್ ಸಿಂಧೂರ’: ಭಾರತೀಯ ಸೇನೆ ಪರಾಕ್ರಮಕ್ಕೆ ಬಿಜೆಪಿ ಸಂಭ್ರಮಾಚರಣೆ

ಪಾಕಿಸ್ತಾನ ವಿರುದ್ಧ ‘ಆಪರೇಷನ್ ಸಿಂಧೂರ’: ಭಾರತೀಯ ಸೇನೆ ಪರಾಕ್ರಮಕ್ಕೆ ಬಿಜೆಪಿ ಸಂಭ್ರಮಾಚರಣೆ

by M S MURTHY

ಮಂಡ್ಯ : ಪಾಕಿಸ್ತಾನದ ಉಗ್ರರ ನೆಲೆ ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯ ಪರಾಕ್ರಮದ ವಿಜಯೋತ್ಸವವನ್ನು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಆಚರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ ಪಾಕಿಸ್ತಾನದಲ್ಲಿ ಉಗ್ರರನ್ನ ದಮನ ಮಾಡಿದ ರೆಫೆಲ್ ಯುದ್ದ ನೌಕೆ ಮಾದರಿಗೆ  ನಿಂಬೆ ಹಣ್ಣು ಮೆಣಸಿನಕಾಯಿ ಕಟ್ಟಿ ಸಿಂಧೂರ ಇಟ್ಟು ಸಿಹಿ ಹಂಚಿ ಸಂಭ್ರಮಿಸಿದರು.
ಜಮ್ಮು, ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಅಮಾಯಕರ ಪ್ರಾಣ ತೆಗೆದಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ದೇಶದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.
ಪಾಕಿಸ್ತಾನದ ವಿರುದ್ಧ ಸಮರ ಸಾರಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ  ಉದ್ಯೋಗ,ಶಿಕ್ಷಣ, ವ್ಯಾಪಾರ,ಆರೋಗ್ಯ ನೆಪದಲ್ಲಿ ರಾಜ್ಯಗಳಲ್ಲಿ ನೆಲೆಸಿರುವ  ಪಾಕಿಸ್ತಾನಿ ಪ್ರಜೆಗಳನ್ನು   ಗಡಿವಾರು ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ  ನೀಡಿದ್ದು  ಹಾಗಾಗಿ ಮಂಡ್ಯ ಜಿಲ್ಲೆಯಲ್ಲಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಕ್ರಮ ವಾಸಿಗಳನ್ನು  ಪತ್ತೆ ಹಚ್ಚಿ  ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ವಿವೇಕ್, ಅಶೋಕ್ ಕುಮಾರ್, ಶಿವಲಿಂಗಯ್ಯ, ಪಿಹಳ್ಳಿ ರಮೇಶ್, ನಿತ್ಯಾನಂದ, ಶಿವಕುಮಾರ್ ಆರಾಧ್ಯ, ಶಿವಲಿಂಗಮ್ಮ, ಬಿ ಕೃಷ್ಣ ನೇತೃತ್ವ ವಹಿಸಿದ್ದರು.

You may also like

Leave a Comment