ಮಂಡ್ಯ :- ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮದ್ದೂರು ತಾಲೂಕು ನಿಲುವಾಗಿಲು ಕೋಡಿಹಳ್ಳಿ ಗ್ರಾಮದ ವೆಂಕಟೇಶ್ ರ ಪತ್ನಿ ಸುಧಾರಾಣಿ ಬಸ್ ಹತ್ತುವ ವೇಳೆ ನೂರಕ್ಕೂ ಹೆಚ್ಚು ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 18500 ರೂ ನಗದು ಹಣವನ್ನು ಕಳ್ಳರು ದೋಚಿದ್ದಾರೆ.
ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಲು ಸೋಮವಾರ ಸಂಜೆ 4:45 ಸಮಯದಲ್ಲಿ ಜನಜಂಗುಳಿಯಲ್ಲಿ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗ್ ನಲ್ಲಿ ಇರಿಸಿದ್ದ ಆಭರಣ ನಗದನ್ನು ಮಹಿಳೆಯ ಗಮನಕ್ಕೆ ಬಾರದಂತೆ ಕಳವು ಮಾಡಲಾಗಿದೆ.
36 ಗ್ರಾಂ ತೂಕದ ಚಿನ್ನದ ಸರ, 12 ಗ್ರಾಂ ಸರ, 29 ಗ್ರಾಂ ತೂಕದ ಮೂರು ಜೊತೆ ಕಿವಿಓಲೆ, 15 ಗ್ರಾಂ ತೂಕದ ಮೂರು ಉಂಗುರ, 11 ಗ್ರಾಂ ನ ಕಿವಿ ಮಾಟಿ ಒಟ್ಟಾರೆ 103 ಗ್ರಾಂ ತೂಕದ ಆಭರಣಗಳು ಕಳವು ಆಗಿದ್ದು, ಐದು ವರ್ಷಗಳ ಹಿಂದೆ ಚಿನ್ನದ ಆಭರಣಗಳನ್ನು ಮಾಡಿಸಿದ್ದು ಇವುಗಳ ಬೆಲೆ 6.18 ಲಕ್ಷ ಎಂದು ಅಂದಾಜಿಸಲಾಗಿದೆ, ಆಭರಣದ ಜೊತೆಗೆ 18500ರೂ ಹಣವನ್ನು ಸಹ ಕಳ್ಳರು ದೋಚಿದ್ದಾರೆ.
ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು,ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಮಂಡ್ಯ I ಬಸ್ ಹತ್ತುವಾಗ ಮಹಿಳೆ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು
324
previous post

