Home ಜಿಲ್ಲೆವಾಟಾಳ್ ನಾಗರಾಜ್ ರನ್ನು ಅವಮಾನಿಸಿದ ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಆಗ್ರಹ

ವಾಟಾಳ್ ನಾಗರಾಜ್ ರನ್ನು ಅವಮಾನಿಸಿದ ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಆಗ್ರಹ

by M S MURTHY

ಮಂಡ್ಯ :- ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ರನ್ನು ಅವಮಾನಿಸಿರುವ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ರನ್ನು ಅಯೋಗ್ಯ ನಿಂದಿಸಿ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ತುಳಿದು ಅವಮಾನಿಸಿರುವುದು ನಾಡಿನ ಕನ್ನಡ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1963ರಲ್ಲಿ ಬೆಂಗಳೂರುbಮಹಾನಗರ ಪಾಲಿಕೆ ಸದಸ್ಯರಾಗಿ 1967 ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ ಹಿರಿಯ ಹೋರಾಟಗಾರ ವಾಟಳ್ ನಾಗರಾಜ್, ಕನ್ನಡ ನಾಡಿನ ಉದ್ದಗಲಕ್ಕೂ ಅಖಂಡ ಕರ್ನಾಟಕ ಒಗ್ಗೂಡಿಸಲು ಬಿಡುವಿಲ್ಲದ ಸಂದರ್ಭದಲ್ಲೂ ವಿನೂತನ, ವಿಶಿಷ್ಟ ಹೋರಾಟಗಳನ್ನು ಮಾಡಿದ್ದಾರೆ,ಸದನಗಳಲ್ಲೂ ಹೋರಾಟ ಮಾಡಿ ನಾಡಿನ ಅಸ್ಮಿತೆ ಗಾಗಿ ಕಳೆದ ಆರೇಳು ದಶಕದಿಂದ ಹೋರಾಟವನ್ನು ಮೈಗೂಡಿಸಿಕೊಂಡು ಬಂದಿರುವ ಕನ್ನಡ ನಾಡಿನ ಹೋರಾಟಗಾರರ ಮಾಣಿಕ್ಯ ವಾಟಾಳ್ ನಾಗರಾಜ್‌ ರವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಪ್ರತಿಭಟನಾ ಕಾರರು ಖಂಡಿಸಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಬಂಧಿಸಬೇಕು ಕಾನೂನು ಕ್ರಮ ಕೈಗೊಳ್ಳಬೇಕು ಹಾಗೊಮ್ಮೆ ಪೊಲೀಸರು ನಿರ್ಲಕ್ಷ್ಯ ವಹಿಸಿ ಬಂದಿಸದಿದ್ದರೆ ಎಲ್ಲೆಡೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಕನ್ನಡಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ನೇತೃತ್ವ ವಹಿಸಿದ್ದರು

You may also like

Leave a Comment