Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
Homeರಾಜಕೀಯಲೋಕಸಭೆ ಚುನಾವಣೆಗೆ ಜೆಡಿಎಸ್ ಯಾರನ್ನಾದರೂ ನಿಲ್ಲಿಸಲಿ : ಸಚಿವ ಚೆಲುವರಾಯಸ್ವಾಮಿ

ಲೋಕಸಭೆ ಚುನಾವಣೆಗೆ ಜೆಡಿಎಸ್ ಯಾರನ್ನಾದರೂ ನಿಲ್ಲಿಸಲಿ : ಸಚಿವ ಚೆಲುವರಾಯಸ್ವಾಮಿ

ಮದ್ದೂರು :- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಯಾರನ್ನಾದರೂ ನಿಲ್ಲಿಸಲಿ, ಕಾಂಗ್ರೆಸ್ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಸಾದೊಳಲು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಅವರ ಪಕ್ಷದವರು ಆಯ್ಕೆ ಮಾಡುತ್ತಾರೆ,ಯಾರನ್ನಾದರೂ ನಿಲ್ಲಿಸಲಿ ಚಂದು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿರುವುದರಿಂದ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡಬಹುದು, ಚುನಾವಣೆಗೆ ನನ್ನ ಪತ್ನಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತಿಸಿಲ್ಲ, ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದರು.
ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದ್ದು ಈ ಬಗ್ಗೆ ಕಾನೂನು ತಜ್ಞರ ಜೊತೆ ಸಂಬಂಧಪಟ್ಟ ಸಚಿವರು ಮಾತನಾಡಲಿದ್ದಾರೆ,ಜಲಾಶಯಗಳಲ್ಲಿ ನೀರು ಇದ್ದರೆ ತಾನೇ ಬಿಡೋಕೆ ಸಾಧ್ಯ.
ಪರಿಸ್ಥಿತಿ ಏನು ಇದೆ ಅದನ್ನು ನೋಡಬೇಕಿದೆ.ನಮ್ಮಲ್ಲಿ ನೀರು ಇದ್ದರೆ ಹಿಡಿದು ಇಟ್ಟುಕೊಳ್ಳಲು ಸಾಧ್ಯವಿಲ್ಲ, ಈಗಾಗಲೇ ಬೆಳೆಗೆ ನೀರು ಕೊಟ್ಟಿದ್ದೇವೆ. ಸದ್ಯಕ್ಕೆ ಕುಡಿಯಲು ಮಾತ್ರ ನೀರು ಇದೆ, ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ರೈತರು ಹೋರಾಟ ಮಾಡುತ್ತಿದ್ದು. ರೈತರ ಕಾಪಾಡಲು ಸರ್ಕಾರ ಬದ್ಧವಾಗಿರುವುದರಿಂದ ಹೋರಾಟ ಕೈಬಿಡಬೇಕು ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ ಅನುಮತಿಯನ್ನು ಹಿಂಪಡೆದಿರುವುದು ಸರ್ಕಾರದ ತೀರ್ಮಾನವಾಗಿದ್ದು, ಈ ಹಿಂ ದಿನ ಸರ್ಕಾರ ಹೆಚ್ಚುವರಿಗೆ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಜಾತಿ ಗಣತಿ ಮಾಡಲಾಗಿದ್ದು, ಕೆಲ ಸಮುದಾಯದವರು ಗಣತಿ ದಾರರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿಲ್ಲ ಎಂದು ಆಕ್ಷೇಪ ಮಾಡಿದ್ದಾರೆ, ಒಕ್ಕಲಿಗ ಸಮುದಾಯದವರು ಸಹ ಆಕ್ಷೇಪ ಮಾಡಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಗೆ ನಾವು ಹೋಗಿದ್ದೆವು, ಸ್ವಾಮೀಜಿ ಸಹ ಕಳವಳ ವ್ಯಕ್ತಪಡಿಸಿದರು, ಸಮುದಾಯದ ಆಕ್ಷೇಪದ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ, ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ದೇಶದ ಎಲ್ಲಡೆ ಜಾತಿಗಣತಿ ನಡೆಸಲು ಚರ್ಚೆ ನಡೆಯುತ್ತಿದೆ, ಕಾಂಗ್ರೆಸ್ ಪಕ್ಷ ಕೂಡ ರಾಷ್ಟ್ರ ವ್ಯಾಪ್ತಿ ಜನಗಣತಿ ನಡೆಸಬೇಕೆಂದು ಒತ್ತಡ ಹಾಕುತ್ತಿದೆ ಎಂದರು
ಮಾಜಿ ಶಾಸಕ ಸುರೇಶ್‌ಗೌಡಗೆ ಜ್ಞಾನವಿಲ್ಲ ಬುದ್ದಿವಂತಿಕೆ ಇದ್ಯೋ ಇಲ್ವೋ ಏನೇನೋ ಮಾತಾಡುತ್ತಾರೆ.,ಪಾಪ ಆತ ಪಾಪದ ಹುಡುಗ ಅಂತಾ ಕಾಣುತ್ತೆ.ಆತನ ಬಗ್ಗೆ ನನ್ನ ಕೇಳಬೇಡಿ ಎಂದು ಖಾರವಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿ ಸಂಸ್ಕಾರ ಮತ್ತು ನಾಲಿಗೆ ಹಾಳು ಮಾಡಿಕೊಳ್ಳಲ್ಲ,ಬಿಡದಿಯಲ್ಲಿ ಎಷ್ಟು ಒತ್ತುವರಿಯಾಗಿದೆ ಅಂತಾ ಕುಮಾರಸ್ವಾಮಿ ವಿವರ ನೀಡಲಿ,ಚೆಲುವರಾಯಸ್ವಾಮಿ ಜಮೀನು ಎಲ್ಲೇಲ್ಲಿ ಇದೆ ಎಂದು ಏಜೆನ್ಸಿ ಬಿಟ್ಟು ಹುಡುಕಿಸುತ್ತಿದ್ದಾರೆ.ಪಾಪ ಅವರಿಗೆ ನನ್ನ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಸಹಿಸಲು ಆಗುತ್ತಿಲ್ಲ.ನನಗೂ ಅವರ ವೇದನೆ ನೋಡಿ ಅಯ್ಯೋ ಅನ್ನಿಸುತ್ತದೆ.
ಬಾಯಿ ಬಂದ ಹಾಗೆ ಎಲ್ಲರ ಬಗ್ಗೆ ಲಘುವಾಗಿ ಮಾತಾಡುತ್ತಾರೆ.ಮುಖ್ಯಮಂತ್ರಿ ಆದವರು ದೇಶ ಆಳ್ವಿಕೆ ಮಾಡಿದ ಕುಟುಂಬದವರು ಮಾತು ಹಿಡಿತದಲ್ಲಿರಬೇಕು ಎಂದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments