ಮಂಡ್ಯ :- ರಾತ್ರಿ ಚೆನ್ನಾಗಿದ್ದ ಹಸುಗಳು ಮುಂಜಾನೆ ಪಶು ಆಹಾರ ಸೇವಿಸಿದ ನಂತರ ಸಾವನ್ನಪ್ಪಿರುವ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೋಮಶೇಖರ್ ರಿಗೆ ಸೇರಿದ ನಾಲ್ಕೈದು ಹಸುಗಳು ಸಾವನ್ನಪ್ಪಿದ್ದು ಇನ್ನಿತರ ಹಸುಗಳು ನೀತ್ರಾಣಗೊಂಡಿವೆ.
ಸೋಮಶೇಖರ್ ಹೈನುಗಾರಿಕೆಯನ್ನು ನಂಬಿ ಜೀವನ ಮಾಡುತ್ತಿದ್ದರು 15ಕ್ಕೂ ಹೆಚ್ಚು ಹಾಲು ಕರೆಯುವ ಹಸುಗಳನ್ನು ಸಾಕಾಣಿಕೆ ಮಾಡಿದ್ದರು,ಪ್ರತಿನಿತ್ಯ ಡೈರಿಗೆ 150 ಲೀಟರ್ ಹಾಲು ಹಾಕುತ್ತಿದ್ದರು.
ಬುಧವಾರ ಮುಂಜಾನೆ ಹಾಲು ಕರೆಯುವ ಮುನ್ನ ಎಲ್ಲಾ ಹಸುಗಳಿಗೆ ಮೇವು ಮತ್ತು ತಿಂಡಿ ನೀಡಿದ್ದರು, ಪಶು ಆಹಾರ ಭೂಸ ಜೊತೆ ಇನ್ನಿತರ ಆಹಾರ ನೀಡಿದ್ದರು ಆದರೆ ಸ್ವಲ್ಪ ಹೊತ್ತಿನಲ್ಲಿ ಅಸ್ವಸ್ಥಗೊಂಡ ನಾಲ್ಕೈದು ಹಸುಗಳು ಉಸಿರಾಟ ತೊಂದರೆ ಅನುಭವಿಸಿವೆ ಇದರಿಂದ ಎಚ್ಚೆತ್ತ ಮನೆಯವರು ತಕ್ಷಣ ಪಶುವೈದ್ಯಾಧಿಕಾರಿಗಳಿಗೆ ಕರೆ ಮಾಡಿದ್ದು ಅವರು ಬಂದು ಚಿಕಿತ್ಸೆ ನೀಡಿದರೂ ಸಹ ನಾಲ್ಕೈದು ಹಸುಗಳು ಸಾವನ್ನಪ್ಪಿವೆ.
ಪಶು ಆಹಾರದ ಜೊತೆ ಕೃಷಿಗೆ ಬಳಸುವ ರಸ ಗೊಬ್ಬರ ಬಳಕೆ ಮಾಡಿದ್ದರಿಂದ ಹಸುಗಳ ಸಾವನಪ್ಪಿವೆ ಎಂದು ಹೇಳಲಾಗಿದೆ, ಮುಂಜಾನೆ ವೇಳೆ ಗೊತ್ತಾಗದೆ ಪಶು ಆಹಾರಕ್ಕೆ ಯೂರಿಯಾ ರಸ ಗೊಬ್ಬರ ಮಿಶ್ರಣವಾಗಿದೆ ಆ ಹಿನ್ನೆಲೆಯಲ್ಲಿ ಹಸುಗಳ ಮಾರಣ ಹೋಮ ನಡೆದಿದೆ. ಬದುಕಿ ಉಳಿದಿರುವ ಐದಾರು ವರ್ಷಗಳಿಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ಮುಂದುವರೆಸಿದ್ದಾರೆ.
ಪ್ರತಿನಿತ್ಯ ಒಂದು ಅವಧಿಗೆ 10 ಲೀಟರ್ ಹೆಚ್ಚು ಹಾಲು ನೀಡುತ್ತಿದ್ದ ಹಸುಗಳು ಸಾವನ್ನಪ್ಪಿದ್ದು ಪ್ರತಿ ಹಸು 1 ಲಕ್ಷಕ್ಕೂ ಹೆಚ್ಚು ಬೆಲೆಬಾಳುತ್ತಿದ್ದವು, ದುರಂತದಲ್ಲಿ ಹಲವು ಹಸುಗಳ ಸಾವನ್ನಪ್ಪಿರುವುದರಿಂದ ಹೈನುಗಾರಿಕೆ ನಂಬಿ ಬದುಕುತ್ತಿದ್ದ ಕುಟುಂಬಕ್ಕೆ 10 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.