Home ಅಪರಾಧಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 26 ಲಕ್ಷ ದರೋಡೆ

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 26 ಲಕ್ಷ ದರೋಡೆ

by M S MURTHY

ಮದ್ದೂರು :- ಬೆಂಗಳೂರು ಮೈಸೂರು ಹೆದ್ದಾರಿಯ ಪ್ಲೇ ಓವರ್ ನಲ್ಲಿ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ 26 ಲಕ್ಷ ನಗದು ದೋಚಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ..
ಬೆಂಗಳೂರಿನ ಫಿನೋ ಕಂಪನಿಯ ಉದ್ಯೋಗಿ ಗೋವಿಂದ ರಾಜು ಕಾರಿನಲ್ಲಿ ಹೆದ್ದಾರಿಯ ಚನ್ನೇಗೌಡನ ದೊಡ್ಡಿ ಪ್ಲೇ ಓವರ್ ನಲ್ಲಿ ಹೋಗುತ್ತಿದ್ದಾಗ ಐದಾರು ಮಂದಿ ಗುಂಪು ಕಾರನ್ನು ಅಡ್ಡಗಟ್ಟಿ ಹಣ ದೋಚಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಕಡವಿನ ಹೊಸಳ್ಳಿ ಗ್ರಾಮದ ಗೋವಿಂದರಾಜು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ನ ಮಾದಪಟ್ಟಣದಲ್ಲಿ ವಾಸವಿದ್ದು ಪಿನೋ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು, ಪ್ರತಿನಿತ್ಯ ಮೈಸೂರಿನ ಹಿಟಾಚಿ ಕಂಪನಿಯಲ್ಲಿ ಹಣ ತೆಗೆದುಕೊಂಡು ಬೆಂಗಳೂರಿನ ಪಿನೋ ಕಂಪನಿಯ ಶಾಖೆಗಳಿಗೆ ಕಟ್ಟುತ್ತಿದ್ದರು, ಅದರಂತೆ ಶುಕ್ರವಾರ ಸಂಜೆ ಹಿಟಾಚಿ ಕಂಪನಿಯಲ್ಲಿ 26 ಲಕ್ಷ ಪಡೆದು ಕಾರಿನ ( ka -59 ಎಂ -1359 ) ಡಿಕ್ಕಿಯಲ್ಲಿ ಹಾಕಿಕೊಂಡು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತೆರಳುತ್ತಿದ್ದರು,
ಚನ್ನೇಗೌಡನ ದೊಡ್ಡಿ ಪ್ಲೇ ಓವರ್ ನಲ್ಲಿ ಹೋಗುತ್ತಿದ್ದಾಗ ಇನ್ನೋವಾ ಕಾರಿನಲ್ಲಿ ( ಕೆಎ -19 ಪಿ-3958) -ಹಿಂಬಾಲಿಸಿ ಬಂದ ಐದಾರು ಮಂದಿ ಇದ್ದ ಕಳ್ಳರ ಗುಂಪು ಕಾರು ಅಡ್ಡಗಟ್ಟಿ ಬೆದರಿಸಿ ಕಾರಿನ ಡಿಕ್ಕಿಯಲ್ಲಿದ್ದ 26 ಲಕ್ಷ ರೂ ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಮದ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

You may also like

Leave a Comment