ಮಂಡ್ಯ :- ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂಬ ಬೆನ್ನಲ್ಲೇ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ನೀಡಬೇಕು ಎಂದು ಒತ್ತಾಯಿಸಿ ದಲಿತ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪಂಜು ಹೊತ್ತಿಸಿ ದಲಿತರ ಬಾಳಿಗೆ ಬೆಳಕಾಗಿ ಇಲ್ಲದಿದ್ದರೆ ಇದೇ ಬೆಂಕಿ ಕಾಂಗ್ರೆಸ್ ಅನ್ನು ಸುಡಲಿದೆ ಎಂದು ಎಚ್ಚರಿಸಿ ಬೇಕೇ ಬೇಕು ದಲಿತ ಸಿಎಂ ಬೇಕೇ ಬೇಕು ಎಂದು ಘೋಷಣೆ ಕೂಗಿದರು.
ಕರ್ನಾಟಕದಲ್ಲಿ ದಲಿತ ಸಮುದಾಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ, ಕಾಂಗ್ರೆಸ್ ಕೂಡ ದಲಿತರನ್ನ ಮತ ಬ್ಯಾಂಕ್ ಆಗಿ ಮಾಡಿಕೊಂಡಿದೆ, ದಲಿತರ ಬೆಂಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಆದರೆ ಕಳೆದ 70 ವರ್ಷದಿಂದ ದಲಿತರನ್ನ ಮುಖ್ಯಮಂತ್ರಿಯನ್ನಾಗಿ ಮಾಡದಿರುವುದು ದುರ್ದೈವ, ಅಂಬೇಡ್ಕರ್ ಮತ್ತು ಸಂವಿಧಾನದ ಪ್ರತಿಯನ್ನು ಹೊತ್ತು ತಿರುಗುವ ಕಾಂಗ್ರೆಸ್ ವರಿಷ್ಠರು ದಲಿತರಿಗೆ ಏಕೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ತಪ್ಪಿತು, ಜಿ ಪರಮೇಶ್ವರ್ ಗೂ ಅವಕಾಶ ಸಿಗಲಿಲ್ಲ , ಕಾಂಗ್ರೆಸ್ ಪಕ್ಷ ಗೆದ್ದಾಗಲೆಲ್ಲಾ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ, ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಹಾಗೊಮ್ಮೆ ಅವರು ರಾಜೀನಾಮೆ ನೀಡಿದರೆ ದಲಿತರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಈಗಲಾದರೂ ಎಚ್ಚೆತ್ತು ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ಎಂ ವಿ ಕೃಷ್ಣ, ಕರ್ನಾಟಕ ಸಂವಿಧಾನ ಸೇನೆಯ ನರಸಿಂಹಮೂರ್ತಿ, ಹಾಲಹಳ್ಳಿ ಮುಕುಂದಪ್ಪ, ನಿರಂಜನ ಬುದ್ಧ, ಚನ್ನಕೇಶವ.ಟಿ.ಡಿ.ನಾಗರಾಜು.ಹೆಚ್.ಪಿ. ರವಿಶಂಕರ್.ಅಜಯ್ .ಜಿ.ವಿ..ಅಭಿಜೀತ್..ಪ್ರದೀಪ್.ಟಿ.ಡಿ.ಬಸವರಾಜು.ಪ್ರಮೋದ್.ಧನುಷ್.ಚಂದು ಇತರರಿದ್ದರು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ
387
previous post

