Home ಅಪರಾಧಕಾರಿನಲ್ಲಿ ಸಿಕ್ಕಿತು 111 ಕೆಜಿ ಗಾಂಜಾ

ಕಾರಿನಲ್ಲಿ ಸಿಕ್ಕಿತು 111 ಕೆಜಿ ಗಾಂಜಾ

by M S MURTHY

ಮಂಡ್ಯ :- ಅಕ್ರಮ ಮಾರಾಟ ಮಾಡಲು ನೂರಾರು ಕೆ ಜಿ ಗಾಂಜಾ ಹೊತ್ತು ಕಾರಿನಲ್ಲಿ ಹೊರಟಿದ್ದ ಆಂಧ್ರಪ್ರದೇಶದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ತುಮಕೂರು – ಮದ್ದೂರು ರಾಜ್ಯ ಹೆದ್ದಾರಿ ಮಾರ್ಗದ ಕೆಸ್ತೂರಿನಲ್ಲಿ ಆರೋಪಿಯನ್ನು 111 ಕೆಜಿ ಗಾಂಜಾ ಸಮೇತ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶದ ಮದನಪಲ್ಲಿಯ ಶ್ರೀನಿವಾಸ್ ಗಾಂಜಾ ಸಾಗಾಣಿಕೆಯಲ್ಲಿ ಪೊಲೀಸರ ಸೆರೆಯಾಗಿದ್ದಾನೆ.
ಕಾರಿನ ಹಿಂಬದಿ ಸೀಟಿನಲ್ಲಿ ಎರಡು ಚೀಲ ಹಾಗೂ ಡಿಕ್ಕಿಯಲ್ಲಿ ಮೂರು ಚೀಲದಲ್ಲಿ ಗಾಂಜಾವನ್ನು ಅಕ್ರಮವಾಗಿ ಶೇಖರಿಸಿ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದಾಗ ಕೆಸ್ತೂರು ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ ಜೆ ಶೋಭಾ ರಾಣಿ ಕುಣಿಗಲ್ ಮಾರ್ಗದಿಂದ ಮದ್ದೂರು ಕಡೆಗೆ ಸಿಲ್ವರ್ ಬಣ್ಣದ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿಯು ಮಳವಳ್ಳಿ ಡಿ ವೈ ಎಸ್ ಪಿ ಯಶವಂತ್ ಕುಮಾರ್ ರಿಗೆ ಬಂದಿದ್ದು ಅದರಂತೆ ಎಚ್ಚೆತ್ತ ಅವರು ಕೆಸ್ತೂರು ಠಾಣೆಗೆ ಮಾಹಿತಿ ನೀಡಿದ್ದು ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಸ್ತೂರಿನಲ್ಲಿ ವಾಹನಗಳ ತಪಾಸಣೆ ನಡೆಸಿ ಅದೇ ಮಾರ್ಗದಲ್ಲಿ ಮದ್ದೂರು ಕಡೆಗೆ ಹೋಗುತ್ತಿದ್ದ ಮಾರುತಿ ಸುಜುಕಿ ಸಿಲ್ವರ್ ಬಣ್ಣದ ಕಾರು ( ಕೆ ಎ 03-ಎಂ ಪಿ 1635 ) ಪರಿಶೀಲಿಸಿದಾಗ ಅದರಲ್ಲಿ ಹಿಂದಿನ ಸೀಟಿನಲ್ಲಿ 2 ಪ್ಲಾಸ್ಟಿಕ್ ಚೀಲ, ಡಿಕ್ಕಿಯಲ್ಲಿ 3 ಪ್ಲಾಸ್ಟಿಕ್ ಚೀಲಗಳು ಇದ್ದು, 4 ಪ್ಲಾಸ್ಟಿಕ್ ಚೀಲಗಳಲ್ಲಿ ತಲಾ 10 ಪ್ಲಾಸ್ಟಿಕ್ ಪಾಕೆಟ್‌ಗಳಲ್ಲಿ ಹಾಗೂ ಮತ್ತೊಂದು ಪ್ಲಾಸ್ಟಿಕ್ ಚೀಲದಲ್ಲಿ 11 ಪ್ಲಾಸ್ಟಿಕ್ ಪಾಕೆಟ್ ಗಳಲ್ಲಿ ಗಾಂಜಾ ಇದ್ದು ಒಟ್ಟಾರೆ  111 ಕೆ.ಜಿ, 04 ಗ್ರಾಂ ಗಾಂಜಾ ಮತ್ತು ಕಾರನ್ನು ವಶಕ್ಕೆ ಪಡೆದು ಆರೋಪಿ ಶ್ರೀನಿವಾಸ್ ನನ್ನ ಬಂಧಿಸಲಾಗಿದೆ ಎಂದರು.

You may also like

Leave a Comment