ಮಂಡ್ಯ :- ಕೇಂದ್ರ,ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಆಳುವ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದ ರೈತರು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಕೇಂದ್ರ ಸರ್ಕಾರವು ರಸಗೊಬ್ಬರ ಬೆಲೆ ಹೆಚ್ಚಳ ವಾಪಸ್ ಪಡೆದು ಸಹಾಯಧನ ಹೆಚ್ಚಿಸಿ ರಿಯಾಯಿತಿ ದರದಲ್ಲಿ ರೈತರಿಗೆ ರಸಗೊಬ್ಬರ ಪೂರೈಸಬೇಕು,ಲಿಂಕ್ ಪದ್ಧತಿ ಕೈ ಬಿಟ್ಟು ರೈತರು ತಮಗೆ ಬೇಕಾದ ಗೊಬ್ಬರ ಕೇಳಿದಾಗ ಬೇರೆ ಗೊಬ್ಬರ ಅಥವಾ ಕೀಟನಾಶಕ ತೆಗೆದುಕೊಳ್ಳುವಂತೆ ಮಾರಾಟಗಾರರು ಒತ್ತಡ ಹಾಕುವುದನ್ನು ಕೈಬಿಡಬೇಕು, ಅದೇ ರೀತಿ ರೈತರಿಗೆ ಅವಶ್ಯಕವಾದ ರಸಗೊಬ್ಬರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ನಿರಂತರ ಹೆಚ್ಚಳವಾಗುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಡಿಮೆಗೊಳಿಸಿ ಕೃಷಿ ಚಟುವಟಿಕೆಗಾಗಿ ರೈತರಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸಬೇಕು, ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸಿ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು, ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರೈತ ವಿರೋಧಿ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ ಎಲ್ ಕೆಂಪು ಗೌಡ, ಕೆ ಟಿ ಗೋವಿಂದೇಗೌಡ ಬೋರಾಪುರ ಶಂಕರಗೌಡ, ರವಿಕುಮಾರ್ ಎಸ್ ಕೆ, ಎಂ ಎಸ್ ವಿಜಯ್ ಕುಮಾರ್, ಪಿ ನಾಗರಾಜು, ಲತಾ ಶಂಕರ್,ರೂಪ, ಎಸ್ಎಂ ಸಿದ್ದೇಗೌಡ, ವೈ ಪಿ ಮಂಜುನಾಥ, ಜವರೇಗೌಡ ಗೋಪಾಲಪುರ ನೇತೃತ್ವ ವಹಿಸಿದ್ದರು.
ಕೇಂದ್ರ,ರಾಜ್ಯ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ
423
previous post

