Home ಅಪರಾಧಕೆ.ಶೆಟ್ಟಹಳ್ಳಿಯಲ್ಲಿ ಯುವಕನ ಕೊಲೆ

ಕೆ.ಶೆಟ್ಟಹಳ್ಳಿಯಲ್ಲಿ ಯುವಕನ ಕೊಲೆ

by M S MURTHY

ಕೆ ಎಂ ದೊಡ್ಡಿ :- ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಎದುರು ಮನೆ ವ್ಯಕ್ತಿಯೇ ಕೊಲೆ ಮಾಡಿರುವ ಘಟನೆ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ
ಗ್ರಾಮದ ಗಣೇಶ್ ( 45 ) ಎಂಬುವವನೇ ಕೋಲೆಯಾದ ದುರ್ದೈವಿ.
ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಸಂಜೆ ವೇಳೆ ಮನೆ ಸಮೀಪದ ಅಂಗಡಿ ಬಳಿ ಕುಳಿತಿದ್ದlಗಣೇಶ್ ಜೊತೆ. ಬೆಳ್ತಂಗಡಿಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿರುವ ಜಯಚಂದ್ರ ಎಂಬುವರಿಗೂ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ,ನಂತರ ಮನೆ ತನಕ ಎಳೆದೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ,ತಲೆಗೆ ಪೆಟ್ಟು ಬಿದ್ದ ಕಾರಣ ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದೋಯ್ದು ಚಿಕೆತ್ಸೆ ಕೊಡಿಸಿ ಮನೆಗೆ ಕರೆ ತಂದಿದ್ದಾರೆ,
ತಡ ರಾತ್ರಿ ಸ್ಥಳೀಯರು ಪೊಲೀಸ್ 112 ನಂಬರ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಕ್ಕೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದು ತಿಳಿ ಹೇಳಿದ್ದಾರೆ.ಮಂಗಳವಾರ ಮುಂಜಾನೆ ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಗಣೇಶ್ ಮೃತ ಪಟ್ಟಿದ್ದು, ಕೊಲೆ ಆರೋಪಿ ಜಯಚಂದ್ರ ನಾಪತ್ತೆ ಆಗಿದ್ದಾನೆ.
ಈ ಸಂಬಂದ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕೃತ್ಯ ನಡೆದ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ಡಾ. ಶೋಭಾರಾಣಿ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶ್ವಂತ್ , ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ

You may also like

Leave a Comment