ಮಂಡ್ಯ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಿರುವುದರಿಂದ ಖಾಸಗಿ ವಲಯ ದಲ್ಲೂ ರಜೆ ನೀಡಲು ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸುವಂತೆ ಒತ್ತಾಯಿಸಿ ಕರ್ನಾಟಕ ಸಂವಿಧಾನ ಸೇನೆ ಮನವಿ ಮಾಡಿತು.
ನಗರದ ಕಾರ್ಮಿಕ ಇಲಾಖೆ ಕಚೇರಿಗೆ ತೆರಳಿದ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿ, ದೇಶಕ್ಕೆ ಸಂವಿಧಾನ ರಚಿಸಿ ಕೊಟ್ಟಿದ್ದಲ್ಲದೆ ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿದ ಅಂಬೇಡ್ಕರ್ ರವರ ಜನ್ಮದಿನವಾದ ಏಪ್ರಿಲ್ 14ರಂದು ಸಾರ್ವತ್ರಿಕ ರಜೆಯನ್ನು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ ಘೋಷಿಸಿದೆ, ಸಾರ್ವತ್ರಿಕ ರಜೆ ಸರ್ಕಾರಿ ಹಾಗೂ ಖಾಸಗಿ ವಲಯಕ್ಕೆ ಅನ್ವಯ ಆಗಲಿದೆ ಆದರೆ ಖಾಸಗಿ ವಲಯದಲ್ಲಿ ರಜೆ ನೀಡದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.
ಹಾಗಾಗಿ 2026 ಏಪ್ರಿಲ್ 14 ರ ಅಂಬೇಡ್ಕರ್ ಜಯಂತಿ ದಿನ ರಜೆ ನೀಡಲು ಖಾಸಗಿ ವಲಯದ ಎಲ್ಲಾ ಕಚೇರಿ ಕಾರ್ಖಾನೆ ಗಳಿಗೆ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸಂವಿಧಾನ ಸೇನೆಯ ನರಸಿಂಹಮೂರ್ತಿ, ಅಭಿ ಒಕ್ಕಲಿಗ, ಪ್ರದೀಪ್ ನೇತೃತ್ವ ವಹಿಸಿದ್ದರು.
ಅಂಬೇಡ್ಕರ್ ಜಯಂತಿಗೆ ಖಾಸಗಿ ವಲಯದಲ್ಲೂ ರಜೆ ನೀಡಲಿ
134

