Home ಅಪರಾಧಹೆದ್ದಾರಿಯಲ್ಲಿ ಶೂಟೌಟ್ : ಏಳು ಆರೋಪಿಗಳ ಬಂಧನ

ಹೆದ್ದಾರಿಯಲ್ಲಿ ಶೂಟೌಟ್ : ಏಳು ಆರೋಪಿಗಳ ಬಂಧನ

ಕಾರು, ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು

by M S MURTHY

ಮಂಡ್ಯ :- ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಆರೋಪಿಗಳನ್ನು ಬಂದಿಸಿದ್ದಾರೆ.
ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಮ್ಮಡಹಳ್ಳಿ ಗೇಟ್ ನ ಭಾರತ್ ಪೆಟ್ರೋಲ್ ಬಂಕ್ ಬಳಿ ಗುರುವಾರ ಮುಂಜಾನೆ ಕಾರಿನಲ್ಲಿ ಬಂದು ಗೂಡ್ಸ್ ವಾಹನ ಅಡ್ಡಗಟ್ಟಿ ಗುಂಡಿನ ದಾಳಿ ಮಾಡಲಾಗಿತ್ತು, ಪ್ರಕರಣ ನಡೆದ 24 ತಾಸಿನೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯದ ಅಶೋಕನಗರದ ನಿವಾಸಿ ವಿಶಾಲ್ ರಘು ಪುತ್ರ ರೋಹನ್ ಗೌಡ ಹೆಚ್‌ ವಿ, ಮರಿಗೌಡ ಬಡಾವಣೆಯ ತಮ್ಮಣ್ಣರ ಪುತ್ರ ಶಶಾಂಕ್, ದ್ವಾರಕಾ ನಗರದ ಕಲೀಲರ ಪುತ್ರ ಆಫಾನ್, ಕುವೆಂಪು ನಗರದ ಮಹಮ್ಮದ್ ಜಾಫರ್ ಪುತ್ರ ಮಹಮ್ಮದ್ ಉಮರ್, ವಿದ್ಯಾನಗರ ಜೋಸೆಪ್ ರ ಪುತ್ರ ನಿತಿನ್, ಸಚಿನ್ ಹಾಗೂ ಗಾಂಧಿನಗರದ ಮಹಮ್ಮದ್ ಅಬ್ಬಿ ಬುಲ್ಲ ರ ಪುತ್ರ ಮಹಮ್ಮದ್ ಅಬೂಬಕರ್ ಸಕಲೇನ್ ಬಂಧಿತ ಆರೋಪಿಗಳಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಪ್ಪು ಬಣ್ಣದ ಟೊಯೋಟಾ ಫಾರ್ಚುನರ್ ಕಾರು (ಕೆ ಎ 05 -ಎ ಆರ್ 8055 ) ಹಾಗೂ ಒಂದು ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ
ಬೆಂಗಳೂರಿನ ಎಸ್ ಆರ್ ನಗರದಲ್ಲಿರುವ ಸೂಪರ್ ಸ್ಪೀಡ್ ಸರ್ವಿಸ್ ಕೊರಿಯರ್ ನಲ್ಲಿ ಗೂಡ್ಸ್ ವಾಹನ ಚಾಲಕರಾಗಿ ಮೈಸೂರಿನ ಗೋಕುಲಂನ ಶಂಕರ್ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಜು.2 ರಂದು ರಾತ್ರಿ ಎರಡರ ಸಮಯದಲ್ಲಿ ಬೆಂಗಳೂರಿನ ಕೊರಿಯರ್ ಆಫೀಸ್ ನಿಂದ ಪಾರ್ಸಲ್ ತುಂಬಿದ್ದ ಗೂಡ್ಸ್ ವಾಹನ ( ಕೆ ಎ 01ಎ ಬಿ 1300 ) ಚಲಾಯಿಸಿಕೊಂಡು ಮೈಸೂರಿನತ್ತ ಹೊರಟಿದ್ದರು, ಬೆಳಗಿನ ಜಾವ ಸುಮಾರು 4-50 ರ ಸಮಯದಲ್ಲಿ ಅಮರಾವತಿ ಹೋಟೆಲ್ ಮುಂದೆ ಭಾರತ್ ಪೆಟ್ರೋಲ್ ಬಂಕ್ ಬಳಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ತೆರಳುತ್ತಿದ್ದಾಗ ಗೂಡ್ಸ್ ವಾಹನದ ಎಡಬದಿಯಿಂದ ಜೋರಾಗಿ ಹಾರನ್ ಮಾಡುತ್ತಾ ಓವರ್ ಟೇಕ್ ಮಾಡಿದ ಕಪ್ಪು ಬಣ್ಣದ ಫಾರ್ಚುನರ್ ಕಾರ್‌ನಲ್ಲಿದ್ದವರು ಚಾಲಕನನ್ನು ನಿಂದಿಸುತ್ತಾ ಗೂಡ್ಸ್ ವಾಹನ ತಡೆಗಟ್ಟಿದ್ದು ಇದೆ ವೇಳೆ ಚಾಲಕನ ಸೀಟಿನಲ್ಲಿದ್ದವನು ಶೂಟ್ ಮಾಡಿದ್ದನು. ಆನಂತರ ಎಲ್ಲರೂ ಕಾರಿನ ಸಮೇತ ಪರಾರಿಯಾಗಿದ್ದರು.ಗೂಡ್ಸ್ ವಾಹನದ ಚಾಲಕ ಮೈಸೂರಿನ ಕೋರಿಯರ್ ಆಫೀಸ್‌ಗೆ ಹೋಗಿ ಅನ್‌ ಲೋಡ್ ಮಾಡಿ ನಂತರ ಮಂಡ್ಯ ಗ್ರಾಮಾಂತರ ಠಾಣೆಗೆ ಬಂದು ದೂರು ಸಲ್ಲಿಸಿದ್ದರು.
ಪೋಲಿಸ್ ಇಲಾಖೆ ಎಚ್ಚೆತ್ತು ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ವಿ.ಜೆ. ಶೋಭಾರಾಣಿ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಸಿ.ಇ, ಮಂಡ್ಯ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ .ಲಕ್ಷ್ಮಿನಾರಾಯಣ ಪ್ರಸಾದ್ ನೇತೃತ್ವದಲ್ಲಿ ಮಂಡ್ಯ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಪ್ರಕಾಶ್ ಬಿ ಎಸ್ ಪ್ರೊಬೇಷನರಿ ಪೋಲಿಸ್ ಸಬ್ ಇನ್ ಸ್ಪೆಕ್ಟರ್ ಗಳಾದ ಕಾರ್ತಿಕ್, ಹನುಮಂತರೆಡ್ಡಿ, ಸಹಾಯಕ ಸಬ್ ಇನ್ ಸ್ಪೆಕ್ಟರ್ ಲಿಂಗರಾಜು, ಚಿಕ್ಕಯ್ಯ, l ಪೊಲೀಸ್ ಪೇದೆಗಳಾದ ರವಿ, ಮಹೇಶ, ಉಮರ್ ಅಹಮದ್ ಫಾರೂಕಿ, ಮಂಜುನಾಥ್, ವಿಶ್ವನಾಥ್, ಸಿದ್ದಾರ್ಥ, ಪ್ರಕಾಶ್ ಯರಗಟ್ಟಿ, ಕುಮಾರ್, ಮಹೇಶ, ಕಿರಣ್ ಭುಜಂಗ, ಮಂಜುನಾಥ್ ರವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು, ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಶೋಭ ರಾಣಿ ವಿ ಜೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like

Leave a Comment