ಮದ್ದೂರು :- ತಾಲೂಕಿನ ಕೆ ಹೊನ್ನಲಗೆರೆ ಬಳಿ ಯುವಕನ ಕತ್ತು ಸೀಳಿ ಕೊಲೆ ಮಾಡಿದ್ದ ಆರೋಪಿಗಳನ್ನು ಮದ್ದೂರು ಪೊಲೀಸ್ ಠಾಣೆಯ ಪೊಲೀಸರು ಬಂದಿಸಿದ್ದಾರೆ
ಅಜ್ಜಹಳ್ಳಿ ಗ್ರಾಮದ ಚಾಲಕ ನಿಶಾಂತ ಎ.ವಿ, ಚಿಕ್ಕ ದೊಡ್ಡಿ ಗ್ರಾಮದ ರವಿ ಸಿ.ಡಿ @ ಕುಳ್ಳ ಮತ್ತು ಅಜ್ಜ ಹಳ್ಳಿಯ ಕಾರ್ತಿಕ್ ಕೆ.ಸಿ ಬಂಧಿತ ಆರೋಪಿಗಳಾಗಿದ್ದಾರೆ.
ಚುಂಚಗಳ್ಳಿ ಗ್ರಾಮದ ಸುನಿಲ್ ನನ್ನು ಮೂವರು ಕಳೆದ ಮೇ 19 ರಂದು ಕೊಲೆ ಮಾಡಿ ಪರಾರಿಯಾಗಿದ್ದರು.
ಕೆ.ಹೊನ್ನಲಗೆರೆ ಗ್ರಾಮದ ದೀಪ ಬಾರ್ ನಲ್ಲಿ ಸುನೀಲ್ ಸಿ.ಕೆ. ಸ್ನೇಹಿತರಾದ ಸತೀಶ, ಸಿದ್ದರಾಜು ಮೂವರು ಜೊತೆಗೂಡಿ ಮದ್ಯಪಾನ ಮಾಡುತ್ತಿದ್ದಾಗ ಅದೇ ಬಾರ್ಗೆ ಮದ್ಯಪಾನ ಮಾಡಲು ಬಂದಿದ್ದ ಅಜ್ಜಹಳ್ಳಿ ಗ್ರಾಮದ ನಿಶಾಂತ್ ಬಾರ್ ಕ್ಯಾಷಿಯರ್ಗೆ ಬಾಸ್, ಬಾಸ್ ಎಂದು ಕರೆಯುತ್ತಿದ್ದರಿಂದ ಸುನೀಲ್ ಅವನು ಯಾವ ಸೀಮೆ ಬಾಸ್ ಎಂದು ಹೇಳಿದ ವಿಚಾರವಾಗಿ ಮಾತಿಗೆ ಮಾತು ಬೆಳೆದು, ನಿಶಾಂತ, ಕಾರ್ತಿಕ್, ರವಿ ಮೂವರು ಸುನೀಲ್ ಜೊತೆ ಜಗಳ ಮಾಡಿ, ಬಾರ್ ನಿಂದ ಹೊರಗೆ ಬಾ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿ, ಅವರು ಬಂದಿದ್ದ ಕಾರಿನಲ್ಲಿ ಹೊರಟು ಹೋಗಿದ್ದು, ಸ್ವಲ್ಪ ಸಮಯದ ನಂತರ ರಾಯಲ್ ಎನ್ಫೀಲ್ಡ್ ಬೈಕಿನಲ್ಲಿ ಸುನೀಲ್, ಸಿದ್ದರಾಜು, ಸತೀಶ ಅದೇ ರಸ್ತೆಯಲ್ಲಿ ಊರಿಗೆ ಹೋಗುತ್ತಿದ್ದಾಗ, ಕೆ.ಹೊನ್ನಲಗೆರೆ ಚೌಡೇಶ್ವರಿ ಸಮುಧಾಯ ಭವನ ಮುಂಭಾಗ ಬೈಕ್ ಅನ್ನು ಅಡ್ಡಗಟ್ಟಿ, ಲಾಂಗ್ನಿಂದ ಸುನೀಲ್ ಮೇಲೆ ಹಲ್ಲೆ ಮಾಡಿದ್ದು, ತಕ್ಷಣ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸುನಿಲ್ ಸಾವನ್ನಪ್ಪಿದ್ದನು
ಕೊಲೆ ಪ್ರಕರಣದ ಬಗ್ಗೆ ಮೃತನ ಸಹೋದರ ಅನಿಲ್ ಸಿ.ಕೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು ಆರೋಪಿಗಳ ಪತ್ತೆಗೆ ತನಿಖಾ ತಂಡವು ಶೋಧ ನಡೆಸಿದ್ದರು, ಆರೋಪಿಗಳು ಮಳವಳ್ಳಿಯಿಂದ ಕೊಳ್ಳೇಗಾಲದ ಕಡೆಗೆ ತರುಳುತ್ತಿದ್ದಾಗ ನೂರಾರುತ್ಯಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

