ಮಂಡ್ಯ : ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಳವಳ್ಳಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು,ಬಂಧಿತ ಕಳ್ಳರಿಂದ 25.63 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅಬ್ದುಲ್ ಜಬ್ಬಾರ್ ರವರ ಮಗ ಜೆ ಸೈಯದ್ ಅಹಮದ್ ಮತ್ತು ಬೆಂಗಳೂರಿನ ಕೆಆರ್ ಪುರಂ ನ ದೇವಸಂದ್ರದ ಭಾಷಾ ಸಾಹೇಬ್ ಮಗ ತಂಪಾಷಾ ಬಂದಿತ ಆರೋಪಿಗಳಾಗಿದ್ದು ಇವರಿಂದ 319 ಗ್ರಾಂ ಚಿನ್ನ, 132 ಗ್ರಾಂ ಬೆಳ್ಳಿ ಐ10 ಕಾರು ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ 25.63 ಲಕ್ಷ ಆಗಿದೆ ಎಂದರು.
ಬಂಧಿತರು ಮಳವಳ್ಳಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಮನೆ, ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು, ಮಂಡ್ಯ ನಗರ ಪಶ್ಚಿಮಠ ವ್ಯಾಪ್ತಿಯಲ್ಲಿ ಒಂದು, ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಹಾಗೂ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಮನೆಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಮಳವಳ್ಳಿ ತಾಲ್ಲೂಕು ಹೊಸದೊಡ್ಡಿ ಗ್ರಾಮದ ಗೋವಿಂದಯ್ಯರ ಪುತ್ರ ಪುಟ್ಟವೆಂಕಟಯ್ಯರ ಮನೆಯಲ್ಲಿ ಕಳೆದ ಮಾರ್ಚಿ ತಿಂಗಳಲ್ಲಿ ಕಳ್ಳರು ಮನೆಗೆ ನುಗ್ಗಿ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ, 4.90 ಲಕ್ಷ ಬೆಲೆ ಬಾಳುವ 75 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದರು, ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಗಂಗಾಧರಸ್ವಾಮಿ,ಮಳವಳ್ಳಿ ಡಿವೈ.ಎಸ್.ಪಿ ವಿ.ಕೃಷ್ಣಪ್ಪ ಹಾಗೂ ಮಳವಳ್ಳಿ ಗ್ರಾಮಾಂತರ ಠಾಣೆಯ ಪೊಲೀಸ್ಇನ್ ಸ್ಪೆಕ್ಟರ್ ಶ್ರವಣ್.ಸ.ವಾಸರಡ್ಡಿ, ಪಿ.ಎಸ್.ಐ ಶಿವಶಂಕರ್, ಪೊಲೀಸ್ ಪೇದೆಗಳಾದ ಮಣಿಕಂಠಸ್ವಾಮಿ, ಶಿವಕುಮಾರ್,ರಿಯಾಜ್ ಪಾಷ, ರವಿಕಿರಣ್, ಲೋಕೇಶ್, ಸಿ.ಪಿ.ಸಿ ಯವರುಗಳಾದ ಕೌಶಿಕ್, ನಾಗೇಂದ್ರ, ಬಾನಪ್ಪರಾಠೋಡ್, ಪರಮಾನಂದ. ದೇವರಾಜ ಆರ್.ಸಿ. ರವರ ತಂಡ ರಚಿಸಲಾಗಿತ್ತು.
ಪೊಲೀಸರ ತಂಡ ಇಬ್ಬರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು,ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ,ಸಿಬ್ಬಂದಿಯವರ ಸೇವೆಯನ್ನುಶ್ಲಾಘಿಸಿವುದಾಗಿ ತಿಳಿಸಿದರು
ಇಬ್ಬರು ಮನೆಗಳ್ಳರ ಬಂಧನ
85

