Home ಜಿಲ್ಲೆಬೀದರ್ ನ ಕ್ರೀಡಾ ವಿದ್ಯಾರ್ಥಿ ಅತ್ಯಾಚಾರ,ಕೊಲೆ ಪ್ರಕರಣ : ವಿಶೇಷ ತನಿಖಾ ತಂಡ ರಚಿಸಲು ಆಗ್ರಹಿಸಿ ಕದಸಂಸ ಪ್ರತಿಭಟನೆ

ಬೀದರ್ ನ ಕ್ರೀಡಾ ವಿದ್ಯಾರ್ಥಿ ಅತ್ಯಾಚಾರ,ಕೊಲೆ ಪ್ರಕರಣ : ವಿಶೇಷ ತನಿಖಾ ತಂಡ ರಚಿಸಲು ಆಗ್ರಹಿಸಿ ಕದಸಂಸ ಪ್ರತಿಭಟನೆ

by M S MURTHY

ಮಂಡ್ಯ : ಬೀದರ್ ಜಿಲ್ಲೆಯ ಕ್ರೀಡಾ ವಿದ್ಯಾರ್ಥಿನಿ ಅತ್ಯಾಚಾರ,ಕೊಲೆ ಪ್ರಕರಣ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಸಮಿತಿಯ ಕಾರ್ಯಕರ್ತರು ಬೀದರ್ ಜಿಲ್ಲೆಯ ಬಿಳಕುಣಿಯಲ್ಲಿ ಕ್ರೀಡಾ ವಿದ್ಯಾರ್ಥಿನಿಯನ್ನು  ತರಬೇತುದಾರ ಲಖನ್ ಅತ್ಯಾಚಾರ ಎಸಗಿ ಕೊಲೆಗ್ಯೆದಿದ್ದು, ಶಾಸಕರೊಬ್ಬರ ಚಿತಾವಣೆಯಿಂದ ಪ್ರಕರಣವನ್ನು ಜಿಲ್ಲಾಡಳಿತವೇ ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಬೇಲಿಯೇ ಎದ್ದು ಹೊಲ ಮೇದಂತಾಗಿದೆ ಎಂದು ಕಿಡಿಕಾರಿದರು.
ದಲಿತ ಸಮುದಾಯದ ಅಪ್ರಾಪ್ತ ಬಾಲಕಿ ಕಬ್ಬಡ್ಡಿ ಮತ್ತು ಕುಸ್ತಿಪಟುವಾಗಿದ್ದು, ತರಬೇತುದಾರ ಲಖನ್ ಬಳಿ ತರಬೇತಿ ಪಡೆಯುತ್ತಿದ್ದಳು, 2024 ರಿಂದ ತರಬೇತಿ ನೆಪದಲ್ಲಿ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದು, ತರಬೇತಿ ಶುಲ್ಕವಾಗಿ 1.30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದನು, 60 ಸಾವಿರ ನೀಡಲಾಗಿತ್ತು, ಉಳಿಕೆ ಹಣಕ್ಕೆ ಒತ್ತಡ ಹಾಕಿದ್ದಾಗ ಬಾಲಕಿ ಏಪ್ರಿಲ್ ನಲ್ಲಿ ಮನೆಗೆ ಮರಳಿದ್ದಳು ಆದರೆ ಮೇ 8 ರಂದು ಬಾಲಕಿಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ. ಇಷ್ಟೆಲ್ಲ ಮಾಹಿತಿ ಇದ್ದರೂ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದು, ವಿರೋಧ ಹೆಚ್ಚಾದಾಗ ಆತ್ಮಹತ್ಯೆಗೆ ಪ್ರಚೋದನೆ ಎಂದು ದಾಖಲಿಸಿಕೊಂಡಿದ್ದಾರೆ ಇದಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಿ ಸಂಧಾನ ನಡೆಸುವ ಪ್ರಯತ್ನ ಮಾಡಿರುವುದನ್ನು ನೋಡಿದರೆ ಲಖನ್ ಸ್ವಜಾತಿಯ ಸ್ಥಳೀಯ ಶಾಸಕರ ಕೈವಾಡ ಇರುವುದು ಕಂಡು ಬಂದಿದೆ ಎಂದು ದೂರಿದರು
.ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲಾಗದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ದಲಿತರ ಮಾನ-ಪ್ರಾಣ- ಆಸ್ತಿಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ, ಈ ಕೂಡಲೇ ಸರ್ಕಾರ ಎಚ್ಚೆತ್ತು ಅಪ್ರಾಪ್ತ ಕ್ರೀಡಾ ವಿಧ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಎಸ್.ಐ.ಟಿ ಗೆ ವಹಿಸಿ, ತಪ್ಪಿತಸ್ತ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.ದಲಿತರ ಮಾನ-ಪ್ರಾಣ- ಆಸ್ತಿ ರಕ್ಷಣೆಗೆ ಮುಂದಾಗಬೇಕು, ಪ್ರಕರಣವನ್ನು ದಿಕ್ಕು ತಪ್ಪಿಸಲು ಶಾಸಕರೊಬ್ಬರ ತಾಳಕ್ಕೆ ಕುಣಿಯುತ್ತಿರುವ ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು, ಆರೋಪಿ ಲಖನ್ ವಿರುದ್ದ ಪೋಕ್ಲೋ, ಅತ್ಯಾಚಾರ,ಕೊಲೆ, ಅಪಹರಣ, ಹಾಗೂ ಎಸ್ ಸಿ ಎಸ್ ಟಿ ದೌರ್ಜನ್ಯಕಾಯ್ದೆಯಡಿ ಪ್ರಕರಣ ದಾಖಲಿಸಬೇಕು, ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ನೌಕರಿ ಮತ್ತು ಸಮರ್ಪಕ ಪುನರ್ ವಸತಿ ಹಾಗೂ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ,ಮೈಸೂರು ವಿಭಾಗೀಯ ಸಂಚಾಲಕ ಕೆಎಂ ಅನಿಲ್ ಕುಮಾರ್, ಬಿ. ಆನಂದ್, ಸುಶ್ಮಿತಾ ಜಿ ಹೊಸಳ್ಳಿ,ಸುಧಾ ಶ್ರೀಕಂಠು,ಮುತ್ತರಾಜು ನಗರಕೆರೆ, ಕರಿಯಪ್ಪ ಮೇಳಾಪುರ,ಸ್ವಾಮಿ ಎಲೆಚಾಕನಹಳ್ಳಿ, ಪುಟ್ಟಲಿಂಗಯ್ಯ,ವಿಮಲಾ ನಂದೀಶ್ ನೇತೃತ್ವ ವಹಿಸಿದ್ದರು

You may also like

Leave a Comment