180
ಮಂಡ್ಯ :- ತುಮಕೂರು ಜಿಲ್ಲೆ ಕುಣಿಗಲ್ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಮೂವರು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ರಾಜ್ಯ ಹೆದ್ದಾರಿ -33 ಹೊನ್ನೇನಹಳ್ಳಿ – ಚಿಗಣಿಪಾಳ್ಯ ಮದ್ಯೆ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಂಡ್ಯ ಸ್ವರ್ಣಸಂದ್ರ ಬಡಾವಣೆ ನಿವಾಸಿಗಳಾದ ಕುಮಾರ್ ನರಸಿಂಹಸ್ವಾಮಿ( 65) ಮತ್ತು ಪತ್ನಿ ಕೆ.ಆರ್ ಗಾಯಿತ್ರಿ (60) ಹಾಗೂ ಸಹೋದರಿ ಗಾಯಿತ್ರಿ ಮತ್ತು ಮೈಸೂರಿನ ಕಾರು ಚಾಲಕ ರಘುಕುಮಾರ್ ಸಾವನಪ್ಪಿದ್ದಾರೆ.
ಕುಮಾರ್ ನರಸಿಂಹಸ್ವಾಮಿ ಮತ್ತು ಗಾಯತ್ರಿ ರವರ ವಿವಾಹ ವಾರ್ಷಿಕೋತ್ಸವ ಇದ್ದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ದೇವರಾಯನದುರ್ಗ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ವಾಪಸ್ ಮಂಡ್ಯಕ್ಕೆ ಬರುತ್ತಿದ್ದರು. ಈ ವೇಳೆ ಕುಣಿಗಲ್ ಕಡೆಯಿಂದ – ತುಮಕೂರು ಕಡೆಗೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ .

