ಮಂಡ್ಯ :- ಸರ್ಕಾರಿ ಬಾಲಕಿಯರ ಬಾಲಮಂದಿರದ ಗೃಹ ಪಾಲಕಿಗೆ ಕಿರುಕುಳ ನೀಡಿ ಉದ್ಯೋಗ ಬಿಡಿಸಿರುವ ಬಾಲ ಮಂದಿರದ ಅಧೀಕ್ಷಕಿ ಜಿ ಮಂಜುಳಾ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತರು ಜಿಲ್ಲಾ ಕೇಂದ್ರ ಮಂಡ್ಯದಲ್ಲಿರುವ ಬಾಲಕಿಯರ ಬಾಲ ಮಂದಿರದಲ್ಲಿ ಗೃಹ ಪಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಧಾ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಬಾಲ ಮಂದಿರದ ಅಧೀಕ್ಷಕಿ ಮಂಜುಳಾ ಮಾನಸಿಕವಾಗಿ ಕಿರುಕುಳ ನೀಡಿ ಇನ್ನಿಲ್ಲದ ಒತ್ತಡ ನೀಡುವ ಮೂಲಕ ಕೆಲಸ ಬಿಟ್ಟು ಹೋಗುವಂತೆ ಮಾಡಿರುತ್ತಾರೆ ಎಂದು ದೂರಿದರು.
ಬೆಳಿಗ್ಗೆ 9ಕ್ಕೆ ಬಾಲ ಮಂದಿರಕ್ಕೆ ಬಂದು ರಾತ್ರಿ 8 ರವರೆಗೆ ನಿರಂತರ ಕರ್ತವ್ಯ ನಿರ್ವಹಿಸುತ್ತಿದ್ದ ರಾಧಾರಿಗೆ ಅನಾರೋಗ್ಯದ ಸಂದರ್ಭದಲ್ಲಿ ರಜೆ ನೀಡದೆ ಕೆಲಸ ಮಾಡುವಂತೆ ಒತ್ತಡ ಹಾಕುವುದು, ಶನಿವಾರ ಮತ್ತು ಭಾನುವಾರ ಕಚೇರಿಗೆ ಬಾರದೆ ಬೇರೆ ಉದ್ಯೋಗಿಗಳಿಗೆ ರಜಾ ನೀಡಿ ಇವರಿಗೆ ಮಾತ್ರ ರಜಾ ನೀಡದೆ ಕೆಲಸ ಮಾಡುವಂತೆ ಒತ್ತಡ ಹಾಕಿದ್ದಾರೆ ಅದೇ ರೀತಿ ಕೆಲಸದ ವೇಳೆ ಏಕವಚನದಿಂದ ಮಾತನಾಡುವುದು ಅವಾಚ್ಯ ಪದ ಬಳಸಿ ನಿಂದಿಸುವುದು ಸಿಎಲ್ ರಜೆ ಪಡೆದರೆ ವೇತನ ಕಡಿತ ಮಾಡುವ ಮೂಲಕ ಕಿರುಕುಳ ನೀಡಿರುತ್ತಾರೆ.
ಮಕ್ಕಳಿಗೆ ನೀಡಬೇಕಾದ ಸೋಪು, ಕೊಬ್ಬರಿಎಣ್ಣೆ, ಸಕ್ಕರೆ ಕಾಳುಕಡ್ಡಿ,ಆಹಾರ ಧಾನ್ಯಗಳನ್ನು ಸರಿಯಾಗಿ ನೀಡದ ಹಿನ್ನೆಲೆಯಲ್ಲಿ ಅಧೀಕ್ಷಕಿ ಯನ್ನು ಪ್ರಶ್ನೆ ಮಾಡಿದ್ದೆ ದೊಡ್ಡ ಅಪರಾಧ ಒಂದು ಭಾವಿಸಿ ರಾಧಾ ವಿರುದ್ಧ ಹಗೆತನ ಸಾಧಿಸಿ ಒತ್ತಡ ನೀಡುವ ಮೂಲಕ ಉದ್ಯೋಗಕ್ಕೆ ರಾಜಿನಾಮೆ ನೀಡಿ ಮನೆಗೆ ಹೋಗುವಂತೆ ಮಾಡಿದ್ದಾರೆ ಇಲಾಖೆಯ ಹಿರಿಯ ಅಧಿಕಾರಿ ರಶ್ಮಿ ರವರಿಗೆ ವಿಚಾರ ಗೊತ್ತಿದ್ದರೂ ಯಾವುದೇ ತನಿಖೆ ಮಾಡದೆ ಕಂಡು ಕಾಣದಂತೆ ಕುಳಿತಿದ್ದಾರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಹೊಣೆ ಹೊತ್ತಿರುವ ಇಲಾಖೆಯಲ್ಲಿಯೇ ಈ ರೀತಿ ಮಹಿಳೆಯರ ಶೋಷಣೆ ನಡೆದರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧೀಕ್ಷಕಿ ಜಿ.ಮಂಜುಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಶೋಷಣೆಗೆ ಒಳಗಾಗಿ ಉದ್ಯೋಗ ಕಳೆದುಕೊಂಡಿರುವ ಸಂತ್ರಸ್ತ ಮಹಿಳೆಗೆ ಉದ್ಯೋಗ ನೀಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಹೆಚ್. ಡಿ ಜಯರಾಮ್, ಪ್ರಗತಿಪರ ಸಂಘಟನೆಗಳ ಮುಖಂಡರಾದ ಎಂ ವಿ ಕೃಷ್ಣ,ಸಂತೆ ಕಸಲಗೆರೆ ಬಸವರಾಜ್, ದೇವರಾಜ್ ಕೊಪ್ಪ, ಟಿ.ಡಿ ನಾಗರಾಜು, ಎಲ್ ಸಂದೇಶ್. ಶೋಭಾ, ವೈರಮುಡಿ ಇತರರಿದ್ದರು.
ಬಾಲ ಮಂದಿರದ ಗೃಹ ಪಾಲಕಿಗೆ ಕಿರುಕುಳ : ಅಧೀಕ್ಷಕಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ
266
previous post

