Tuesday, December 16, 2025
Homeಜಿಲ್ಲೆತಮಿಳು ಕಾಲೋನಿ ಸ್ಥಳಾಂತರಕ್ಕೆ ಆಗ್ರಹಿಸಿ ಬೈಕ್ ಜಾಥಾ

ತಮಿಳು ಕಾಲೋನಿ ಸ್ಥಳಾಂತರಕ್ಕೆ ಆಗ್ರಹಿಸಿ ಬೈಕ್ ಜಾಥಾ

ಮಂಡ್ಯ : ಮಂಡ್ಯ ವೈದ್ಯಕೀಯ ಮಹಾವಿದ್ಯಾಲಯದ ಜಾಗ ಅತಿಕ್ರಮಿಸಿ ವಾಸಿಸುತ್ತಿರುವ ತಮಿಳು ಕಾಲೋನಿ ಸ್ಥಳಾಂತರಕ್ಕೆ ಆಗ್ರಹಿಸಿ ಕನ್ನಡಪರ ಹಾಗೂ  ರೈತಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದಲ್ಲಿ ಬೈಕ್ ಜಾಥಾ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ,ಕರ್ನಾಟಕ ರಾಜ್ಯ ರೈತ ಸಂಘ,ಕರ್ನಾಟಕ ರಾಷ್ಟ ಸಮಿತಿ, ಜೈ ಕರ್ನಾಟಕ ಪರಿಷತ್ ಹಾಗೂ ಕರುನಾಡ ಸೇವಕರು ಸಂಘಟನೆ ಹಾಗೂ ರೈತಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಆವರಣದಿಂದ  ಬೈಕ್ ಜಾಥಾ ಹೊರಟು  ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕರಪತ್ರ ಹಂಚಿಕೆ ಮಾಡುವ ಮೂಲಕ ತಮಿಳು ಕಾಲೋನಿ ಸ್ಥಳಾಂತರಿಸಿ ಮೆಡಿಕಲ್ ಕಾಲೇಜು ಭೂಮಿ ಉಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ದೊಡ್ಡಾಸ್ಪತ್ರೆ ಎಂದೇ ಕರೆಸಿಕೊಳ್ಳುತ್ತಿದ್ದ ಜಿಲ್ಲಾಸ್ಪತ್ರೆ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಾಗಿ ರೂಪಾಂತರಗೊಂಡಿದೆ, ಈ ಆಸ್ಪತ್ರೆಯ ಮಂಡ್ಯ ಜಿಲ್ಲೆ ಮಾತ್ರವಲ್ಲದೆ ನೆರೆಯ ರಾಮನಗರ ಚನ್ನಪಟ್ಟಣ ಕುಣಿಗಲ್ ಟಿ ನರಸೀಪುರ ಸೇರಿದಂತೆ ೩೦ ಲಕ್ಷ ಮಂದಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿದೆ,ಎಂಟು ನೂರು ಹಾಸಿಗೆಗಳ ಈ ಆಸ್ಪತ್ರೆಗೆ ಒಳರೋಗಿಗಳು ಮಾತ್ರವಲ್ಲದೆ ಪ್ರತಿ ನಿತ್ಯ ಮೂರು ಸಾವಿರಕ್ಕೂ ಅಧಿಕ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.ಎಂಬಿಬಿಎಸ್, ನರ್ಸಿಂಗ್,  ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಕಲಿಕೆ ಮಾಡುತ್ತಿದ್ದಾರೆ,
ಮಂಡ್ಯ ಜಿಲ್ಲೆ ರಚನೆಯಾದ 2939 ರ ನಂತರ 1951  ಹಾಗೂ1948 ರಲ್ಲಿ ಭವಿಷ್ಯದ ಬಹುದೊಡ್ಡ ಆಸ್ಪತ್ರೆಯ ನಿರ್ಮಾಣಕ್ಕಾಗಿ ಅಂದಿನ ಮೈಸೂರು ಮಹರಾಜರು ಹಾಗೂ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ 40 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನ ಮಾಡಿಕೊಂಡಿದ್ದರು,
ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈಗ ಎದೆ ರೋಗದ (ಹೃದ್ರೋಗ) ಆಸ್ಪತ್ರೆ. ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣದ ಚಿಕಿತ್ಸೆ ಒದಗಿಸಲು ಟ್ರಾಮಾ ಕೇರ್.ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗಳು ನಿರ್ಮಾಣವಾಗಬೇಕಿದೆ.ಈ ಆಸ್ಪತ್ರೆಗಳ ನಿರ್ಮಾಣಕ್ಕೆ 30 ಕೋಟಿಗೂ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಿದೆ ಆದರೂ ಸಹ ಈವರೆಗೂ ನಿರ್ಮಾಣವಾಗದೆ ಇಂತಹ ರೋಗಭಾದಿತರು   ಬೆಂಗಳೂರು ಮೈಸೂರಿಗೆ ತೆರಳಬೇಕಿದೆ. ದಕ್ಷ ಸಿಬ್ಬಂದಿ ಇದ್ದರೂ ಹೆರಿಗೆ ವಾರ್ಡ್ ನಲ್ಲಿ  ಬೆಡ್ ಲಭ್ಯವಿಲ್ಲದೆ ಒಂದೇ ಬೆಡ್ ನಲ್ಲಿ ಎರಡು ಮೂರು  ಗರ್ಭಿಣಿಯರು ಪರಿ ತಪಿಸುವಂತಾಗಿದೆ, ಅಷ್ಟೇ ಅಲ್ಲದೆ  ತಾಯಿ ಮಕ್ಕಳ ಆಸ್ಪತ್ರೆಗೆ ಮಂಡ್ಯ ಮೆಡಿಕಲ್ ಕಾಲೇಜು ಆವರಣದಲ್ಲಿ ಜಾಗವಿಲ್ಲದೆ ಮಂಡ್ಯದಿಂದ ಹನ್ನೆರೆಡು ಕಿಲೋಮೀಟರ್ ದೂರದ ಬಿ ಹೊಸೂರು ಕಾಲೋನಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ.ಅಗತ್ಯ ವಾಹನ ಸೌಕರ್ಯವಿಲ್ಲದೆ ಹೊಸೂರು ಕಾಲೋನಿ ಆಸ್ಪತ್ರೆಗೆ ಜನರು ಬಾರದೆ ಬಾಗಿಲು ಮುಚ್ಚುವಂತಾಗಿದೆ ಎಂದು ದೂರಿದರು.
ಸ್ವತಂತ್ರ ಪೂರ್ವದಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಗೆ 40 ಎಕರೆ ಭೂ ಸ್ವಾಧೀನವಾಗಿದ್ದರು ಅದರಲ್ಲಿ 26 ಎಕರೆ ಮಾತ್ರ ಸ್ವಾಧೀನದಲ್ಲಿದೆ. ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡ ಇನ್ನುಳಿದ 14 ಎಕರೆಯಲ್ಲಿ ತಮಿಳು ಕಾಲೋನಿ ವಾಸಿಗಳು ಹಾಗೂ ಕೆಲ ಬಲಾಢ್ಯರು ಮೆಡಿಕಲ್ ಕಾಲೇಜು ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ.ರಾಜ್ಯ ಹೈಕೋರ್ಟ್ ಸಹ ತಮಿಳು ವಾಸಿಗಳಿಗೆ ಪರ್ಯಾಯ ವಸತಿ ಒದಗಿಸಿ ತಮಿಳು ಕಾಲೋನಿ ಸ್ಥಳಾಂತರಿಸಲು ಆದೇಶ ನೀಡಿದೆ ಹಾಗಾಗಿ ತಮಿಳು ನಿವಾಸಿಗಳಿಗಾಗಿ ಮಂಡ್ಯ ಕೆರೆ ಅಂಗಳದ ವಿವೇಕಾನಂದ ಬಡಾವಣೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ರೂ 38 ಕೋಟಿ ವೆಚ್ಚದಲ್ಲಿ 576 ಮನೆಗಳನ್ನು ನಿರ್ಮಿಸಿಕೊಟ್ಟಿದೆ ಆದರೆ ಅಲ್ಲಿಗೆ ತರಲು ತಮಿಳು ನಿವಾಸಿಗಳು ನಿರಾಕರಿಸುತ್ತಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.
ರಾಜ್ಯ ಉಚ್ಚ ನ್ಯಾಯಾಲಯ ಮೆಡಿಕಲ್ ಕಾಲೇಜಿನ ಪರವಾದ ತೀರ್ಪು ನೀಡಿದರು ಅದನ್ನು ಜಾರಿಗೊಳಿಸಲು ಈವರೆಗಿನ ಯಾವುದೆ ನಿರ್ದೇಶಕರು ‌ಆಡಳಿತಾಧಿಕಾರಿಗಳು ಯಾವುದೆ ಪ್ರಯತ್ನ ನಡೆಸಲಿಲ್ಲ, ಜನಪರ ಸಂಘಟನೆಗಳ  ಹೋರಾಟದ ಪರಿಣಾಮವಾಗಿ ಈಗಷ್ಟೆ ಉಚ್ಚ ನ್ಯಾಯಾಲಯದಲ್ಲಿ ಪ್ರತಿವಾದಿಯಾಗಿ ಅರ್ಜಿ ಸಲ್ಲಿಸಿದೆ ಎಂದು ಹೇಳಿದರು.
ಆಸ್ಪತ್ರೆ ಸ್ಥಳವನ್ನು ಆಕ್ರಮಿಸಿರುವ ತಮಿಳು ಕಾಲೋನಿ ನಿವಾಸಿಗಳಿಗೆ ಒಂದಲ್ಲ ಎರಡಲ್ಲ ನಾಲ್ಕು ಬಾರಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ1980 ರಲ್ಲಿ ಮಂಡ್ಯ ಆಸ್ಪತ್ರೆ ವಿಸ್ತರಣೆಗಾಗಿ ಅಂದಿನ ಶಾಸಕ ಎಸ್ ಡಿ ಜಯರಾಂ ಆಸ್ಪತ್ರೆ ಪಕ್ಕದ ತಮಿಳರಿಗಾಗಿ ಈಗಿನ ಹೆಬ್ಬಾಳದ ಬಳಿಯ ರೇಷ್ಮೆ ಇಲಾಖೆ ಬಳಿ 300 ಮನೆಗಳನ್ನು  ಮನೆಗಳು ಕಳಪೆ ಅದು ಎಂದು ತಮಿಳರು ಸ್ಥಳಾಂತರಗೊಳ್ಳಲು ನಿರಾಕರಿಸಿ  ದರು.ತದನಂತರ ಈ ಮನೆಗಳು ಅನ್ಯರ ಪಾಲಾದವು.ಇವರು ಕಳಪೆ ಎಂದ ಮನೆಗಳು ನಲವತ್ತು ವರ್ಷವಾದರೂ ಇಂದಿಗೂ ಗಟ್ಟಿಮುಟ್ಟಾಗಿಯೆ ಇವೆ.ನಂತರ ಶ್ರೀನಿವಾಸಪುರ ಮರಕಾಡು ದೊಡ್ಡಿ ಬಳಿ ಆಸ್ಪತ್ರೆ ಪಕ್ಕದ ತಮಿಳರಿಗಾಗಿ 300 ಮನೆಗಳನ್ನು 1989 ರಲ್ಲಿ ನಿರ್ಮಿಸಲಾಯಿತು.ಅಲ್ಲಿಗೂ ತೆರಳಲು ನಿರಾಕರಿಸಿದ್ದಾರೆ, 1991 ರಲ್ಲಿ ಹಾಲಹಳ್ಳಿಯಲ್ಲಿ 500 ಮನೆಗಳನ್ನು  ನಿರ್ಮಿಸಲಾಯಿತು,ಆಗಲೂ ಸಹ ಅಲ್ಲಿಗೆ ತೆರಳದೆ  ಜಿಲ್ಲೆಯ ಅಭಿವೃದ್ದಿಗೆ ಅಡ್ಡಗಾಲಾಗಿದ್ದಾರೆ, ಇದೀಗ ನಾಲ್ಕನೆ ಬಾರಿ ನಗರದ ವಿವೇಕಾನಂದ ಬಡಾವಣೆಯ ಬೈಪಾಸ್ ಗೆ ಹೊಂದಿಕೊಂಡತೆ ನಿರ್ಮಿಸಿರುವ ಮನೆಗಳಿಗೆ ತೆರಳದೆ ಹಠ ಹಿಡಿದು ಮಂಡ್ಯ ಮೆಡಿಕಲ್ ಕಾಲೇಜು ಅಭಿವೃದ್ಧಿ ವಿಸ್ತರಣೆಗೆ ಅಡೆತಡೆಯಾಗಿದ್ದಾರೆ, ತಕ್ಷಣ ತಮಿಳು ಕಾಲೋನಿ ಸೇರಿದಂತೆ ಸಂಪೂರ್ಣ ಒತ್ತುವರಿ ತೆರವುಗೊಳಿಸಬೇಕು.ಉಳಿದ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ. ಕನ್ನಡ ಪ್ರಕಾಶ್.ಕರುನಾಡ ಸೇವಕರ ಸಂಘದ. ರಾಜ್ಯಧ್ಯಕ್ಷ ಲೋಕೇಶ್ ಗೌಡ .ಕರವೇ ರಾಜ್ಯಧ್ಯಕ್ಷ.ಶಿವರಾಮೇಗೌಡ.ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ.ಎಂ.ಡಿ. ವೆಂಕಟೇಶ್.ಮಹಿಳಾ ರೈತ  ಹೋರಾಟಗಾರ್ತಿ ಸುನಾಂದ ಜಯರಾಂ. ಕರುನಾಡ ಸೇವಕರ ಸಂಘಟನೆ ಅಧ್ಯಕ್ಷ. ಎಂ.ಬಿ.ನಾಗಣ್ಣ ಗೌಡ, ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಯಣ್ .ಕರವೇ ಜಯರಾಂ. ಕೆ.ಆರ್.ಎಸ್. ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡ. ರೈತ ಸಂಘದ ಮುದ್ದೇಗೌಡ ನೇತೃತ್ವ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments