ಮಂಡ್ಯ :- ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ಸಮಾಜದಲ್ಲಿ ಭ್ರಷ್ಟರಿಗೆ ಗೌರವ ಮನ್ನಣೆ ಸಿಗುತ್ತಿದೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಮಂಡ್ಯದಲ್ಲಿ ಭ್ರಷ್ಟ ವ್ಯವಸ್ಥೆ ವಿರುದ್ಧ ಈಡುಗಾಯಿ ಚಳವಳಿ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಭ್ರಷ್ಟರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಈಡುಗಾಯಿ ಓಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮನೆಮಾಡಿದೆ, ಶಾಲೆ,ಆಸ್ಪತ್ರೆ, ಸರ್ಕಾರಿ ಕಚೇರಿ, ಉದ್ಯೋಗ ಪ್ರತಿಯೊಂದರಲ್ಲೂ ಲಂಚ ಇಲ್ಲದೆ ಕೆಲಸ ಆಗುತ್ತಿಲ್ಲ, ಶಾಸಕರು ಸಂಸದರು ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು.
ನಾಡನ್ನು ಆಳಿದ ನಿಜಲಿಂಗಪ್ಪ ಕೆಂಗಲ್ ಹನುಮಂತಯ್ಯ, ಕೆ ಸಿ ರೆಡ್ಡಿ ಸೇರಿದಂತೆ ಹಲವರ ಅವಧಿಯಲ್ಲಿ ಒಳ್ಳೆಯ ಆಡಳಿತ ನೋಡಿದ್ದೆವು ಆದರೆ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಭ್ರಷ್ಟಾಚಾರ ಮಿತಿಮೀರಿತು, ಶಾಸಕರನ್ನ ಖರೀದಿ ಮಾಡಿದ್ದನ್ನು ನೋಡಿದೆವು, ಇಂಥ ನೀಚ ಕೃತ್ಯ ಮಾಡಿದ ಬಳ್ಳಾರಿ ಗಣಿ ಲೂಟಿಕೋರರು ಜೈಲು ಪಾಲಾದನ್ನು ಕಂಡಿದ್ದೇವೆ, ಯಡಿಯೂರಪ್ಪ ಜೊತೆಗೆ ಕುಮಾರಸ್ವಾಮಿ ಕಾಲದಲ್ಲಿ ಭ್ರಷ್ಟಾಚಾರ ಮನೆ ಮಾಡಿತ್ತು, ಭ್ರಷ್ಟಾಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸಮಾನ ಪಾಲುದಾರರು ಆದರೆ ಸಮಾಜದಲ್ಲಿ ಭ್ರಷ್ಟರಿಗೆ ಗೌರವ ಮನ್ನಣೆ ಸಿಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು .
ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದವರು ಬಿ ಎಸ್ ಯಡಿಯೂರಪ್ಪ ಅಂತಹ ಮಹಾನುಭಾವರು ಇಂದು ಅಭಿಮಾನೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಲಂಚ ತಾಂಡವ ವಾಡುತ್ತಿದೆ, ಇಂತಹ ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ರಾಜ್ಯವನ್ನಾಳಿದ ಮೂರು ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ, ಕನ್ನಡ ನಾಡಿನಲ್ಲಿ ಹೊಸ ರಾಜಕೀಯ ಶಕ್ತಿ ಉದಯವಾಗಬೇಕಾಗಿದೆ, ಆ ನಿಟ್ಟಿನಲ್ಲಿ ಕಾನೂನು ತಜ್ಞರಾದ ಪ್ರಮೀಳಾ ನೆಸರ್ಗಿ ರವರನ್ನು ಸಲಹೆ ನೀಡಲು ಕೋರಿದ್ದೇವೆ, ವಿದ್ಯಾರ್ಥಿಗಳು, ಯುವ ಜನತೆ, ಕಾರ್ಮಿಕ ವಲಯ ಭ್ರಷ್ಟ ವ್ಯವಸ್ಥೆ ವಿರುದ್ಧ ಹೊಸ ಚೈತನ್ಯಕ್ಕೆ ನಾಂದಿ ಆಡಬೇಕು, ಕನ್ನಡ ನಾಡಿನಲ್ಲಿ ಕನ್ನಡದ ಶಕ್ತಿ ರಾಜಕೀಯ ಜನ್ಮ ಪಡೆಯಬೇಕು ಆ ನಿಟ್ಟಿನಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್.ನಗರಸಭಾ ಮಾಜಿ ಸದಸ್ಯೆ ಸೌಭಾಗ್ಯ .ಬೆಟ್ಟಹಳ್ಳಿ. ಮಂಜುನಾಥ್ .ಹೆಚ್.ವಿ.ಗಿರೀಶ್ ಗೌಡ. ಪಾರ್ಥಸಾರಥಿ. ನಾರಯಣಸ್ವಾಮಿ.ಮಣಿಕಂಠ. ಜಗದೀಶ್..ಪುಪ್ಪಲತಾ.ವಿ.ಎನ್.ಗಂಗಾಧರ. ಆರ್.ಜೆ.ಅರ್ಜುನ್. ಕೆ.ಜಯರಾಂ.ಕಲೀಂ ಪಾಷ. ಪೈಜಾನ್ ಖಾನ್ ಇತರರಿದ್ದರು.
ಭ್ರಷ್ಟಾಚಾರದ ವಿರುದ್ಧ ವಾಟಾಳ್ ನಾಗರಾಜ್ ಈಡುಗಾಯಿ ಚಳವಳಿ
254
previous post

