ಹಲಗೂರು : – ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಸ್ನೇಹಿತನನ್ನೇ ಬಿಯರ್ ಬಾಟಲ್ ನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ಹಲಗೂರಿನಲ್ಲಿ ನಡೆದಿದೆ.ಹಲಗೂರಿನ ಎಚ್.ಬಸಾಪುರ ಗ್ರಾಮದ ನಿವಾಸಿ ಮಂಜು ಆಲಿಯಾಸ್ ಕಾಶಿ (33) ಮೃತ ಯುವಕ.
ಬಾರ್ ಒಂದರಲ್ಲಿ ಜೊತೆಯಲ್ಲೇ ಮದ್ಯ ಸೇವಿಸಿದ ಮೂವರು ಸ್ನೇಹಿತರು ಬಾರ್ ಬಾಗಿಲು ಹಾಕಿದ ನಂತರ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಪಕ್ಕದಲ್ಲಿರುವ ಸೇತುವೆಯ ಬಳಿಯ ಖಾಲಿ ಜಾಗಕ್ಕೆ ತೆರಳಿದ್ದಾರೆ. ರಾತ್ರಿ 11 ಗಂಟೆಯ ಸಮಯದಲ್ಲಿ ಮೂವರು ಮಾತಾನಾಡುತ್ತಾ ಕುಳಿತಿದ್ದಾಗ ಮೂವರು ಸ್ನೇಹಿತರ ಮದ್ಯೆ, ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಸಿದ್ದರಾಜು ಮತ್ತು ಸಿದ್ದರಾಜು ಇಬ್ಬರು ಸೇರಿ ಮಂಜು ಅಲಿಯಾಸ್ ಕಾಶಿ ಕತ್ತಿನ ಭಾಗದಲ್ಲಿ ಕುಯ್ದು, ಹೊಟ್ಟೆಗೆ ಬಿಯರ್ ಬಾಟಲ್ ನಿಂದ ಬಲವಾಗಿ ಚುಚ್ಚಿದ್ದಾರೆ. ಮಂಜು ಸ್ಥಳದಲ್ಲೇ ಮೃತಪಟ್ಟಿದ್ದು, ಆರೋಪಿಗಳಾದ ಸಿದ್ದರಾಜು ಮತ್ತು ಸಿದ್ದರಾಜು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಷಯ ತಿಳಿದ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ.ಶೋಭರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್.ಶ್ರೀಧರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೊತೆಯಲ್ಲೇ ಕುಡಿದು ಸ್ನೇಹಿತನ ಹತ್ಯೆ
165
previous post

