Home ತಾಲೂಕುಬಾರ್ ಕೆಲಸಕ್ಕೆ ಬಾಲ ಕಾರ್ಮಿಕ : ಮಾಲೀಕನ ವಿರುದ್ಧ ಪ್ರಕರಣ ದಾಖಲು

ಬಾರ್ ಕೆಲಸಕ್ಕೆ ಬಾಲ ಕಾರ್ಮಿಕ : ಮಾಲೀಕನ ವಿರುದ್ಧ ಪ್ರಕರಣ ದಾಖಲು

by M S MURTHY

ಕೆ ಆರ್ ಪೇಟೆ  :- ಕಿಶೋರ ಕಾರ್ಮಿಕನನ್ನು ಕೆಲಸ ಕ್ಕಿರಿಸಿಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೂಕನಕೆರೆ ಗ್ರಾಮದ ಬಿಎಸ್ಆರ್ ಕಂಪರ್ಟ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕನ ವಿರುದ್ಧ ಕೆ ಆರ್ ಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆನ್ಸಿಲ್ ಪೋರ್ಟಲ್ ಗೆ ದಾಖಲಾದ ದೂರಿನ ಅನ್ವಯ  ಕಾರ್ಮಿಕ ಅಧಿಕಾರಿಗಳ ಸೂಚನೆಯಂತೆ ಬೂಕನಕೆರೆ ಗ್ರಾಮದ ಬಿ.ಎಸ್.ಆರ್ ಕಂಫರ್ಟ್  ಬಾರ್ ಅಂಡ್ ರೆಸ್ಟೋರೆಂಟ್ ಗೆ ಅನಿರೀಕ್ಷಿತ ದಾಳಿ ನಡೆಸಿದಾಗ  17 ವರ್ಷದ  ಕಿಶೋರ ಕಾರ್ಮಿಕರನ್ನು ರಕ್ಷಿಸಿ ಮಂಡ್ಯದ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಬಾಲಕರ ಬಾಲ ಮಂದಿರಕ್ಕೆ ಸೇರಿಸಲಾಯಿತು .
ಕಿಶೋರ ಕಾರ್ಮಿಕನನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ತಪ್ಪಿತಸ್ಥ ಮಾಲೀಕರ ವಿರುದ್ಧ ಕೆ.ಆರ್.ಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್  ದಾಖಲು ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಬಚ್ಚನ್ ಬಚಾವೋ ಆಂದೋಲನ ಸಂಸ್ಥೆಯ ರಾಜ್ಯ ಸಂಯೋಜಕ   ಬಿನುವರ್ಗೀಸ್, ಕಾರ್ಮಿಕ ನಿರೀಕ್ಷಕ   ಸ್ವಾಮಿ ಎಂ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ , ಎಚ್. ಬಿ. ಪ್ರಭಾಕರ್   ಪೇಟೆ ವೃತ್ತದ ಡೇಟಾ ಎಂಟ್ರಿ ಆಪರೇಟರ್ ಸಂತೋಷ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಜರಿದ್ದರು.

You may also like

Leave a Comment