ಪಾಂಡವಪುರ: ತಾಲೂಕಿನ ಜೆಡಿಎಸ್ ಮುಖಂಡ ಹಾಗೂ ವಕೀಲ ಕಣಿವೆ ಯೋಗೇಶ್ (5೦) ಅವರು ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾದಲ್ಲಿ ದುರ್ಮರಣಕ್ಕೀಡಾದರು.
ಕೆ.ಆರ್.ಪೇಟೆ ಕಡೆಯಿಂದ ಪಾಂಡವಪುರಕ್ಕೆ ಕಣಿವೆ ಯೋಗೇಶ್ ಪ್ರಯಾಣಿಸುತ್ತಿದ್ದ ಕಾರಿಗೆ ಎದುರು ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಕಣಿವೆ ಯೋಗೇಶ್ ಸ್ಥಳದಲ್ಲೇ ಕೊನೆಯುಸಿರೆಳೆದರು.
ಟಿಎಪಿಸಿಎಂಎಸ್‌ನ ಮಾಜಿ ನಿರ್ದೇಶಕರೂ ಆದ ಕಣಿವೆ ಯೋಗೇಶ್ ಅವರು ಈಚೆಗೆ ನಡೆದಿದ್ದ ಪಾಂಡವಪುರ ತಾಲ್ಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಜೆಡಿಎಸ್ ಪಕ್ಷದಲ್ಲಿ ದಲಿತ ಸಮುದಾಯದ ಪ್ರಭಾವಿ ಮುಖಂಡ ಎನಿಸಿದ್ದರು.
ವರ್ಷದ ಹಿಂದಷ್ಟೇ ಪುತ್ರಿ ಮತ್ತು ತಂದೆಯನ್ನು ಕಳೆದುಕೊಂಡಿದ್ದ ಕಣಿವೆ ಯೋಗೇಶ್ ಬಾಳಿನಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಪಾಂಡವಪುರ ತಾಲ್ಲೂಕಿನ ಕಣಿವೆ ಗ್ರಾಮದಲ್ಲಿ ನಾಳೆ(ಮೇ 19) ಅಂತ್ಯಕ್ರಿಯೆ ನೆರವೇರಲಿದೆ. ಕಣಿವೆ ಯೋಗೇಶ್ ನಿಧನಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ರಸ್ತೆ ಅಪಘಾತ : ಜೆಡಿಎಸ್ ಮುಖಂಡ ಕಣಿವೆ ಯೋಗೇಶ್ ದುರ್ಮರಣ
322
previous post

